IPL 2022: ಫಾರ್ಮ್ ಕಳೆದುಕೊಂಡಿರುವ ಕೊಹ್ಲಿ ಹೇಳಿದ್ದೇನು ಗೊತ್ತೇ?

ಐಪಿಎಲ್ ಟೂರ್ನಿಯಲ್ಲಿ ರನ್ ಗಳಿಸಲು ಹೆಣಗಾಡುತ್ತಿರುವ ವಿರಾಟ್ ಕೊಹ್ಲಿ ಈಗ ಕೊನೆಗೂ ಮೌನ ಮುರಿದಿದ್ದಾರೆ. ಐಪಿಎಲ್ ಟೂರ್ನಿಯಲ್ಲಿ ಕಳೆದ 12 ಪಂದ್ಯಗಳಲ್ಲಿ ಕೇವಲ ಒಂದು ಅರ್ಧ ಶತಕದೊಂದಿಗೆ 216 ರನ್ ಗಳಿಸಿರುವ ಕೊಹ್ಲಿ ತಮ್ಮ ವೃತ್ತಿಜೀವನದ ಅತ್ಯಂತ ಕೆಟ್ಟ ಕ್ಷಣಗಳನ್ನು ಈಗ ಅವರು ಎದುರಿಸುತ್ತಿದ್ದಾರೆ. ಅಚ್ಚರಿ ಎಂದರೆ ಅವರು ಈ ಋತುವಿನಲ್ಲಿ ಮೂರು ಭಾರಿ ಶೂನ್ಯಕ್ಕೆ ಔಟಾಗಿದ್ದರು.

Written by - Zee Kannada News Desk | Last Updated : May 11, 2022, 03:30 PM IST
  • ಈ ಋತುವಿನ ಐಪಿಎಲ್‌ನಲ್ಲಿ ನಿರರ್ಗಳವಾಗಿ ಸ್ಕೋರ್ ಮಾಡಲು ಕೊಹ್ಲಿ ಅಸಮರ್ಥತೆಯನ್ನು ಇಯಾನ್ ಬಿಷಪ್ ಎತ್ತಿ ತೋರಿಸುವುದರೊಂದಿಗೆ ಅವರ ಕಳಪೆ ಫಾರ್ಮ್ ಕಳವಳವನ್ನು ಹುಟ್ಟುಹಾಕಿದೆ.
  • ವಿವಿಧ ರೀತಿಯ ಬೌಲರ್‌ಗಳಿಗೆ ಔಟ್ ಆಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಇಯಾನ್ ಬಿಷಪ್ ಹೇಳಿದ್ದಾರೆ.
IPL 2022: ಫಾರ್ಮ್ ಕಳೆದುಕೊಂಡಿರುವ ಕೊಹ್ಲಿ ಹೇಳಿದ್ದೇನು ಗೊತ್ತೇ?  title=
Photo Courtesy: Twitter

ನವದೆಹಲಿ: ಐಪಿಎಲ್ ಟೂರ್ನಿಯಲ್ಲಿ ರನ್ ಗಳಿಸಲು ಹೆಣಗಾಡುತ್ತಿರುವ ವಿರಾಟ್ ಕೊಹ್ಲಿ ಈಗ ಕೊನೆಗೂ ಮೌನ ಮುರಿದಿದ್ದಾರೆ.ಐಪಿಎಲ್ ಟೂರ್ನಿಯಲ್ಲಿ ಕಳೆದ 12 ಪಂದ್ಯಗಳಲ್ಲಿ ಕೇವಲ ಒಂದು ಅರ್ಧ ಶತಕದೊಂದಿಗೆ 216 ರನ್ ಗಳಿಸಿರುವ ಕೊಹ್ಲಿ ತಮ್ಮ ವೃತ್ತಿಜೀವನದ ಅತ್ಯಂತ ಕೆಟ್ಟ ಕ್ಷಣಗಳನ್ನು ಈಗ ಅವರು ಎದುರಿಸುತ್ತಿದ್ದಾರೆ.ಅಚ್ಚರಿ ಎಂದರೆ ಅವರು ಈ ಋತುವಿನಲ್ಲಿ ಮೂರು ಭಾರಿ ಶೂನ್ಯಕ್ಕೆ ಔಟಾಗಿದ್ದರು.

ಈಗ ಮಿಸ್ಟರ್ ನ್ಯಾಗ್ಸ್ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿರುವ ಅವರು 'ನನ್ನ ವೃತ್ತಿಜೀವನದಲ್ಲಿ ನನಗೆ ಇದುವರೆಗೆ ಸಂಭವಿಸಿಲ್ಲ,ಹಾಗಾಗಿ ನಾನು ನಗುತ್ತಿದ್ದೆ. ಆಟದಲ್ಲಿ ಪ್ರದರ್ಶಿಸಬೇಕಾದ ಎಲ್ಲವನ್ನು ಈಗಾಗಲೇ ನೋಡಿದ್ದೇನೆ ಎಂದು ನನಗೆ ಅನಿಸಿತು' ಎಂದು ಆರ್‌ಸಿಬಿಯ ಟ್ವಿಟರ್ ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಿದ ಚಾಟ್‌ನಲ್ಲಿ ಕೊಹ್ಲಿ ಹೇಳಿದರು.

ಇದನ್ನೂ ಓದಿ: RCB vs SRH : ಡಕ್ ಔಟ್ ಆದ ವಿರಾಟ್ ಕೊಹ್ಲಿ : ಕೋಪಗೊಂಡ ಫ್ಯಾನ್ಸ್ ಹೇಳಿದ್ದು ಹೀಗೆ!

ಈ ಋತುವಿನ ಐಪಿಎಲ್‌ನಲ್ಲಿ ನಿರರ್ಗಳವಾಗಿ ಸ್ಕೋರ್ ಮಾಡಲು ಕೊಹ್ಲಿ ಅಸಮರ್ಥತೆಯನ್ನು ಇಯಾನ್ ಬಿಷಪ್ ಎತ್ತಿ ತೋರಿಸುವುದರೊಂದಿಗೆ ಅವರ ಕಳಪೆ ಫಾರ್ಮ್ ಕಳವಳವನ್ನು ಹುಟ್ಟುಹಾಕಿದೆ.ವಿವಿಧ ರೀತಿಯ ಬೌಲರ್‌ಗಳಿಗೆ ಔಟ್ ಆಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ ಎಂದು ಇಯಾನ್ ಬಿಷಪ್ ಹೇಳಿದ್ದಾರೆ.

ಇನ್ನೊಂದೆಡೆಗೆ ತಮ್ಮ ವಿರುದ್ಧ ಬಂದಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿರುವ ವಿರಾಟ್ ಕೊಹ್ಲಿ, 'ತಾವು ಟೀಕಾಕಾರರಿಗೆ ಕಿವಿ ಕೊಡುವುದಿಲ್ಲ ಮತ್ತು ಯಾವಾಗಲೂ ಅಂತವರನ್ನು ದೂರವಿಡುವುದಾಗಿ ಕೊಹ್ಲಿ ಹೇಳಿದ್ದಾರೆ.ಅವರು ನನ್ನ ಸ್ಥಾನಗಳಲ್ಲಿ ಇರಲು ಸಾಧ್ಯವಿಲ್ಲ, ನನ್ನ ಭಾವನೆಗಳನ್ನು ಅನುಭವಿಸಲು ಸಾಧ್ಯವಿಲ್ಲ, ಅವರು ಆ ಕ್ಷಣದಲ್ಲಿ ಬದುಕಲು ಸಾಧ್ಯವಿಲ್ಲ," ಎಂದು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಹೇಳಿದರು.

'ನೀವು ಶಬ್ದವನ್ನು ಹೇಗೆ ಕಡಿತಗೊಳಿಸುತ್ತೀರಿ ಎಂದು ನೀವು ಕೇಳಿದ್ದೀರಿ, ಅಂತಹ ಸಂದರ್ಭದಲ್ಲಿ ನೀವು ಸಾಮಾನ್ಯವಾಗಿ ಟಿವಿಯನ್ನು ಮ್ಯೂಟ್ ಮಾಡುತ್ತೀರಿ ಅಥವಾ ಜನರು ಏನು ಹೇಳುತ್ತಾರೆಂದು ಗಮನ ಹರಿಸುವುದಿಲ್ಲ ಮತ್ತು ನಾನು ಈ ಎರಡೂ ಕೆಲಸಗಳನ್ನು ಮಾಡುತ್ತೇನೆ' ಎಂದು ಅವರು ಹೇಳಿದರು.

ಇದನ್ನೂ ಓದಿ: CSK vs DC : CSK ಅನ್ನು ಪ್ಲೇ ಆಫ್‌ಗೆ ತಲುಪಿಸಲು ಈ ನಿರ್ಧಾರ ತೆಗೆದುಕೊಂಡ ಧೋನಿ!

ಈಗ ಫ್ಯಾಫ್ ಜೊತೆಗಿನ ಸಂಬಂಧದ ಕುರಿತಾಗಿ ಮಾತನಾಡಿರುವ ಕೊಹ್ಲಿ,'ನಾನು ಮತ್ತು ಫಾಫ್ ಅವರು ದಕ್ಷಿಣ ಆಫ್ರಿಕಾದ ನಾಯಕರಾಗುವ ಮೊದಲು ಯಾವಾಗಲೂ ಚೆನ್ನಾಗಿಯೇ ಇದ್ದೇವೆ.ಫಾಫ್ ತಮ್ಮ ಬಗ್ಗೆ ಖಚಿತವಾಗಿರುವ ವ್ಯಕ್ತಿ ಮತ್ತು ಮೈದಾನದಲ್ಲಿ ಅವರಿಗೆ ಸಂಪೂರ್ಣ ಅಧಿಕಾರವಿದೆ,'' ಎಂದು ಅವರು ಹೇಳಿದರು.'ನಾನು ವಿಷಯಗಳನ್ನು ಪ್ರಸ್ತಾಪಿಸಿದರೆ, ಅವರು ಹಾಗೆ ಮಾಡಲು ಬಯಸುವುದಿಲ್ಲ ಎಂದು ಕೆಲವೊಮ್ಮೆ ಹೇಳುತ್ತಾರೆ,ಅದನ್ನು ನಾನು ತುಂಬಾ ಗೌರವಿಸುತ್ತೇನೆ.ಅದು ನೀವು ಆಡುತ್ತಿರುವ ವ್ಯಕ್ತಿಯ ಬಗ್ಗೆ ಗೌರವ ಹೆಚ್ಚಿಸುವಂತೆ ಮಾಡುತ್ತದೆ ಎಂದು ಅವರು ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News