IPL 2022, RCB : ವಿರಾಟ್ ಕೊಹ್ಲಿ ತಮ್ಮ ಸ್ನೇಹಿತ ಮತ್ತು ದಕ್ಷಿಣ ಆಫ್ರಿಕಾದ ಸ್ಟಾರ್ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ ಮುಂದಿನ ವರ್ಷ ಯಾವುದಾದರೂ ಪಾತ್ರದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಮರಳುತ್ತಾರೆ ಎಂದು ಹಾರೈಸಿದ್ದಾರೆ. ಎಬಿ ಡಿವಿಲಿಯರ್ಸ್ ಆರ್‌ಸಿಬಿಯ ಅವಿಭಾಜ್ಯ ಅಂಗವಾಗಿದ್ದರು, ಆದರೆ ಅವರು ಕಳೆದ ವರ್ಷ ಎಲ್ಲಾ ರೀತಿಯ ಕ್ರಿಕೆಟ್‌ನಿಂದ ನಿವೃತ್ತರಾಜಿ ಕ್ರಿಕೆಟ್ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ದಾರೆ.


COMMERCIAL BREAK
SCROLL TO CONTINUE READING

ಎಬಿ ಡಿವಿಲಿಯರ್ಸ್ ಮತ್ತೆ ಆರ್‌ಸಿಬಿ ತಂಡ ಸೇರಬಹುದೇ?


ಆರ್‌ಸಿಬಿಯ ಟ್ವಿಟರ್ ನಲ್ಲಿ ಹಂಚಿಕೊಂಡಿರುವ ವಿಡಿಯೋ ಒಂದರಲ್ಲಿ ಮಾತನಾಡಿದ ವಿರಾಟ್ ಕೊಹ್ಲಿ, 'ನಾನು ಎಬಿ ಡಿವಿಲಿಯರ್ಸ್‌ನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾನು ಎಬಿ ಡಿವಿಲಿಯರ್ಸ್ ಜೊತೆ ನಿಕಟ ಸಂಪರ್ಕದಲ್ಲಿದ್ದೇನೆ. ಅವರು ಇತ್ತೀಚೆಗೆ ಗಾಲ್ಫ್ ವೀಕ್ಷಿಸಲು ತಮ್ಮ ಕುಟುಂಬದೊಂದಿಗೆ ಅಮೇರಿಕಾಗೆ ಹೋಗಿದ್ದರು. ಅವರು ಪ್ರತಿದಿನ ಆರ್‌ಸಿಬಿ ಯ ಪ್ರದರ್ಶನವನ್ನು ಮೇಲ್ವಿಚಾರಣೆ ಮಾಡುತ್ತಾರೆ ಮತ್ತು ಮುಂದಿನ ವರ್ಷ ಕೆಲವು ಪಾತ್ರದಲ್ಲಿ ತಂಡದೊಂದಿಗೆ ಇರುತ್ತಾರೆ ಎಂದು ನಿರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ.


ಇದನ್ನೂ ಓದಿ : IPL 2022: ಫಾರ್ಮ್ ಕಳೆದುಕೊಂಡಿರುವ ಕೊಹ್ಲಿ ಹೇಳಿದ್ದೇನು ಗೊತ್ತೇ?


ಕಳಪೆ ಫಾರ್ಮ್‌ನಲ್ಲಿ ಹೋರಾಡುತ್ತಿರುವ ಕೊಹ್ಲಿ 


ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ ಅತ್ಯಂತ ಕಳಪೆ ಫಾರ್ಮ್‌ನಲ್ಲಿ ಹೋರಾಡುತ್ತಿದ್ದು, 12 ಪಂದ್ಯಗಳಲ್ಲಿ ಕೇವಲ 216 ರನ್ ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಹ್ಲಿ ಮೂರು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಈ ಕುರಿತು ಮಾತನಾಡಿರುವ ಕೊಹ್ಲಿ, ನನ್ನ ವೃತ್ತಿಜೀವನದಲ್ಲಿ ಈ ರೀತಿ ಆಗಿಲ್ಲ. ನಾನು ಸುಮ್ಮನೆ ನಗುತ್ತೇನೆ. ಆಟವು ನನಗೆ ತೋರಿಸಬೇಕಾದುದನ್ನು ಅವರು ನನಗೆ ತೋರಿಸಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.


ಟೀಕಾಕಾರರನ್ನು ಸೈಡ್ ಗಿಟ್ಟ ಕೊಹ್ಲಿ!


ಟೀಕಾಕಾರರ ಟೀಕೆಗಳಿಗೆ ತಲೆಕೆಡಿಸಿಕೊಳ್ಳುದಿಲ್ಲ ಕೊಡುವುದಿಲ್ಲ. ಅವರು ನನ್ನ ಸ್ಥಾನವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಮತ್ತು ನಾನು ಹಾಗೆ  ಏನು ಯೋಚಿಸುತ್ತೇನೆ ಎಂದು ಯೋಚಿಸಲು ಸಾಧ್ಯವಿಲ್ಲ. ಆ ಕ್ಷಣಕೋಸ್ಕರ ಬದುಕಲು ಸಾಧ್ಯವಿಲ್ಲ. ನಾನು ಟಿವಿಯ ಸೌಂಡ್ ಆಫ್ ಮಾಡುತ್ತೇನೆ ಅಥವಾ ನಾನು ಅವರತ್ತ ಗಮನ ಹರಿಸುವುದಿಲ್ಲ. ಕೊಹ್ಲಿ ಆರ್‌ಸಿಬಿ ನಾಯಕತ್ವವನ್ನು ತೊರೆದ ನಂತರ ಫಾಫ್ ಡು ಪ್ಲೆಸಿಸ್ ನಾಯಕತ್ವ ವನ್ನು ವಹಿಸಿಕೊಂಡಿದ್ದಾರೆ. ನಾನು ಮತ್ತು ಫಾಫ್ ಪರಸ್ಪರ ಗೌರವವನ್ನು ಹೊಂದಿದ್ದೇವೆ ಎಂದು ಕೊಹ್ಲಿ ಹೇಳಿದ್ದಾರೆ. ನಮ್ಮಲ್ಲಿ ಉತ್ತಮ ಬಾಂಧವ್ಯದ ಬಗ್ಗೆ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ : Mary Kom: ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ತಯಾರಿ ಆರಂಭಿಸಿದ ಮೇರಿ ಕೋಮ್


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.