Indian Premier League 2024: ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ 2024 ರಲ್ಲಿ Hardik Pandya ನೇತೃತ್ವದಲ್ಲಿ Mumbai Indians ತಂಡ IPL 2024 ರಲ್ಲಿ ಅತ್ಯಂತ ನಿರಾಶಾದಾಯಕ ಪ್ರದರ್ಶನ ತೋರಿದೆ. ಮುಂಬೈ ಇಂಡಿಯನ್ಸ್ ಇದುವರೆಗೆ ಆಡಿದ ಮೂರೂ ಪಂದ್ಯಗಳಲ್ಲಿ ಸೋಲನ್ನು ಅನುಭವಿಸಿದೆ. ಐಪಿಎಲ್ 2024ರ ಆರಂಭಕ್ಕೂ ಮುನ್ನವೇ ಹಾರ್ದಿಕ್ ಪಾಂಡ್ಯ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮುಂಬೈ ಇಂಡಿಯನ್ಸ್ (Mumbai Indians) ತಂಡದ ಕಳಪೆ ಪ್ರದರ್ಶನದ ಬಾಳಿಕೆ, ಹಾರ್ದಿಕ್ ಪಾಂಡ್ಯ ಹೆಚ್ಚು ಟ್ರೋಲ್ ಗೆ ಗುರಿಯಾಗಿದ್ದಾರೆ.
ಮಾಧ್ಯಮ ವರದಿಗಳ ಪ್ರಕಾರ, ರೋಹಿತ್ ಶರ್ಮಾ (Rohit Sharma) ಮುಂಬೈ ಇಂಡಿಯನ್ಸ್ ತೊರೆಯಲು ಯೋಜಿಸುತ್ತಿದ್ದಾರೆ ಎನ್ನಲಾಗುತ್ತಿದೆ, ಏಕೆಂದರೆ ಅವರು ಹಾರ್ದಿಕ್ ಅವರ ನಾಯಕತ್ವದಿಂದ ನಿರಾಶೆ ಹೊಂದಿದ್ದಾರೆ ಎನ್ನಲಾಗುತ್ತಿದೆ. ಏತನ್ಮಧ್ಯೆ, ಹಾರ್ದಿಕ್ ಪಾಂಡ್ಯ ದೇವರ ಆಶೀರ್ವಾದ ಪಡೆಯಲು ಸೋಮನಾಥ ದೇವಾಲಯಕ್ಕೆ (MI Skipper Reaches Somanath Temple To Take His Blessings) ತಲುಪಿದ್ದಾರೆ.
ಸೋಮನಾಥ್ ದೇವಸ್ಥಾನ ತಲುಪಿದ ಹಾರ್ದಿಕ್ ಪಾಂಡ್ಯ (Mumbai Indians Skipper In Somanath Temple)
ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಅವರು ಸೋಮನಾಥ ದೇವಸ್ಥಾನದಲ್ಲಿ ಪೂರ್ಣ ವಿಧಿವಿಧಾನಗಳೊಂದಿಗೆ ಭಗವಂತನ ಆರಾಧನೆಯಲ್ಲಿ ತೊಡಗಿರುವ ವೀಡಿಯೊವನ್ನು ಎಎನ್ಐ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.
ಈ ವಿಡಿಯೋಗೆ (IPL 2024 Viral Video) ಅಭಿಮಾನಿಗಳು ನಿರಂತರವಾಗಿ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಈ ಕುರಿತು ಬರೆದುಕೊಂಡ ಓರ್ವ ಬಳಕೆದಾರ, 'ಬನ್ನಿ, ನಿಮ್ಮ ಒಳ್ಳೆಯ ಸಮಯ ಪ್ರಾರಂಭವಾಗಿದೆ' ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರ, 'ಕೆಟ್ಟ ಸಮಯ ಬಂದ ತಕ್ಷಣ, ನಾವು ದೇವರನ್ನು ಆಶ್ರಯಿಸುತ್ತೇವೆ' ಎಂದು ಬರೆದಿದ್ದರೆ, ಮೂರನೇ ಬಳಕೆದಾರರು 'ಆದರೂ ಕೂಡ ಅಭಿಮಾನಿಗಳಿಂದ ನಿಂದನೆಗೆ ಒಳಗಾಗಲಿದ್ದಾನೆ' ಎಂದು ಬರೆದಿದ್ದಾರೆ.
ಎಂಐ ಮುಂದಿನ ಪಂದ್ಯ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ನಡೆಯಲಿದೆ
ಹಾರ್ದಿಕ್ ಪಾಂಡ್ಯ ಕಳೆದ ಎರಡು ಐಪಿಎಲ್ ಸೀಸನ್ಗಳಲ್ಲಿ ಗುಜರಾತ್ ಟೈಟಾನ್ಸ್ನ (Gujarat Titans) ಭಾಗವಾಗಿದ್ದರು. ಹಾರ್ದಿಕ್ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ಮೊದಲ ಋತುವಿನಲ್ಲಿ ಟ್ರೋಫಿ ಗೆದ್ದು ಎರಡನೇ ಋತುವಿನಲ್ಲಿ ರನ್ನರ್ ಅಪ್ ಆಯಿತು. ಐಪಿಎಲ್ 2024 ರ ಮೊದಲು, ಮುಂಬೈ ಇಂಡಿಯನ್ಸ್ ಹಾರ್ದಿಕ್ ಪಾಂಡ್ಯ ಅವರನ್ನು ಗುಜರಾತ್ ಟೈಟಾನ್ಸ್ಗೆ 15 ಕೋಟಿ ರೂ.ನೀಡಿ ಖರೀದಿಸಿತ್ತು.
ಇದನ್ನೂ ಓದಿ-IPL 2024: Shah Rukh Khan ಕಾರಣ KKR ಸತತ ಪಂದ್ಯಗಳನ್ನು ಗೆಲ್ಲುತ್ತಿದೆಯೇ? ಇಲ್ಲಿದೆ ಬಿಗ್ ಅಪ್ಡೇಟ್!
ಇದಾದ ಬಳಿಕ ಫ್ರಾಂಚೈಸಿ ರೋಹಿತ್ ಶರ್ಮಾ ಅವರನ್ನು ನಾಯಕತ್ವ ಸ್ಥಾನದಿಂದ ತೆಗೆದುಹಾಕಿ ಹಾರ್ದಿಕ್ ಪಾಂಡ್ಯಗೆ ನಾಯಕತ್ವವನ್ನು ಹಸ್ತಾಂತರಿಸಿತು. ಇದುವರೆಗೆ ಹಾರ್ದಿಕ್ ಪಾಂಡ್ಯ ಐಪಿಎಲ್ 2024 ರಲ್ಲಿ ಅಭಿಮಾನಿಗಳಿಂದ ಬೆಂಬಲ ಸಿಕ್ಕಿಲ್ಲ. ತವರಿನ ವಾಂಖೆಡೆ ಸ್ಟೇಡಿಯಂನಲ್ಲಿ ಕೂಡ ಅಭಿಮಾನಿಗಳು ಹಾರ್ದಿಕ್ ಪಾಂಡ್ಯ ಅವರನ್ನು ಟ್ರೋಲ್ ಮಾಡಿದ್ದಾರೆ.
ಇದನ್ನೂ ಓದಿ-IPL 2024: ತಪ್ಪಾಗಿ ಖರೀದಿಸಲ್ಪಟ್ಟ ಈ ಆಟಗಾರನ ಮೇಲೆ ಇದೀಗ Preity Zinta ಫುಲ್ ಫಿದಾ!
ಮುಂಬೈ ಇಂಡಿಯನ್ಸ್ ಕಳೆದ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ 6 ವಿಕೆಟ್ಗಳ ಹೀನಾಯ ಸೋಲನ್ನು ಅನುಭವಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 125 ರನ್ ಗಳಿಸಲಷ್ಟೇ ಶಕ್ತವಾಯಿತು. ರಾಜಸ್ಥಾನ್ ರಾಯಲ್ಸ್ (Rajasthan Royals) 27 ಎಸೆತಗಳು ಬಾಕಿ ಇರುವಂತೆಯೇ ಗುರಿ ತಲುಪಿತ್ತು. ಮುಂಬೈ ಇಂಡಿಯನ್ಸ್ ಮುಂದಿನ ಪಂದ್ಯವನ್ನು ದೆಹಲಿ ಕ್ಯಾಪಿಟಲ್ಸ್ (Delhi Capitals) ವಿರುದ್ಧ ಏಪ್ರಿಲ್ 7 ರಂದು ವಾಂಖೆಡೆ ಸ್ಟೇಡಿಯಂನಲ್ಲಿ (Wankhede Stadium ) ಆಡಲಿದೆ.
ಎಎನ್ಐ ಹಂಚಿಕೊಂಡ ವಿಡಿಯೋ ಇಲ್ಲಿದೆ ನೋಡಿ
#WATCH | Gujarat: Indian Cricket Team all-rounder Hardik Pandya offers prayers at Somnath Temple.
Source: Somnath Temple Trust pic.twitter.com/F8n05Q1LSA
— ANI (@ANI) April 5, 2024
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ