IPL 2024, RCB vs CSK: ಇದು ಯಶ್ ದಯಾಳ್ ಜೀರೋ To ಹೀರೋ ಆದ ಕಥೆ. RCBಗೆ ಅದೃಷ್ಟದ ಗೆಲುವು ತಂದುಕೊಟ್ಟ ಯಶ್‌ ದಯಾಳ್‌ ಇದೀಗ ಹೀರೋ ಆಗಿ ಬದಲಾಗಿದ್ದಾರೆ. ತಮ್ಮ ಅದ್ಭುತ ಬೌಲಿಂಗ್‌ನಿಂದ CSKಯನ್ನು ಮನೆಗೆ ಕಳುಹಿಸುವಲ್ಲಿ ಯಶಸ್ವಿಯಾಗುವ ಮೂಲಕ RCB ಪ್ಲೇಆಫ್‌ಗೆ ಪ್ರವೇಶಿಸುವಂತೆ ಮಾಡಿದ ಯಶ್‌ ದಯಾಳ್‌ಗೆ ಇದೀಗ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿವೆ. 


COMMERCIAL BREAK
SCROLL TO CONTINUE READING

ಹೌದು, ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ 2023ರ ಐಪಿಎಲ್‌ ಟೂರ್ನಿಯ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ರಿಂಕು ಸಿಂಗ್‌ ಕೈಲಿ 5 ಎಸೆತಗಳಲ್ಲಿ ಸತತ 5 ಸಿಕ್ಸರ್‌ಗಳನ್ನು ಯಶ್‌ ದಯಾಳ್‌ ಹೊಡೆಸಿಕೊಂಡಿದ್ದರು. ಇದು ಯುವ ಕ್ರಿಕೆಟಿಗನ ಕರಿಯರ್‌ ಮೇಲೆ ಅಪಾರ ಪ್ರಭಾವ ಬೀರಿದ ಕಳಪೆ ದಾಖಲೆಯಾಗಿತ್ತು. ಈ ಪಂದ್ಯದ ಬಳಿಕ ಯಶ್‌ ದಯಾಳ್‌ ವ್ಯಾಪಕ ಟೀಕೆ ಮತ್ತು ಟ್ರೋಲ್‌ಗೆ ತುತ್ತಾಗಿದ್ದರು. 


ಫಾಫ್ ಡು ಪ್ಲೆಸಿಸ್ ಔಟ್ ಅಥವಾ ನಾಟೌಟ್? RCBಗೆ ಮತ್ತೆ ಮೋಸ ಮಾಡಿದ್ರಾ ಅಂಪೈರ್!!


ಅಂದು ಗುಜರಾತ್‌ ಪರ ಆಡುತ್ತಿದ್ದ ಯಶ್‌ ದಯಾಳ್‌ರನ್ನು 2024ರ ಐಪಿಎಲ್ ಆವೃತ್ತಿಯಲ್ಲಿ ಆರ್‌ಸಿಬಿ 5 ಕೋಟಿ ರೂ.ಗೆ ಖರೀದಿಸಿತು. ಆರಂಭಿಕ ಪಂದ್ಯಗಳಲ್ಲಿ ಅಷ್ಟೇನೂ ಉತ್ತಮ ಪ್ರದರ್ಶನ ನೀಡದ ಯಶ್‌ ದಯಾಳ್‌ ನಂತರ ಭರ್ಜರಿ ಕಮ್‌ಬ್ಯಾಕ್‌ ಮಾಡಿದ್ದರು. ಆರಂಭಿಕ ಪಂದ್ಯಗಳಲ್ಲಿ ಕಳಪೆ ಬೌಲಿಂಗ್‌ನಿಂದ ಸತತ ಸೋಲು ಕಂಡು ಕಂಗೆಟ್ಟಿದ್ದ ಆರ್‌ಸಿಬಿಗೆ ಯಶ್‌ ದಯಾಳ್‌ ಬೆಂಕಿ ಬೌಲಿಂಗ್‌ ಮೂಲಕ ಶಕ್ತಿ ತುಂಬಿದರು. ಯಶ್‌ ದಯಾಳ್‌ ಕಮ್‌ಬ್ಯಾಕ್‌ ಮಾಡಿದ್ದನ್ನು ಕಂಡು ಸಹ ಆಟಗಾರರಷ್ಟೇ ಅಲ್ಲ, ಮಾಜಿ ಆಟಗಾರರು ಸಹ ಬಾಯ್‌ ಮೇಲೆ ಬೆರಳು ಇಟ್ಟುಕೊಂಡಿದ್ದರು. 


IPL 2024: ಚೆನ್ನೈ ಸೂಪರ್ ಕಿಂಗ್ಸ್ ಮಣಿಸಿ ಪ್ಲೇ ಆಫ್ ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಆರ್ಸಿಬಿ..!


ಯಶ್‌ ದಯಾಳ್‌ ಅದನ್ನೂ ಮಿಸ್‌ ಮಾಡುವ ಮೂಲಕ RCBಗೆ 17 ರನ್‌ಗಳ ಅದ್ಭುತ ಗೆಲುವು ತಂದುಕೊಟ್ಟರು. ಅಂದು ಜೀರೋ ಆಗಿದ್ದ ಯಶ್‌ ಇಂದು ಹೀರೋ ಆಗಿ ಮಿಂಚಿದರು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.