IPL 2024: Special Team Without Players From Australia Africa And West Indies: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿಯೇ ಐದು  ಬಾರಿ ಐಪಿಎಲ್ ಪ್ರಶಸ್ತಿ ತನ್ನದಾಗಿಸಿಕೊಂಡ ತಂಡದಲ್ಲಿ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ಅಫ್ಘಾನಿಸ್ತಾನದ ಓರ್ವ ಆಟಗಾರನೂ ಇಲ್ಲ ಎಂದರೆ ನೀವು ನಂಬುತ್ತೀರಾ? ಆಸ್ಟ್ರೇಲಿಯಾ ಸೇರಿದಂತೆ ಈ ನಾಲ್ಕು ತಂಡಗಳು ಟಿ20 ಕ್ರಿಕೆಟ್‌ ವಿಶೇಷ ಆಟಗಾರರಿಂದ ತುಂಬಿವೆ. ಆದರೆ ಐಪಿಎಲ್‌ನ ಅತ್ಯಂತ ಜನಪ್ರಿಯ ತಂಡ ಚೆನ್ನೈ ಸೂಪರ್ ಕಿಂಗ್ಸ್‌ ತಂಡದಲ್ಲಿ ಈ ದೇಶಗಳ ಒಬ್ಬ ಆಟಗಾರ ಕೂಡ ಇಲ್ಲ. ಸಿಎಸ್‌ಕೆ ತಂಡ ಮಾರ್ಚ್ 22 ಶುಕ್ರವಾರದಂದು ತನ್ನ ಮೊದಲ ಪಂದ್ಯವನ್ನು ಆಡಿ ವಿಜಯ ಮಾಲೆ ಕೊರಳಿಗೆ ಹಾಕಿಕೊಂಡಿದೆ. 


COMMERCIAL BREAK
SCROLL TO CONTINUE READING

ಚೆನ್ನೈ ಸೂಪರ್ ಕಿಂಗ್ಸ್‌ನಲ್ಲಿರುವ ವಿದೇಶಿ ಆಟಗಾರರ ಪೈಕಿ, ಕ್ರಿಕೆಟ್ ಜಗತ್ತಿನ 'ಅಂಡರ್ ಡಾಗ್' ಎಂದೇ ಕರೆಯಲ್ಪಡುವ ನ್ಯೂಜಿಲ್ಯಾಂಡ್ ತಂಡದ ಗರಿಷ್ಠ ಸಂಖ್ಯೆಯ ಆಟಗಾರರು ಇದ್ದಾರೆ. ಸಿಎಸ್ ಕೆ ತಂಡದಲ್ಲಿ ಒಟ್ಟು 8 ವಿದೇಶಿ ಆಟಗಾರರಿದ್ದು, ಈ ಪೈಕಿ 4 ಮಂದಿ ನ್ಯೂಜಿಲೆಂಡ್ ತಂಡದ ಆಟಗಾರರಾಗಿದ್ದು. ಈ 4 ಆಟಗಾರರು- ಡೆವೊನ್ ಕಾನ್ವೇ, ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್. ಶುಕ್ರವಾರ ಸಿಎಸ್‌ಕೆ ತನ್ನ ಮೊದಲ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಆಡಿ ಗೆಲುವಿನ ಮೂಲಕ ತನ್ನ ಐಪಿಎಲ್ 2024ರ ಅಭಿಯಾನ ಆರಂಭಿಸಿದೆ. 


ಇದನ್ನೂ ಓದಿ-IPL 2024: ಐಪಿಎಲ್ ನ ಒಂದೇ ಪಂದ್ಯದಲ್ಲಿ ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದಾನೆ ಈ ಬ್ಯಾಟ್ಸ್ ಮನ್!


ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿರುವ ಉಳಿದ ನಾಲ್ವರು ವಿದೇಶಿ ಕ್ರಿಕೆಟಿಗರು ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಇಂಗ್ಲೆಂಡ್‌ ತಂಡದವರಾಗಿದ್ದಾರೆ. ನ್ಯೂಜಿಲೆಂಡ್ ನಂತರ, CSK ತಂಡದಲ್ಲಿ ಗರಿಷ್ಠ ಸಂಖ್ಯೆಯ ಇಬ್ಬರು ಆಟಗಾರರು ಎಂದರೆ ಅದು ಶ್ರೀಲಂಕಾದವರು. ಶ್ರೀಲಂಕಾದ ಮತಿಶಾ ಪತಿರಾನ ಮತ್ತು ಮಹೇಶ್ ಟೀಕ್ಷಣ ಈ ತಂಡದಲ್ಲಿದ್ದಾರೆ. ಇದಲ್ಲದೇ ಇಂಗ್ಲೆಂಡ್‌ನ ಮೊಯೀನ್ ಅಲಿ ಮತ್ತು ಬಾಂಗ್ಲಾದೇಶದ ಮುಸ್ತಫಿಜುರ್ ರೆಹಮಾನ್ ಕೂಡ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದಾರೆ.


ಇದನ್ನೂ ಓದಿ-ಈ 4 ತಂಡಗಳೇ ಈ ಬಾರಿ ಪ್ಲೇಆಫ್ ತಲುಪೋದು: ಕ್ರಿಸ್ ಗೇಲ್ ಭವಿಷ್ಯ


ಮತ್ತೊಂದೆಡೆ, ಐಪಿಎಲ್‌ನ ಉಳಿದ ಎಲ್ಲಾ 9 ತಂಡಗಳು ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಅಥವಾ ಅಫ್ಘಾನಿಸ್ತಾನದ ಆಟಗಾರರನ್ನು ಒಳಗೊಂಡಿವೆ. ಸನ್ ರೈಸರ್ಸ್ ಹೈದರಾಬಾದ್ ತಂಡದ ನಾಯಕ ಆಸ್ಟ್ರೇಲಿಯಾದ ಪ್ಯಾಟ್ ಕಮಿನ್ಸ್.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ