IPL 2024: RCB ಯ ದಿಗ್ಗಜ ಆಟಗಾರರ ಪರೀಕ್ಷೆ ತೆಗೆದುಕೊಂಡ Virat, King Kohli ಕುರಿತ ಈ ಸಂಗತಿಗಳು ನಿಮಗೂ ಗೊತ್ತಿರಲಿ!
IPL 2024 ರಲ್ಲಿ ಏಪ್ರಿಲ್ 11 ರಂದು ನಡೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 7 ವಿಕೆಟ್ ಗಳಿಂದ ಮಣಿಸಿದೆ. ಈ ಪಂದ್ಯ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದಿತ್ತು.
IPL 2024 Virat Kohli questionaire for his fellow rcb teammates: ಆದರೆ ಈ ಪಂದ್ಯಕ್ಕು ಮುನ್ನ ಆರ್ಸಿಬಿ ತಂಡ ತನ್ನ ಇನ್ಸ್ಟಾಗ್ರಾಮ ಹ್ಯಾಂಡಲ್ ಮೂಲಕ ಸಂದರ್ಶನದ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಇದರಲ್ಲಿ ವಿರಾಟ್ ಕೊಹ್ಲಿ ಆರ್ಸೀಬಿಯ ದಿಗ್ಗಜ ಆಟಗಾರರಿಗೆ ತನ್ನ ಕುರಿತಾದ ಕೆಲ ಪ್ರಶ್ನೆಗಳನ್ನು ಕೇಳಿದ್ದಾರೆ.
ಈ ಸಂದರ್ಶನದಲ್ಲಿ ಮೊದಲ ಪ್ರಶ್ನೆ ಕೇಳಿದ ವಿರಾಟ್, ಬೌಲಿಂಗ್ ನಲ್ಲಿ ನನ್ನ ವಿಶಿಷ್ಟ ದಾಖಲೆ ಯಾವುದು ಎಂದು ಪ್ರಶ್ನಿಸುತ್ತಾರೆ. ಈ ಪ್ರಶ್ನೆಗೆ ಸರಿಯಾದ ಉತ್ತರ ನೀಡಿದ ಮಹಮ್ಮದ್ ಸಿರಾಜ್ 'ವೈಡ್ ಬಾಲ್ ನಲ್ಲಿ ವಿಕೆಟ್ ಪಡೆದಿದ್ದು' ಎಂದು ಹೇಳುತ್ತಾರೆ. ಸಿರಾಜ್ ಬಿಟ್ಟು ಇತರ ಯಾವುದೇ ಆಟಗಾರರು ಸರಿಯಾದ ಉತ್ತರವನ್ನು ನೀಡಿಲ್ಲ. ಬಳಿಕ ಈ ಪ್ರಶ್ನೆಗೆ ವಿವರಣೆ ನೀಡಿದ ಕೊಹ್ಲಿ, ತಾವು ವೈಡ್ ಬಾಲ್ ಹಾಕಿ ಕೆವಿನ್ ಪೀಟರ್ಸನ್ ಅವರನ್ನು ಸ್ಟಂಪ್ಔಟ್ ಮಾಡಿರುವುದಾಗಿ ಹೇಳುತ್ತಾರೆ. ಇದೊಂದು ಲೀಗಲ್ ಡಿಲೆವರಿ ಅಲ್ಲದ ವಿಕೆಟ್ ಆಗಿತ್ತು ಎಂದು ವಿರಾಟ್ ಹೇಳುತ್ತಾರೆ.
ಇದನ್ನೂ ಓದಿ-'IPL 2025 ರಲ್ಲಿ ಯಲ್ಲೊ ಜರ್ಸಿ ಧರಿಸಲಿದ್ದಾರೆ ರೋಹಿತ್ ಶರ್ಮಾ!' ಇಂಗ್ಲೀಷ್ ಆಟಗಾರನ ಸಂಚಲನ ಮೂಡಿಸುವ ಹೇಳಿಕೆ
ಬಳಿಕ ಮುಂದುವರೆದು ಎರಡನೇ ಪ್ರಶ್ನೆ ಕೇಳಿದ ವಿರಾಟ್, ನನ್ನ ವೃತ್ತಿ ಜೀವನದಲ್ಲಿ ನನ್ನ ಅಚ್ಚುಮೆಚ್ಚಿನ ಇನ್ನಿಂಗ್ಸ್ ಯಾವುದಾಗಿದೆ ಎಂದು ಕೇಳುತ್ತಾರೆ. ಇದಕ್ಕೆ ಸ್ವಾರಸ್ಯಕರ ಉತ್ತರ ನೀಡಿದ ಫಫ್ ಡುಪ್ಲೇಸಿ ಮತ್ತು ರಜತ್ ಪಾಟಿದಾರ್, ಆಸ್ಟ್ರೇಲಿಯಾ ವಿರುದ್ಧ ಆಸ್ಟ್ರೇಲಿಯಾ ವಿರುದ್ಧವೇ ಯಾವುದಾದರೊಂದು ಇನ್ನಿಂಗ್ಸ್ ಇರಬಹುದು ಎಂದು ಗೆಸ್ಸ್ ಮಾಡುತ್ತಾರೆ. ಇನ್ನೊಂದೆಡೆ ಸಿರಾಜ್ ಪರ್ಥ್ ಟೆಸ್ಟ್ ಮ್ಯಾಚ್ ಇನ್ನಿಂಗ್ಸ್ ಎಂದು ಹೇಳುತ್ತಾರೆ ಮತ್ತು ಕೊನೆಯದಾಗಿ ದಿನೇಶ್ ಕಾರ್ತಿಕ್, ವಿರಾಟ್ 2022 ರಲ್ಲಿ ಟಿ20 ವಿಶ್ವಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ 82 ರನ್ ಗಳ ಇನ್ನಿಂಗ್ಸ್ ಎಂದು ಹೇಳುತ್ತಾರೆ ಮತ್ತು ವಿರಾಟ್ ಕೂಡ ಅದಕ್ಕೆ ಒಪ್ಪಿಗೆ ಸೂಚಿಸುತ್ತಾರೆ.
ಇದನ್ನೂ ಓದಿ-IPL 2024: Rohit Sharma ಔಟಾಗಿದ್ದಕ್ಕೆ ಅಭಿಮಾನಿಯ ಹತ್ಯೆ! ಇದೆಂಥಾ ಹುಚ್ಚು ಅಭಿಮಾನ ಮಾರಾಯ್ರೆ?
ವಿಡಿಯೋ ಅಂತ್ಯದಲ್ಲಿ ಟೆಸ್ಟ್ ನ ಕೊನೆಯ ಪ್ರಶ್ನೆ ಕೇಳುತ್ತಾ, ಯಾವ ಆಟಗಾರನ ಜೊತೆಗೆ ನನಗೆ ಆಡುವ ಇಚ್ಛೆ ಇದೆ ಎಂದು ಕೇಳುತ್ತಾರೆ. ಈ ಪ್ರಶ್ನೆಗೆ ಉತ್ತರಿಸಿದ ಬಹುತೇಕರು ವಿವಿಯನ್ ರಿಚರ್ಡ್ಸ್ ಎಂದು ಹೇಳುತ್ತಾರೆ. ಆದರೆ, ಫ್ಲಪ್ ಡುಪ್ಲೇಸಿ ಬ್ರಾಯನ್ ಲಾರಾ ಹೆಸರನ್ನು ಆಯ್ಕೆ ಮಾಡುತ್ತಾರೆ. ಆದರೆ, ವಿರಾಟ್ ವಿವಿಯನ್ ರಿಚರ್ಡ್ಸ್ ಹೆಸರಿನ ಮೇಲೆ ತನ್ನ ಮುದ್ರೆ ಒಟ್ಟುತ್ತಾರೆ ಮತ್ತು ತನ್ನ ಉತ್ತರ ಹೇಳುತ್ತಾರೆ.
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ