ನವದೆಹಲಿ: IPL 2020 ಗಾಗಿ ನಡೆಯುತ್ತಿರುವ ಹರಾಜು ಪ್ರಕ್ರಿಯೆಯಲ್ಲಿ ಆಸ್ಟ್ರೇಲಿಯದ ಆಟಗಾರ ಕ್ರಿಸ್ ಲಿನ್ ಹೆಸರನ್ನು ಮೊದಲು ಹರಾಜು ಮಾಡಲಾಗಿದ್ದು, ಮುಂಬೈ ಇಂಡಿಯನ್ಸ್ ತಂಡ ಅವರ ಮೇಲೆ 2ಕೋಟಿ ರೂ.ಗಳ ಬಿಡ್ ಮುಂದಿಟ್ಟಿದೆ.  ಆ ಬಳಿಕ ಇಂಗ್ಲೆಂಡ್ ಗೆ ವಿಶ್ವಕಪ್ ತಂದುಕೊಟ್ಟ ನಾಯಕ ಒಯೇನ್ ಮಾರ್ಗನ ಅವರ ಸರದಿ ಬಂದಿದ್ದು, KKR ತಂಡ ಅವರನ್ನು 5.25ಕೋಟಿಗೆ ಖರೀದಿಸಿದೆ . ಭಾರತದ ರಾಬಿನ್ ಉತ್ತಪ್ಪ ಇನ್ಮುಂದೆ ರಾಜಸ್ಥಾನ್ ರಾಯಲ್ಸ್ ಗಾಗಿ ಬ್ಯಾಟ್ ಬೀಸಲಿದ್ದಾರೆ. ರಾಜಸ್ಥಾನ್ ರಾಯಲ್ಸ್ ಅವರಿಗಾಗಿ 2.6ಕೋಟಿ ರೂ.ಬಿಡ್ ಮುಂದಿಟ್ಟಿದೆ.


COMMERCIAL BREAK
SCROLL TO CONTINUE READING

ಆಸ್ಟ್ರೇಲಿಯಾ ಆಟಗಾರರ ಕುರಿತು ಮಾತನಾಡುವುದಾದರೆ. ಪೈಟ್ ಕಮಿನ್ಸ್ ಗೆ ಅತಿ ಹೆಚ್ಚು ಬಿಡ್ ನಡೆಸಲಾಗಿದೆ. ಅವರನ್ನು ಕೊಲ್ಕತ್ತಾ ತಂಡ 15.50 ಕೋಟಿ ರೂ.ಗೆ ಖರೀದಿಸಿದೆ. ಆಸ್ಟ್ರೇಲಿಯಾದ ಗ್ಲೆನ್  ಮ್ಯಾಕ್ಸ್ ವೆಲ್ ಅವರು ಎರಡನೇ ದುಬಾರಿ ಆಟಗಾರರಾಗಿ ಹೊರಹೊಮ್ಮಿದ್ದು, ಅವರನ್ನು ಕಿಂಗ್ಸ್ ಎಲೆವನ್ ಪಂಜಾಬ್ ತಂಡ 10.75ಕೋಟಿ ರೂ.ಗೆ ಖರೀದಿಸಿದೆ. ಆಸ್ಟ್ರೇಲಿಯಾ ತಂಡದ ನಾಯಕ ಎರಾನ್ ಫಿಂಚ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 4.40 ಕೋಟಿ ರೂ. ನೀಡಿ ಖರೀದಿಸಿದೆ.


ದಕ್ಷಿಣ ಆಫ್ರಿಕಾ ತಂಡದ ಆಟಗಾರರಾಗಿರುವ ಕ್ರಿಸ್ ಮಾರಿಸ್ ಕೂಡ ಮತ್ತೋರ್ವ ದುಬಾರಿ ಆಟಗಾರರಾಗಿ ಹೊರಹೊಮ್ಮಿದ್ದಾರೆ. RCB ತಂಡ ಅವರನ್ನು 10 ಕೋಟ ರೂ. ನೀಡಿ ಖರೀದಿಸಿದೆ. ಇಂಗ್ಲೆಂಡ್ ನ ಸ್ಯಾಮ್ ಕರೆನ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ 5.50ಕೋಟಿ ರೂ. ನೀಡಿ ಖರೀದಿಸಿದೆ. ಇಂಗ್ಲೆಂಡ್ ನವರೇ ಆದ ಇನ್ನೋರ್ವ ಆಟಗಾರ ಕ್ರಿಸ್ ವೂಕ್ಸ್ ಅವರನ್ನು ದಿಲ್ಲಿ ಕ್ಯಾಪಿಟಲ್ಸ್ ತಂಡ 1.5ಕೋಟಿ ನೀಡಿ ಖರೀದಿಸಿದೆ.