IPL 2024 Star Cricketers: ಹಲವು ದಿಗ್ಗಜರಿಗೆ ಈ ಬಾರಿ ಐಪಿಎಲ್‌ನಲ್ಲಿ ಆಡುವ ಅವಕಾಶ ಸಿಕ್ಕಿಲ್ಲ. ಇದೇ ವೇಳೆ  ಕೆಲವು ಆಟಗಾರರು ಮುಂದಿನ ಸೀಸನ್‌ಗೂ ಮುನ್ನ ನಿವೃತ್ತಿಯಾಗಬಹುದು ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ಚೆನ್ನೈ ಸೂಪರ್ ಕಿಂಗ್ಸ್‌ನ ನಾಯಕ ಮತ್ತು ತಂಡಕ್ಕೆ ಐದು ಟ್ರೋಫಿಗಳನ್ನು ಗೆದ್ದ ಮಹೇಂದ್ರ ಸಿಂಗ್ ಧೋನಿ ಅವರ ಕೊನೆಯ ಸೀಸನ್ ಆಗಿರಬಹುದು. ಐಪಿಎಲ್ 2024 ರಲ್ಲಿ, ಎಂಎಸ್ ಧೋನಿ 220.55 ಸ್ಟ್ರೈಕ್ ರೇಟ್‌ನಲ್ಲಿ 161 ರನ್ ಗಳಿಸಿದ್ದಾರೆ.


COMMERCIAL BREAK
SCROLL TO CONTINUE READING

ರಾಜಸ್ಥಾನ್ ರಾಯಲ್ಸ್ ನ ಹಿರಿಯ ಆಟಗಾರ ಆರ್ ಅಶ್ವಿನ್ ಕೂಡ ಮುಂದಿನ ಐಪಿಎಲ್‌ಗೆ ವಿದಾಯ ಹೇಳಬಹುದು. ಈ ಋತುವಿನಲ್ಲಿ ಅಶ್ವಿನ್ ಬ್ಯಾಟ್‌ನೊಂದಿಗೆ 86 ರನ್ ಗಳಿಸಿ, 15 ಪಂದ್ಯಗಳಲ್ಲಿ 9 ವಿಕೆಟ್ಗಳನ್ನು ಪಡೆದರು.


ಇದನ್ನೂ ಓದಿ-SRH Vs RR : 36ರನ್ ಗಳ ಅಂತರದಿಂದ ಗೆಲುವು ಸಾಧಿಸಿದ SRH, ಸೋತ ತಂಡದ ವಿರುದ್ಧ ಸೇಡು ತೀರಿಸಿಕೊಳ್ಳಲು ಫೈನಲ್ ಕಣಕ್ಕಿಳಿದ ಹೈದರಾಬಾದ್!!


ಈ ಬಾರಿ ಪಂಜಾಬ್ ಕಿಂಗ್ಸ್ ಪರ ಹೆಚ್ಚು ಆಡುವ ಅವಕಾಶ ಶಿಖರ್ ಧವನ್ ಗೆ ಸಿಗಲಿಲ್ಲ. ಈ ಋತುವಿನಲ್ಲಿ ಅವರು 5 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 30.40 ರ ಸರಾಸರಿಯಲ್ಲಿ 152 ರನ್ಗಳನ್ನು ಗಳಿಸಿದರು. ಈ ಸೀಸನ್ ಅವರ ಕೊನೆಯ ಸೀಸನ್ ಆಗಿರಬಹುದು ಎಂಬ ಊಹಾಪೋಹಗಳಿವೆ.


ಕೆಕೆಆರ್‌ನ ನಿತೀಶ್ ರಾಣಾ ಈ ಋತುವಿನಲ್ಲಿ ಕೇವಲ ಎರಡು ಬಾರಿ ಬ್ಯಾಟಿಂಗ್‌ಗೆ ಬಂದಿದ್ದರು. ನಿತೀಶ್ 2 ಪಂದ್ಯಗಳಲ್ಲಿ 42 ರನ್ ಗಳಿಸಿದ್ದರು. ಅಲ್ಲದೇ ಈ ವರ್ಷ ಡೇವಿಡ್ ವಾರ್ನರ್ ಕೂಡ ವಿಶೇಷ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಮುಂದಿನ ವರ್ಷ ಐಪಿಎಲ್‌ನಲ್ಲಿ ಅವರು ಕಾಣಿಸಿಕೊಳ್ಳುವುದಿಲ್ಲ ಎಂಬ ಊಹಾಪೋಹಗಳಿವೆ.


ಇದನ್ನೂ ಓದಿ-IPL 2024: ಪ್ಲೇಆಫ್ ಹಂತದಲ್ಲಿ ಸೋಲುಂಡು ಹೊರಬಿದ್ದ RCB ತಂಡಕ್ಕೆ ಸಿಕ್ಕ ಬಹುಮಾನ ಮೊತ್ತ ಎಷ್ಟು ಕೋಟಿ ಗೊತ್ತಾ?


ಮೋಹಿತ್ ಶರ್ಮಾ ಕೂಡ ಮುಂದಿನ ಸೀಸನ್‌ನಲ್ಲಿ ನಿವೃತ್ತಿ ಪಡೆಯಬಹುದು. ಮೋಹಿತ್ ಈ ವರ್ಷ 12 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 13 ವಿಕೆಟ್ ಪಡೆದಿದ್ದಾರೆ. ದಿನೇಶ್ ಕಾರ್ತಿಕ್ ಮುಂದಿನ ಋತುವಿನ ಎಂದರೇ ಐಪಿಎಲ್ 2025 ರ ಮೊದಲು ನಿವೃತ್ತಿ ಹೊಂದಬಹುದು. ಐಪಿಎಲ್ 2024ರ 15 ಪಂದ್ಯಗಳಲ್ಲಿ ಕಾರ್ತಿಕ್ 326 ರನ್ ಗಳಿಸಿ, 2 ಅರ್ಧಶತಕಗಳನ್ನು ಭಾರಿಸಿದ್ದಾರೆ.. 


ಈ ಋತುವಿನಲ್ಲಿ ಪಿಯೂಷ್ ಚಾವ್ಲಾ 11 ಪಂದ್ಯಗಳಲ್ಲಿ 13 ವಿಕೆಟ್ ಪಡೆದಿದ್ದಾರೆ. ಮುಂದಿನ ಸೀಸನ್‌ಗೂ ಮುನ್ನ ಪಿಯೂಷ್ ನಿವೃತ್ತಿ ಪಡೆಯಬಹುದು.. ಅಮಿತ್ ಮಿಶ್ರಾ ಐಪಿಎಲ್ 2024 ರಲ್ಲಿ ಕೇವಲ ಒಂದು ಪಂದ್ಯವನ್ನು ಆಡುವ ಅವಕಾಶವನ್ನು ಪಡೆದಿದ್ದು, ಈ ಋತುವಿನಲ್ಲಿ ಅವರು ಎರಡು ಓವರ್‌ಗಳಲ್ಲಿ 20 ರನ್‌ಗಳಿಗೆ 1 ವಿಕೆಟ್ ಪಡೆದರು. ಅಮಿತ್ ಮಿಶ್ರಾ ಮುಂದಿನ ಋತುವಿನ ಮೊದಲು ನಿವೃತ್ತಿ ಹೊಂದಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ