IPL 2024, CSK vs SRH: ಭಾನುವಾರ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) 78 ರನ್‌’ಗಳಿಂದ ಸನ್‌ರೈಸರ್ಸ್ ಹೈದರಾಬಾದ್ (SRH) ತಂಡವನ್ನು ಸೋಲಿಸಿತು. ಐಪಿಎಲ್ 2024ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್’ಗೆ 10 ಪಂದ್ಯಗಳಲ್ಲಿ ಇದು ಐದನೇ ಗೆಲುವು. ಈ ಮೂಲಕ 10 ಅಂಕಗಳನ್ನು ಪಡೆದು ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ತಲುಪಿದೆ. ಇನ್ನು ಪ್ರಸ್ತುತ ನಿವ್ವಳ ರನ್ ರೇಟ್ +0.810 ಆಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: T20 ವಿಶ್ವಕಪ್ ತಂಡದಲ್ಲಿ ಹಾರ್ದಿಕ್ ಪಾಂಡ್ಯಗಿಲ್ಲ ಸ್ಥಾನ! ಆಲ್ ರೌಂಡರ್ ಸ್ಥಾನ ತುಂಬೋದು ಯಾರು?


ಅಂದಹಾಗೆ ಈ ಪಂದ್ಯದ ವೇಳೆ ಅಭಿಮಾನಿಯೊಬ್ಬರ ಪೋಸ್ಟರ್ ಸಖತ್ ವೈರಲ್ ಆಗುತ್ತಿದೆ. ಮಹೇಂದ್ರ ಸಿಂಗ್ ಧೋನಿ ಅಭಿಮಾನಿಯೊಬ್ಬನ ಪೋಸ್ಟರ್ ಇದಾಗಿದ್ದು, ಇದೆಂಥಾ ಅಭಿಮಾನ ಎಂಬ ಪ್ರಶ್ನೆ ಮೂಡಿಸುವಂತಿದೆ.  


ಧೋನಿ ಅಭಿಮಾನಿ ತನ್ನ ಪೋಸ್ಟರ್‌’ನಲ್ಲಿ “ನನ್ನ ಪ್ರೇಯಸಿ ಹೆಸರಿನಲ್ಲಿ 7 ಅಕ್ಷರಗಳಿಲ್ಲದ ಕಾರಣ ನಾನು ಅವಳೊಂದಿಗೆ ಬ್ರೇಕಪ್ ಮಾಡಿಕೊಂಡಿದ್ದೇನೆ” ಎಂದು ಬರೆದಿದ್ದಾನೆ. ಧೋನಿ ಜರ್ಸಿ ಸಂಖ್ಯೆ ನಂಬರ್ 7 ಆಗಿದೆ.


ಟಾಪ್-4 ರಲ್ಲಿ CSK:


ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಈಗ ಐಪಿಎಲ್ 2024ರ ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನವನ್ನು ತಲುಪಿದೆ. ಈ ಮೂಲಕ ಲಕ್ನೋ ತಂಡ ಹಿನ್ನಡೆ ಅನುಭವಿಸಿ ಟಾಪ್ 4ರಿಂದ ಹೊರಬಿದ್ದಿದೆ.


ಇದನ್ನೂ ಓದಿ: ಮೋದಿಯವರು ಮುಂದಿನ ಐದು ವರ್ಷದಲ್ಲಿ ಬಡತನ ಮುಕ್ತ ಭಾರತ ಮಾಡಲಿದ್ದಾರೆ: ಬಸವರಾಜ ಬೊಮ್ಮಾಯಿ


ಲಕ್ನೋ ಸೂಪರ್ ಜೈಂಟ್ಸ್ ಪ್ರಸ್ತುತ 9 ಪಂದ್ಯಗಳಲ್ಲಿ 5 ಗೆಲುವು ಮತ್ತು 4 ಸೋಲುಗಳೊಂದಿಗೆ 10 ಅಂಕಗಳನ್ನು ಪಡೆದಿದ್ದು, ನೆಟ್ ರನ್ ರೇಟ್ +0.059 ಆಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.