Virat Kohli Bowling Video: ಐಪಿಎಲ್ 2024 ರ 36 ನೇ ಪಂದ್ಯ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಈಡನ್ ಗಾರ್ಡನ್‌ನಲ್ಲಿ ನಡೆಯುತ್ತಿದೆ. ಆರ್‌ಸಿಬಿ ಪ್ಲೇ-ಆಫ್ ರೇಸ್‌ನಲ್ಲಿ ಉಳಿಯಲು ಈ ಗೆಲುವು ತುಂಬಾ ಮುಖ್ಯವಾಗಿದೆ. ಪಂದ್ಯದ ಕುರಿತು ಮಾತನಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ. ಈ ಪಂದ್ಯಕ್ಕಾಗಿ ಕ್ಯಾಮರೂನ್ ಗ್ರೀನ್ ಮತ್ತು ಮೊಹಮ್ಮದ್ ಸಿರಾಜ್ ಆರ್‌ಸಿಬಿಗೆ ಮರಳಿದ್ದಾರೆ.


COMMERCIAL BREAK
SCROLL TO CONTINUE READING

ಬೆಂಗಳೂರು ತಂಡ ಪ್ರಸ್ತುತ ನಡೆಯುತ್ತಿರುವ ಟೂರ್ನಿಯಲ್ಲಿ ತನ್ನದೇ ಆದ ಛಾಪು ಮೂಡಿಸಲು ಹೆಣಗಾಡುತ್ತಿದ್ದು, ಏಳು ಪಂದ್ಯಗಳಿಂದ ಕೇವಲ ಒಂದು ಪಂದ್ಯವನ್ನು ಮಾತ್ರ ಗೆಲ್ಲಲು ಶಕ್ತವಾಗಿದೆ. ಫಾಫ್ ಡು ಪ್ಲೆಸಿಸ್ ನೇತೃತ್ವದ ತಂಡಕ್ಕೆ ಬೌಲಿಂಗ್ ಒಂದು ಪ್ರಮುಖ ಕಾಳಜಿಯಾಗಿದೆ, ಏಕೆಂದರೆ ಪಂದ್ಯಾವಳಿಯುದ್ದಕ್ಕೂ ತಂಡ ಉತ್ತಮ ಬ್ಯಾಟಿಂಗ್ ಅನ್ನು ಪ್ರದರ್ಶಿಸಿದೆ. 


ಬೌಲಿಂಗ್ ಗೆ ಇಳಿದ ವಿರಾಟ್ ಕೊಹ್ಲಿ!
ಈ ಪಂದ್ಯದ ಮೊದಲ ಓವರ್ ಆರಂಭಕ್ಕೂ ಮುನ್ನ RCB ಯ ಎಲ್ಲಾ ಫೀಲ್ಡರ್‌ಗಳು ಮೈದಾನದಲ್ಲಿ ತಮ್ಮನ್ನು ತಾವು ಹೊಂದಿಸಿಕೊಳ್ಳುತ್ತಿದ್ದರು. ಇಂದು ಯಾರು ಮೊದಲು ಬೌಲಿಂಗ್ ಮಾಡಲು ಬರುತ್ತಾರೆ ಎಂದು ಎಲ್ಲರೂ ಯೋಚಿಸುತ್ತಿರುವಾಗಲೇ, ವಿರಾಟ್ ಕೊಹ್ಲಿ ತಮ್ಮ ಕ್ಯಾಪ್ ಅನ್ನು ಅಂಪೈರ್‌ಗೆ ನೀಡಿ ವಾರ್ಮ್ ಅಪ್ ಮಾಡಲು ಪ್ರಾರಂಭಿಸಿದರು. ಅಷ್ಟೇ ಅಲ್ಲ, ಇಂದು ನಿಮಗೆ ರನ್ ಗಳಿಸಲು ಬಿಡುವುದಿಲ್ಲ, ಮುಗಿಸುತ್ತೇನೆ ಎಂದು ಬ್ಯಾಟಿಂಗ್ ಮಾಡಲು ಹೊರಟಿದ್ದ ಸುನೀಲ್ ನಾರಾಯಣ್ ಗೆ ಹೇಳುತ್ತಾರೆ.


ಇದನ್ನೂ ಓದಿ-Virat Kohli ನೆಚ್ಚಿನ ಬ್ಯಾಟ್ ಮುರಿದು ಹೊಸ ಬ್ಯಾಟ್ ಪಡೆಯಲು ಪ್ರಮಾಣ ಮಾಡಲು ಮುಂದಾದ ರಿಂಕು ಸಿಂಗ್!


RCB ಇಂದಿನ ಪಂದ್ಯದ ಪ್ಲೇಯಿನ್ ಇಲೆವೆನ್
ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಪ್ಲೇಯಿಂಗ್ XI- ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ವಿಲ್ ಜಾಕ್ವೆಸ್, ರಜತ್ ಪಾಟಿದಾರ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮಹಿಪಾಲ್ ಲೊಮ್ರೋರ್, ಕರ್ಣ್ ಶರ್ಮಾ, ಲಾಕಿ ಫರ್ಗುಸನ್, ಯಶ್ ದಯಾಲ್ ಮತ್ತು ಮೊಹಮ್ಮದ್ ಸಿರಾಜ್.


ಇದನ್ನೂ ಓದಿ-IPL 2024: Alert: MS Dhoni ಮೈದಾನಕ್ಕಿಳಿಯುತ್ತಿದ್ದಂತೆ Quinton De Kock ಪತ್ನಿಯ ಸ್ಮಾರ್ಟ್ ವಾಚ್ ನಲ್ಲಿ ಬಂತು ಅಪಾಯದ ಮುನ್ಸೂಚನೆ ಸಂದೇಶ!


ಕೋಲ್ಕತ್ತಾ ನೈಟ್ ರೈಡರ್ಸ್‌ನ ಪ್ಲೇಯಿಂಗ್ XI
ಕೋಲ್ಕತ್ತಾ ನೈಟ್ ರೈಡರ್ಸ್‌ನ ಪ್ಲೇಯಿಂಗ್ XI- ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಸುನಿಲ್ ನರೈನ್, ಆಂಗ್‌ಕ್ರಿಶ್ ರಘುವಂಶಿ, ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ರಿಂಕು ಸಿಂಗ್, ರಮಣದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವರುಣ್ ಚಕ್ರವರ್ತಿ ಮತ್ತು ಹರ್ಷಿತ್ ರಾಣಾ.


ವೈರಲ್ ವಿಡಿಯೋ ಇಲ್ಲಿದೆ ನೋಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.