IPL 2024: ಐಪಿಎಲ್ ಅಖಾಡದ ಸಾರ್ವಕಾಲಿಕ ತಂಡ.. ಧೋನಿ ನಾಯಕ, ರೋಹಿತ್ಗಿಲ್ಲ ಸ್ಥಾನ!
IPL 2024 Squad: ಐಪಿಎಲ್ 2024 ಮಾರ್ಚ್ ಕೊನೆಯ ವಾರದಿಂದ ಪ್ರಾರಂಭವಾಗುವ ನಿರೀಕ್ಷೆಯಿದ್ದು.. ಸದ್ಯ ಅಖಾಡದ ಸಾರ್ವಕಾಲಿಕ ತಂಡ ಪ್ರಕಟವಾಗಿದೆ..
IPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2008 ರಲ್ಲಿ ಮೊದಲ ಬಾರಿಗೆ ಪ್ರಾರಂಭಿಸಲಾಯಿತು.. ಆ ಸಮಯದಲ್ಲಿ ಒಟ್ಟು 8 ತಂಡಗಳು ಭಾಗವಹಿಸಿದ್ದವು.. ಈ ಟೂರ್ನಿಯಲ್ಲಿ ಶೇನ್ ವಾರ್ನ್ ನಾಯಕತ್ವದಲ್ಲಿ ರಾಜಸ್ಥಾನ್ ರಾಯಲ್ಸ್ ಮೊದಲ ಪ್ರಶಸ್ತಿ ಗೆದ್ದು ಇತಿಹಾಸ ನಿರ್ಮಿಸಿದೆ.. ಇದುವರೆಗೆ 16 ಆವೃತ್ತಿಗಳನ್ನು ಪೊರೈಸಿದ ಐಪಿಎಲ್ ಸದ್ಯ 17 ನೇ ಸೀಸನ್‌ಗೆ ರೆಡಿಯಾಗುತ್ತಿದೆ..
ಇಂದು (20 ಫೆಬ್ರವರಿ 2024) IPL ಹರಾಜು 16 ವರ್ಷಗಳನ್ನು ಪೂರೈಸಿದೆ.. ಇದರಿಂದಾಗಿ ಈ ಸ್ಪರ್ಧೆಯನ್ನು ಇನ್ನಷ್ಟು ವಿಶೇಷಗೊಳಿಸಲು ಸಾರ್ವಕಾಲಿಕ ನೆಚ್ಚಿನ ತಂಡವನ್ನು ಆಯ್ಕೆ ಮಾಡಲಾಗಿದೆ. ಈ ತಂಡವನ್ನು ಆಯ್ಕೆ ಮಾಡಲು, 70 ಕ್ಕೂ ಹೆಚ್ಚು ಕ್ರೀಡಾ ಪತ್ರಕರ್ತರು ಮತ್ತು ಅನೇಕ ಮಾಜಿ ಅನುಭವಿ ಆಟಗಾರರನ್ನು ಸ್ಟಾರ್ ಸ್ಪೋರ್ಟ್ಸ್ ಪ್ಯಾನೆಲ್‌ನಲ್ಲಿ ಸೇರಿಸಲಾಗಿದ್ದು, ಅದರಲ್ಲಿ ಎಂಎಸ್ ಧೋನಿಗೆ ನಾಯಕತ್ವವನ್ನು ನೀಡಲಾಗಿದೆ.. ಆದರೆ ಹಲವು ಅನುಭವಿ ಆಟಗಾರರಿಗೆ ಐಪಿಎಲ್‌ನಲ್ಲಿ ಅವಕಾಶ ಸಿಕ್ಕಿಲ್ಲ.
ಇದನ್ನು ಓದಿ : GK Quiz: ಯಾವ ಆಂಜನೇಯನ ದೇವಸ್ಥಾನದಲ್ಲಿ ಮುಸ್ಲಿಮರು ಪೂಜೆ ಸಲ್ಲಿಸುತ್ತಾರೆ?
ಎಂಎಸ್ ಧೋನಿ ನಾಯಕ:
ಸಿಎಸ್‌ಕೆ ತಂಡವನ್ನು ಐದು ಬಾರಿ ಮುನ್ನಡೆಸಿ ಪ್ರಶಸ್ತಿ ಗೆದ್ದಿರುವ ಎಂಎಸ್ ಧೋನಿ ಐಪಿಎಲ್‌ನ ಸಾರ್ವಕಾಲಿಕ ನೆಚ್ಚಿನ ನಾಯಕನಾಗಿ ಹೊರಹೊಮ್ಮಿದ್ದಾರೆ. ಆದರೆ ಅದೇ ಐದು ಬಾರಿ ಮುಂಬೈ ಇಂಡಿಯನ್ಸ್ ಪ್ರಶಸ್ತಿ ಗೆದ್ದಿದ್ದರೂ ರೋಹಿತ್ ಶರ್ಮಾಗೆ ತಂಡದಲ್ಲಿ ಸ್ಥಾನವಿಲ್ಲ.. ರೋಹಿತ್ ಶರ್ಮಾ ಶ್ರೇಷ್ಠ ನಾಯಕ ಆದರೆ ಎಂಎಸ್ ಧೋನಿಗೆ ಹೋಲಿಸಿದರೆ ಅವರ ನಾಯಕತ್ವವು ದುರ್ಬಲವಾಗಿದೆ ಎನ್ನುವುದು ತಜ್ಞರ ಅಭಿಪ್ರಾಯ..
ಇದನ್ನು ಓದಿ : GK Quiz: ಯಾವ ಆಂಜನೇಯನ ದೇವಸ್ಥಾನದಲ್ಲಿ ಮುಸ್ಲಿಮರು ಪೂಜೆ ಸಲ್ಲಿಸುತ್ತಾರೆ?
ವಿರಾಟ್ ಕೊಹ್ಲಿಯಿಂದ ಹಿಡಿದು ಮಿಸ್ಟರ್ ಐಪಿಎಲ್ ಎಂದು ಕರೆಸಿಕೊಳ್ಳುವ ಸುರೇಶ್ ರೈನಾ ಅವರನ್ನೂ ದಿಗ್ಗಜರು ತಂಡಕ್ಕೆ ಸೇರಿಸಿಕೊಂಡಿದ್ದಾರೆ. ಇದಲ್ಲದೆ, ಕ್ರಿಸ್ ಗೇಲ್, ಡೇವಿಡ್ ವಾರ್ನರ್, ಸೂರ್ಯಕುಮಾರ್ ಯಾದವ್ ಮತ್ತು ಮಿಸ್ಟರ್ 360 ಎಂದು ಕರೆಯಲ್ಪಡುವ ಎಬಿ ಡಿವಿಲಿಯರ್ಸ್ ಕೂಡ ಈ ತಂಡದ ಭಾಗವಾಗಿದ್ದಾರೆ. ಇದಲ್ಲದೇ ಆಲ್‌ರೌಂಡರ್‌ಗಳಲ್ಲಿ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕೀರಾನ್ ಪೊಲಾರ್ಡ್‌ರಂತಹ ಆಟಗಾರರು ಅವಕಾಶ ಪಡೆದರೆ, ಸ್ಪಿನ್ನರ್‌ಗಳಲ್ಲಿ ರಶೀದ್ ಖಾನ್, ಸುನಿಲ್ ನಾರಾಯಣ್ ಮತ್ತು ಯುಜ್ವೇಂದ್ರ ಚಹಾಲ್‌ಗೆ ಅವಕಾಶ ನೀಡಲಾಗಿದೆ. ಜೊತೆಗೆ ವೇಗದ ಬೌಲರ್ ಆಗಿ ಜಸ್ಪ್ರೀತ್ ಬುಮ್ರಾ ಕೂಡ ಸೇರ್ಪಡೆಗೊಂಡಿದ್ದಾರೆ.
ಅನುಭವಿಗಳಿಂದ ಆಯ್ಕೆಯಾದ ಐಪಿಎಲ್‌ನ ಸಾರ್ವಕಾಲಿಕ ನೆಚ್ಚಿನ ತಂಡ:
ಮಹೇಂದ್ರ ಸಿಂಗ್ ಧೋನಿ (ನಾಯಕ), ವಿರಾಟ್ ಕೊಹ್ಲಿ, ಕ್ರಿಸ್ ಗೇಲ್, ಡೇವಿಡ್ ವಾರ್ನರ್, ಸುರೇಶ್ ರೈನಾ, ಎಬಿ ಡಿವಿಲಿಯರ್ಸ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಕೀರಾನ್ ಪೊಲಾರ್ಡ್, ರಶೀದ್ ಖಾನ್, ಸುನಿಲ್ ನಾರಾಯಣ್, ಯುಜ್ವೇಂದ್ರ ಚಾಹಲ್, ಲಸಿತ್ ಮಾಲಿಂಗ ಮತ್ತು ಜಸ್ಪ್ರೀತ್ ಬುಮ್ರಾ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.