ನವದೆಹಲಿ: ಬೆಂಗಳೂರಿನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ (IPL) 2022 ಹರಾಜಿನ 1 ನೇ ದಿನದಂದು ವೆಸ್ಟ್ ಇಂಡೀಸ್ ಬ್ಯಾಟರ್ ಹೆಟ್ಮೆಯರ್ ಮತ್ತು ಭಾರತದ ಯುವ ಬ್ಯಾಟರ್ ದೇವದತ್ ಪಡಿಕ್ಕಲ್ (Devdutt Padikkal) ಅವರನ್ನು ರಾಜಸ್ಥಾನ್ ರಾಯಲ್ಸ್ (ಆರ್‌ಆರ್) ಖರೀದಿಸಿದೆ.


COMMERCIAL BREAK
SCROLL TO CONTINUE READING

7.75 ಕೋಟಿ ರೂ.ಗೆ ಪಡಿಕ್ಕಲ್ ಖರಿದಿಸಿದ RR:


ಶನಿವಾರ ಬೆಂಗಳೂರಿನಲ್ಲಿ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2022 ಮೆಗಾ ಹರಾಜಿನಲ್ಲಿ ಭಾರತದ ಬ್ಯಾಟರ್ ದೇವದತ್ ಪಡಿಕ್ಕಲ್ ಅವರನ್ನು ರಾಜಸ್ಥಾನ ರಾಯಲ್ಸ್ (Rajasthan Royals) 7.75 ಕೋಟಿ ರೂ.ಗೆ ಖರೀದಿಸಿದೆ. 


ಇದನ್ನೂ ಓದಿ: IPL 2022 Mega Auction: ಇಶಾನ್ ಕಿಶನ್ ರನ್ನು ದಾಖಲೆಯ ಮೊತ್ತಕ್ಕೆ ಖರೀದಿಸಿದ ಮುಂಬೈ ಇಂಡಿಯನ್ಸ್


ರಾಯಲ್ ಚಾಲೆಂಜರ್ಸ್ ಬೆಂಗಳೂರು, ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಬಿಡ್ಡಿಂಗ್ ವಾರ್ ನಡೆಯಿತು. ಆರಂಭದಲ್ಲಿ ಆರ್​ಸಿಬಿ ಅವರನ್ನು ಖರೀದಿಸಲು ಮುಂದಾಗಿತ್ತಾದರು, ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ ಅವರಿಗಾಗಿ ಪೈಪೋಟಿ ನಡೆಸಿತು.  


ಇದವರೆಗೆ ಐಪಿಎಲ್​ನಲ್ಲಿ 29 ಪಂದ್ಯಗಳನ್ನಾಡಿರುವ ಪಡಿಕ್ಕಲ್ 31.57 ರ ಸರಾಸರಿಯಲ್ಲಿ 884 ರನ್ ಗಳಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 6 ಅರ್ಧಶತಕ ಸೇರಿವೆ. 


ಹರಾಜಿನ ಮೊದಲು, ಪಡಿಕ್ಕಲ್ ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಬಿಟ್ಟುಕೊಟ್ಟಿತು.  


ರಾಜಸ್ಥಾನ್ ರಾಯಲ್ಸ್ ಸೇರಿದ ಹೆಟ್ಮೆಯರ್:


ಐಪಿಎಲ್ ಹರಾಜಿನಲ್ಲಿ ಹೆಟ್ಮೆಯರ್ (Shmron Hetmyer) ಅವರನ್ನು 8.5 ಕೋಟಿ ರೂ.ಗೆ ಖರೀದಿಸಿದೆ. ಹರಾಜಿನ ಮೊದಲು, ಹೆಟ್ಮೆಯರ್ ಅನ್ನು ಡೆಲ್ಲಿ ಕ್ಯಾಪಿಟಲ್ಸ್ (DC) ಬಿಡುಗಡೆ ಮಾಡಿತು.


ಗುಜರಾತ್ ಟೈಟಾನ್ಸ್‌ಗೆ ಮಾರಾಟವಾದ ಜೇಸನ್ ರಾಯ್:


ಜೇಸನ್ ರಾಯ್ ಅವರ ಮೂಲ ಬೆಲೆ 2 ಕೋಟಿಗೆ ಗುಜರಾತ್ ಟೈಟಾನ್ಸ್‌ಗೆ (Gujarat Titans) ಮಾರಾಟವಾದರು. 


ಇದನ್ನೂ ಓದಿ: IPL 2022 Auction: 7 ಕೋಟಿಗೆ ಆರ್​ಸಿಬಿ ಪಾಲಾದ ಡುಪ್ಲೆಸಿಸ್, 6.25 ಕೋಟಿಗೆ ವಾರ್ನರ್ ಸೇಲ್!


ಏತನ್ಮಧ್ಯೆ, ದಕ್ಷಿಣ ಆಫ್ರಿಕಾ ಬ್ಯಾಟರ್ ಫಾಫ್ ಡು ಪ್ಲೆಸಿಸ್ (Faf du Plessis) ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ರೂ 7 ಕೋಟಿಗೆ ಖರಿದಿಸಿತು. ಲಖನೌ ಸೂಪರ್ ಜೈಂಟ್ಸ್ ಕ್ವಿಂಟನ್ ಡಿ ಕಾಕ್ (Quinton de Kock) ಅವರನ್ನು 6.75 ಕೋಟಿ ರೂ. ಗೆ ಖರೀದಿಸಿದೆ. 


ಐಪಿಎಲ್ 2022 ರ ಮೆಗಾ ಹರಾಜು ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಎರಡು ದಿನಗಳ ಈವೆಂಟ್ ಭಾನುವಾರ ಮುಕ್ತಾಯವಾಗಲಿದೆ. ಶನಿವಾರ ಮತ್ತು ಭಾನುವಾರ ನಡೆಯಲಿರುವ ಹರಾಜಿನಲ್ಲಿ ಒಟ್ಟು 600 ಕ್ರಿಕೆಟಿಗರು ಹರಾಜಿನಲ್ಲಿರಲಿದ್ದಾರೆ. 


ಒಟ್ಟು 377 ಭಾರತೀಯ ಆಟಗಾರರು ಮತ್ತು 223 ಸಾಗರೋತ್ತರ ಆಟಗಾರರು ಬೆಂಗಳೂರಿನಲ್ಲಿ ಆಕ್ಷನ್-ಪ್ಯಾಕ್ಡ್ ಐಪಿಎಲ್ 2022 ಆಟಗಾರರ ಹರಾಜು ಪ್ರಕ್ರಿಯೆಯಲ್ಲಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.