IPL 2024: `ಐಸಾ ಮೌಕಾ ಫಿರ್ ಕಹಾ ಮಿಲೇಗಾ..` ಹಾಡು ಹೇಳಿ ಆವೇಶ್ ಖಾನ್ ಜೊತೆಗೆ Virat Kohli ತಮಾಷೆ! Watch Video
IPL 2024: RCB vs RR: ಇಂಡಿಯನ್ ಪ್ರಿಮಿಯರ್ ಲೀಗ್ (Indian Premier League 2024) ನ 19ನೇ ಪಂದ್ಯ ರಾಜಸ್ಥಾನದ ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ (Savai Mansingh Stadium) ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಧ್ಯೆ ನಡೆಯಲಿದೆ. ಏತನ್ಮಧ್ಯೆ ರಾಜಸ್ಥಾನ್ ರಾಯಲ್ ಕಿಂಗ್ ಕೊಹ್ಲಿಯ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ವಿರಾಟ್ ಕೊಹ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ಆವೇಶ್ ಖಾನ್ ಜೊತೆಗೆ ತಮಾಷೆ ಮಾಡುತ್ತಿರುವುದು ಕಂಡುಬಂದಿದೆ. (IPL 2024 News In Kannada)
Virat Kohli Viral Video: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli)ಅತ್ಯುತ್ತಮ ಫಾರ್ಮ್ ನಲ್ಲಿದ್ದಾರೆ. ಇದುವರೆಗೆ ಆಡಿರುವ 4 ಪಂದ್ಯಗಳಲ್ಲಿ 2 ಅರ್ಧಶತಕ ಕೊಹ್ಲಿ ಬಾರಿಸಿದ್ದಾರೆ. ಇದೀಗ ಅವರು ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್ 2024 ರ 19ನೇ ಪಂದ್ಯದಲ್ಲಿ ಆಡಲಿದ್ದಾರೆ. ಇದಕ್ಕೂ ಮೊದಲು, ಅವರ ವೀಡಿಯೊವೊಂದು ಹೊರಹೊಮ್ಮಿದ್ದು, ಭಾರಿ ವೈರಲ್ ಆಗುತ್ತಿದೆ (IPL 2024 Viral Video). ಈ ವಿಡಿಯೋದಲ್ಲಿ ಕೊಹ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ವೇಗಿ ಅವೇಶ್ ಖಾನ್ (Avesh Khan) ಅವರೊಂದಿಗೆ ತಮಾಷೆ ಮಾಡುತ್ತಿರುವುದನ್ನು ನೀವು ನೋಡಬಹುದು. ರಾಜಸ್ಥಾನ್ ರಾಯಲ್ಸ್ (Rajasthan Royals) ಫ್ರಾಂಚೈಸ್ ತನ್ನ ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ (Social Media) ಈ ವೀಡಿಯೊವನ್ನು ಹಂಚಿಕೊಂಡಿದೆ.(IPL 2024 News In Kannada)
ಆವೇಶ್ ಖಾನ್ ಜೊತೆಗೆ ತಮಾಷೆ ಮಾಡುತ್ತಿರುವ ಕಿಂಗ್ ಕೊಹ್ಲಿ
ಏಪ್ರಿಲ್ 6 ರಂದು ರಾಜಸ್ಥಾನ್ ರಾಯಲ್ಸ್ (RR) ವಿರುದ್ಧದ ಪಂದ್ಯಕ್ಕೂ ಮುನ್ನ RCB ತಂಡವು ಸ್ಥಳವನ್ನು ತಲುಪುವ ಮೂಲಕ ತನ್ನ ಸಿದ್ಧತೆಯನ್ನು ನಡೆಸಿಕೊಂಡಿದೆ. ಅಭ್ಯಾಸದ ಸಮಯದಲ್ಲಿ, ಕೊಹ್ಲಿ ತಮಾಷೆ ಮಾಡುತ್ತಾ ಅವೇಶ್ ಅವರನ್ನು ಭೇಟಿಯಾಗಿದ್ದಾರೆ, ಅದರ ವೀಡಿಯೊವನ್ನು ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸ್ ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದೆ. ಈ ವೀಡಿಯೋದಲ್ಲಿ ಆವೇಶ್ ಖಾನ್ ತನ್ನತ್ತ ಬರುವುದನ್ನು ನೋಡಿ, ಹಿಂದಿ ಹಾಡು 'ಆಜಾ ಆಜಾ ....ಐಸಾ ಮೌಕಾ ಫಿರ್ ಕಹಾ ಮಿಲೆಗಾ' ಹೇಳುತ್ತಾ ತಮಾಷೆ ಮಾಡಿದ್ದಾರೆ (ಬಾ ಬಾ.... ಇಂಥಾ ಅವಕಾಶ ಮತ್ತೆ ಎಲ್ಲಿ ಸಿಗುತ್ತೆ). ಇದಾದ ಬಳಿಕ ಇಬ್ಬರೂ ಕ್ರಿಕೆಟಿಗರು ಪರಸ್ಪರ ತಬ್ಬಿಕೊಂಡಿದ್ದಾರೆ.
ಈ ಪಂದ್ಯದ ವೇಳೆ ಹೆಲ್ಮೆಟ್ ನೆಲಕ್ಕೆ ಅಪ್ಪಳಿಸಿದ್ದರು ಆವೇಶ್
ವಾಸ್ತವದಲ್ಲಿ IPL 2023 ರಲ್ಲಿ RCB (Royal Challengers Bengaluru) ಮತ್ತು ಲಖನೌ ಸೂಪರ್ ಜೈಂಟ್ಸ್ ಮಧ್ಯೆ ನಡೆದ ಪಂದ್ಯದ ವೇಳೆ ಅವೇಶ್ ಖಾನ್ ಮತ್ತು ಕೊಹ್ಲಿ ಇಬ್ಬರೂ ಸಾಕಷ್ಟು ಹೆಡ್ಲೈನ್ ಗೆ ಕಾರಣರಾಗಿದ್ದರು. ಆರ್‌ಸಿಬಿ ಮತ್ತು ಎಲ್‌ಎಸ್‌ಜಿ ನಡುವಿನ ಈ ಮೊದಲ ಪಂದ್ಯ ರೋಚಕವಾಗಿದ್ದು, ಇದರಲ್ಲಿ ಕೆಎಲ್ ರಾಹುಲ್ (KL Rahul) ತಂಡ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ರನ್ ಚೇಸ್ ಪೂರ್ಣಗೊಳಿಸುವ ವೇಳೆ ಕ್ರೀಸ್‌ನಲ್ಲಿದ್ದ ಲಖನೌ ಆಟಗಾರ ಅವೇಶ್ ಖಾನ್ ಹೆಲ್ಮೆಟ್ ತೆಗೆದು ಅದನ್ನು ಬಲವಾಗಿ ನೆಲಕ್ಕೆ ಅಪ್ಪಳಿಸಿ ಸಂಭ್ರಮಾಚರಿಸಿದ್ದರು. ಆದರೆ, ನಂತರ ಆವೇಶ್ ಖಾನ್ ಗೆ ಈ ಕೆಲಸಕ್ಕೆ ದಂಡ ಬಿತ್ತು ಅದು ಬೇರೆ ವಿಷಯ
ವಿಜಯ ರಥದ ಮೇಲೆ ರಾಜಸ್ಥಾನ್ ಸವಾರಿ: ಐಪಿಎಲ್ 2024 ರ ಬಗ್ಗೆ ಹೇಳುವುದಾದರೆ, ಸಂಜು ಸ್ಯಾಮ್ಸನ್ (Sanju Samson) ನೇತೃತ್ವದ ರಾಜಸ್ಥಾನ್ ರಾಯಲ್ಸ್ ವಿಜಯದ ರಥದ ಮೇಲೆ ಸವಾರಿ ಮಾಡುತ್ತಿದೆ. ಈ ತಂಡ ಇದುವರೆಗೆ 3 ಪಂದ್ಯಗಳನ್ನು ಆಡಿದ್ದು ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದೆ. ರಾಜಸ್ಥಾನ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇಂತಹ ಪರಿಸ್ಥಿತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ರಾಜಸ್ಥಾನವನ್ನು ಸೋಲಿಸುವುದು ಸುಲಭದ ಮಾತಲ್ಲ. ಆರ್‌ಸಿಬಿ ಬಗ್ಗೆ ಹೇಳುವುದಾದರೆ, ತಂಡವು ಇದುವರೆಗೆ 4 ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಕೇವಲ 1 ಪಂದ್ಯವನ್ನು ಮಾತ್ರ ಗೆದ್ದಿದೆ. ಈ ಪಂದ್ಯದಲ್ಲಿಯೂ ಕೂಡ ವಿರಾಟ್ ಕೊಹ್ಲಿಯಿಂದ ಅಭಿಮಾನಿಗಳು ಮತ್ತು ತಂಡ ನಿರ್ವಾಹಕರು ಉತ್ತಮ ಪ್ರದರ್ಶನವನ್ನು ನಿರೀಕ್ಷಿಸುತ್ತಿದ್ದಾರೆ.
ಇದನ್ನೂ ಓದಿ-IPL 2024: MS Dhoni ವೀಕ್ಷಿಸಲು ಬಂದ ಅಭಿಮಾನಿಗಳ ಹುಚ್ಚಾಟ, ನಿಯಂತ್ರಣ ತಪ್ಪಿದ ಗುಂಪು Watch Video
ವೈರಲ್ ಆಗುತ್ತಿರುವ ವಿಡಿಯೋ ಇಲ್ಲಿದೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ