IPL 2024: CSK VS RCB First Match Of IPL 2024: ಐಪಿಎಲ್ 2024 ಆರಂಭಗೊಂಡಿದ್ದು ನಿನ್ನೆ ನಡೆದ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್,  RCB ಅನ್ನು 6 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಪಂದ್ಯಾವಳಿಯಲ್ಲಿ ತನ್ನ ಶುಭಾರಂಭ ಮಾಡಿದೆ. ಮುಸ್ತಫಿಜುರ್ ರೆಹಮಾನ್ ಸಿಎಸ್ ಕೆ ಗೆಲುವಿನಲ್ಲಿ ಅದ್ಭುತ ಪಾತ್ರ ತೀರ್ವಹಿಸುತ್ತ,  4 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅತ್ಯುತ್ತಮ ಬೌಲಿಂಗ್‌ಗಾಗಿ ರೆಹಮಾನ್‌ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಅವಧಿಯಲ್ಲಿ ರುತುರಾಜ್ ಗಾಯಕ್ವಾಡ್ ಅವರು ಸಿಎಸ್‌ಕೆ ತಂಡದ ನಾಯಕತ್ವ ವಹಿಸಿದ್ದರು, ಆದರೆ ಇಡೀ ಪಂದ್ಯದ ಅವಧಿಯಲ್ಲಿ ಧೋನಿ ಜವಾಬ್ದಾರಿಯನ್ನು ವಹಿಸಿಕೊಂಡು ಫೀಲ್ಡಿಂಗ್ ಹೊಂದಿಸುತ್ತಿದ್ದರು ಎಂಬುದು ಇಲ್ಲಿ ಗಮನಾರ್ಹ ಸಂಗತಿಯಾಗಿತ್ತು.  ಇದನ್ನು ಕಂಡು ಭಾರತದ ಮಾಜಿ ಕ್ರಿಕೆಟ್  ದಿಗ್ಗಜ ವೀರೇಂದ್ರ ಸೆಹ್ವಾಗ್ ತಮ್ಮ ಕಾಮೆಂಟ್ರಿಯಲ್ಲಿ ಭಾರಿ ತಮಾಷೆ ಮಾಡಿರುವುದು ಕಂಡುಬಂದ್ದಿದೆ.


COMMERCIAL BREAK
SCROLL TO CONTINUE READING

ಪಂದ್ಯದ ಅವಧಿಯಲ್ಲಿ, ಟಿವಿ ಪರದೆಯ ಮೇಲೆ ಧೋನಿಯ ಮುಖವನ್ನೇ ಹೆಚ್ಚು ತೋರಿಸಲಾಗುತ್ತಿತ್ತು (Who Is Captain Of CSC), ಇದನ್ನು  ಸೆಹ್ವಾಗ್ (Virendra Sehwag Viral Comments) ಸಾಕಷ್ಟು ಎಂಜಾಯ್ ಮಾಡಿದ್ದಾರೆ ಮತ್ತು ಕಾಮೆಂಟರಿ ಸಮಯದಲ್ಲಿ, "ಬ್ರೋ ರಿತುರಾಜ್ ಮುಖವನ್ನೂ (ಕ್ಯಾಮೆರಾದಲ್ಲಿ) ತೋರಿಸು" ಎಂದು ಕ್ಯಾಮರಾಮನ್ ನೇರವಾಗಿ ಹೇಳುವುದು ಕಂಡುಬಂದಿದೆ. 'ಅಣ್ಣಾ, ನೀವು ಕೇವಲ ಧೋನಿಯ ಮುಖವನ್ನು ಮಾತ್ರ ತೋರಿಸುತ್ತಿರುವಿರಿ' ಎಂದು ಕಾಲೆಳೆದಿದ್ದಾರೆ.


ಇದನ್ನೂ ಓದಿ-IPL 2024: ಐಪಿಎಲ್ ನ ಈ ತಂಡದಲ್ಲಿ ಆಸ್ಟ್ರೇಲಿಯಾ-ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್ ನ ಓರ್ವ ಆಟಗಾರ ಕೂಡ ಇಲ್ಲ!


ಸೆಹ್ವಾಗ್ ಅವರ ಈ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಐಪಿಎಲ್ ಆರಂಭವಾಗುವ ಒಂದು ದಿನ ಮೊದಲು, ಧೋನಿ ನಾಯಕತ್ವವನ್ನು ರುತುರಾಜ್ ಗಾಯಕ್ವಾಡ್‌ಗೆ ಹಸ್ತಾಂತರಿಸಿದ್ದಾರೆ ಎಂಬುದು ಇಲ್ಲಿ ಉಲ್ಲೇಖನೀಯ ಸಂಗತಿಯಾಗಿದೆ. ಈ ಕುರಿತು ಮಾತನಾಡಿದ್ದ ಗಾಯಕ್ವಾಡ್, ಮಾಹಿ ಈ ಬಗ್ಗೆ ಮೊದಲೇ ತಮಗೆ ತಿಳಿಸಿದ್ದು. ಅವರು ನಾಯಕತ್ವ ತೊರೆಯುವ ನಿರ್ಧಾರವನ್ನು ವಾರದ ಹಿಂದೆಯೇ ಕೈಗೊಳ್ಳಲಾಗಿತ್ತು' ಎಂದಿದ್ದರು.


ಇದನ್ನೂ ಓದಿ-IPL 2024: ಐಪಿಎಲ್ ನ ಒಂದೇ ಪಂದ್ಯದಲ್ಲಿ ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದಾನೆ ಈ ಬ್ಯಾಟ್ಸ್ ಮನ್!


ಇನ್ನೊಂದೆಡೆ ನಾಯಕತ್ವದ ಕುರಿತು ಮಾತನಾಡಿದ್ದ ಗಾಯಕ್ವಾಡ್, "ನಾನು ಯಾವಾಗಲೂ ನಾಯಕತ್ವವನ್ನು ಅನುಭವಿಸಿದ್ದೇನೆ, ಅದನ್ನು ಎಂದಿಗೂ ಹೆಚ್ಚುವರಿ ಒತ್ತಡ ಎಂದು ಭಾವಿಸಿಲ್ಲ ... ನನಗೆ ಅದನ್ನು ನಿಭಾಯಿಸುವ ಅನುಭವವಿದೆ, ಯಾವುದೇ ಒತ್ತಡವನ್ನು ಅನುಭವಿಸಿಲ್ಲ, ನಿಸ್ಸಂಶಯವಾಗಿ ಮಾಹಿ ಭಾಯ್ ಕೂಡ ಇದ್ದರು.. ನಮ್ಮ ತಂಡದಲ್ಲಿ ಎಲ್ಲರೂ ಇದ್ದಾರೆ ಎಂದು ನಾನು ಭಾವಿಸುತ್ತೇನೆ. ಸ್ವಾಭಾವಿಕ ಸ್ಟ್ರೋಕ್‌ಪ್ಲೇಯರ್, ಅಜಿಂಕ್ಯ ರಹಾನೆ ಕೂಡ ಸಕಾರಾತ್ಮಕವಾಗಿ ಆಡುತ್ತಿದ್ದಾರೆ. ಪ್ರತಿಯೊಬ್ಬರಿಗೂ ಅವರ ಪಾತ್ರ ಮತ್ತು ಯಾವ ಬೌಲರ್ ಅನ್ನು ತೆಗೆದುಕೊಳ್ಳಬೇಕು ಎಂದು ತಿಳಿದಿದೆ. ಪಾತ್ರದ ಸ್ಪಷ್ಟತೆ ನಿಜವಾಗಿಯೂ ಸಹಾಯ ಮಾಡುತ್ತದೆ. 15ನೇ ಓವರ್ ವರೆಗೆ ಮೂವರು ಬ್ಯಾಟ್ ಮಾಡಿದ್ದರೆ, ಅದು ಸುಲಭವಾಗುತ್ತಿತ್ತು ಎಂದು ಹೇಳಿದ್ದಾರೆ. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ