ಬೆಂಗಳೂರು: ಇಲ್ಲಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ದೆಹಲಿ ಕ್ಯಾಪಿಟಲ್ಸ್ ವಿರುದ್ಧ 47 ರನ್ ಗಳ ಅಂತರದ ಭರ್ಜರಿ ಗೆಲುವು ಸಾಧಿಸಿದೆ.


COMMERCIAL BREAK
SCROLL TO CONTINUE READING

ಮೊದಲು ಟಾಸ್ ಗೆದ್ದ ದೆಹಲಿ ಕ್ಯಾಪಿಟಲ್ಸ್ ತಂಡವು ಫೀಲ್ಡಿಂಗ್ ಅನ್ನು ಆಯ್ದುಕೊಂಡಿತು. ಇದೆ ವೇಳೆ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಬೆಂಗಳೂರು ತಂಡವು ರಜತ್ ಪಟಿದಾರ್ 52, ವಿಲ್ ಜಾಕ್ಸ್ 41,ಹಾಗೂ ಗ್ರೀನ್ ಅವರ 32 ರನ್ ಗಳ ನೆರವಿನಿಂದ 20 ಓವರ್ ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ 187 ರನ್ ಗಳನ್ನು ಗಳಿಸಿತು.



ಇದೆ ವೇಳೆ ಬೆಂಗಳೂರು ತಂಡವು ನೀಡಿದ 188 ರನ್ ಗಳ ಗೆಲುವಿನ ಗುರಿಯನ್ನು ಬೆನ್ನತ್ತಿದ ದೆಹಲಿ ಕ್ಯಾಪಿಟಲ್ಸ್ ತಂಡವು 19.1 ಓವರ್ ಗಳಲ್ಲಿ ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡು 140 ರನ್ ಗಳನ್ನು ಮಾತ್ರ ಗಳಿಸಲು ಶಕ್ತವಾಯಿತು.ದೆಹಲಿ ತಂಡದ ಪರವಾಗಿ ಏಕಾಂಗಿ ಹೋರಾಟ ನಡೆಸಿದ ಅಕ್ಷರ ಪಟೇಲ್ 39 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ ಐದು ಬೌಂಡರಿಗಳ ನೆರವಿನಿಂದಾಗಿ 57 ರನ್ ಗಳಿಸುವ ಮೂಲಕ ತಂಡಕ್ಕೆ ಗೆಲುವಿನ ಆಸೆ ಮೂಡಿಸಿದ್ದರು. ಆದರೆ ಅಂತಿಮವಾಗಿ ಬೆಂಗಳೂರು ಬೌಲರ್ ಗಳು ದೆಹಲಿ ಪಡೆಯನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾದರು.


ಅದರಲ್ಲೂ ಪ್ರಮುಖವಾಗಿ ಯಶ್ ದಯಾಳ್ ಶರ್ಮಾ ಮೂರು,ಹಾಗೂ ಫಾರ್ಗುಶನ್ ಎರಡು ವಿಕೆಟ್ ಕಬಳಿಸುವ ಮೂಲಕ ದೆಹಲಿ ಬ್ಯಾಟಿಂಗ್ ಬಳಗದ ಬೆನ್ನೆಲುಬು ಮುರಿಯುವಲ್ಲಿ ಯಶಸ್ವಿಯಾದರು.ಈಗ ಈ ಗೆಲುವಿನೊಂದಿಗೆ ಬೆಂಗಳೂರು ತಂಡವು ಇನ್ನೂ ಪ್ಲೇ ಆಫ್ ಆಸೆಯನ್ನು ಉಳಿಸಿಕೊಂಡಿದೆ.