IPL 2025: ಶಾಸ್ತ್ರಕ್ಕೆ ಒಂದು ಇರ್ಲಿ ಎನ್ನುವಂತೆ ಓರ್ವ ಕನ್ನಡಿಗನನ್ನ ಖರೀದಿಸಿದ RCB: ಆತ ಯಾರು? ಆತನ ಖರೀದಿಗೆ ಫ್ರಾಂಚೈಸಿ ಕೊಟ್ಟ ದುಡ್ಡೆಷ್ಟು?
RCB, Manoj Bhandage: ಮನೋಜ್ ಭಾಂಡಗೆ ಆರ್ಸಿಬಿ ಸೇರುತ್ತಿರುವುದು ಇದೇ ಮೊದಲಲ್ಲ. 2023 ರ ಹರಾಜಿನಲ್ಲಿಯೂ ಆರ್ಸಿಬಿ ತಂಡವನ್ನು ಸೇರಿಕೊಂಡಿದ್ದ ಮನೋಜ್ಗೆ ಬೆಂಚು ಕಾಯುವ ಕೆಲಸ ಕೊಟ್ಟಿದ್ದರು. ಬದಲಾಗಿ ಒಂದೇ ಒಂದು ಅವಕಾಶವೂ ಅವರ ಪಾಲಿಗೆ ಬಂದಿರಲಿಲ್ಲ.
Manoj Bhandage IPL Auction 2025: ಕಳೆದ ದಿನ ಶುರುವಾದ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಇನ್ನೇನು ಮುಗಿಯುವ ಹಂತಕ್ಕೆ ಬಂದಿದೆ. ಎಲ್ಲಾ ಫ್ರಾಂಚೈಸಿಗಳು ತಮಗೆ ಬೇಕಾಗಿರುವ ಆಟಗಾರರ ಖರೀದಿಯ ಜೊತೆಗೆ ಸ್ಥಳೀಯ ಆಟಗಾರರು ಅಂದರೆ ಆ ತಂಡ ಪ್ರತಿನಿಧಿಸುವ ರಾಜ್ಯದ ಆಟಗಾರರನ್ನು ಖರೀದಿಸಿವೆ. ಆದರೆ ಆರ್ಸಿಬಿ ಮಾತ್ರ ಆ ಮನಸ್ಸು ಮಾಡಿರಲಿಲ್ಲ. ಆದರೆ ಇದೀಗ ಅಂದರೆ ಹರಾಜಿನ ಕೊನೆದಿನ, ರಾಯಚೂರಿನ ಹುಡುಗ ಮನೋಜ್ ಭಾಂಡಗೆ ಅವರನ್ನು ಖರೀದಿ ಮಾಡಿದೆ.
ಇದನ್ನೂ ಓದಿ: ಈ ಸರ್ಕಾರಿ ಯೋಜನೆಯಲ್ಲಿ ಕೇವಲ 7 ರೂ. ಉಳಿಸಿ, ತಿಂಗಳಿಗೆ 5000 ರೂ. ಪಡೆಯಿರಿ...!
ಮನೋಜ್ ಭಾಂಡಗೆ ಆರ್ಸಿಬಿ ಸೇರುತ್ತಿರುವುದು ಇದೇ ಮೊದಲಲ್ಲ. 2023 ರ ಹರಾಜಿನಲ್ಲಿಯೂ ಆರ್ಸಿಬಿ ತಂಡವನ್ನು ಸೇರಿಕೊಂಡಿದ್ದ ಮನೋಜ್ಗೆ ಬೆಂಚು ಕಾಯುವ ಕೆಲಸ ಕೊಟ್ಟಿದ್ದರು. ಬದಲಾಗಿ ಒಂದೇ ಒಂದು ಅವಕಾಶವೂ ಅವರ ಪಾಲಿಗೆ ಬಂದಿರಲಿಲ್ಲ.
ಆದರೆ ಈಗ ಮನೋಜ್ ಮೇಲೆ ಮತ್ತೆ ಬಿಡ್ ಮಾಡಿರುವ ಆರ್ಸಿಬಿ ಅವರ ಮೂಲ ಬೆಲೆ 30 ಲಕ್ಷಕ್ಕೆ ಮತ್ತೆ ತಂಡಕ್ಕೆ ಸೇರಿಸಿಕೊಂಡಿದೆ. ಕನ್ನಡಿಗರೇ ಇಲ್ಲ ಎಂಬ ಕೊರತೆಯನ್ನು ಫ್ರಾಂಚೈಸಿ ಈ ಮೂಲಕ ನೀಗಿಸಿದೆ. ಆದರೆ ಕಳೆದ ಋತುವಿನಂತೆ ಬೆಂಚು ಕಾಯಿಸದೆ ಅವಕಾಶ ನೀಡಿದರೆ ಸಾಕಪ್ಪಾ ಅನ್ನೋದು ಅಭಿಮಾನಿಗಳ ಇಂಗಿತ.
ಇದನ್ನೂ ಓದಿ: ಜಿಮ್ ಬೇಡ, ಡಯಟ್ ಬೇಡ... ಈ 5 ಸರಳ ಮನೆ ವ್ಯಾಯಾಮಗಳೊಂದಿಗೆ ನಿಮ್ಮ ಹೊಟ್ಟೆಯ ಕೊಬ್ಬನ್ನು ಕರಗಿಸಿ!
ಮಹಾರಾಜ ಟ್ರೋಫಿಯಲ್ಲಿ ಅಬ್ಬರ
ಇನ್ನೊಂದೆಡೆ ಈ ಬಾರಿ ಆರ್ಸಿಬಿ ಮನೋಜ್ ಅವರನ್ನು ಖರೀದಿ ಮಾಡಲು ಬಲವಾದ ಕಾರಣವೊಂದಿದೆ. ಕಳೆದ ಕೆಲವು ತಿಂಗಳ ಹಿಂದೆ ನಡೆದಿದ್ದ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ತಂಡವನ್ನು ಚಾಂಪಿಯನ್ ಮಾಡುವಲ್ಲಿ ಮನೋಜ್ ಭಾಂಡಗೆ ಕೊಡುಗೆ ಮಹತ್ವದ್ದಾಗಿತ್ತು. ಈ ಟೂರ್ನಿಯಲ್ಲಿ 12 ಪಂದ್ಯಗಳನ್ನಾಡಿದ್ದ ಮನೋಜ್, 25 ಸಿಕ್ಸರ್ಗಳ ಸಹಿತ 292 ರನ್ ಕಲೆಹಾಕಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.