IPL Retention: ಇದೀಗ ಇಂಡಿಯನ್ ಪ್ರೀಮಿಯಮ್ ಲೀಗ್ ಕ್ರಿಕೆಟ್  2025ರ ಆಕ್ಷನ್ ಗೆ ಕ್ಷಣಗಣನೆ ಶುರುವಾಗಿದೆ. ಪ್ರತಿ ಬಾರಿಯಂತೆ ರೈಟ್ ಟು ಮ್ಯಾಚ್ (RTM) ಆಯ್ಕೆಯ ಪ್ರಕಾರ ಐಪಿಎಲ್ ತಂಡಗಳು ಯಾವ ಆಟಗಾರರನ್ನು ಉಳಿಸಿಕೊಳ್ಳುತ್ತವೆ? ಎಷ್ಟು ಮಂದಿ ತಮ್ಮ ನೆಚ್ಚಿನ ಆಟಗಾರರನ್ನು ಉಳಿಸಿಕೊಳ್ಳುತ್ತವೆ? ತಂಡಗಳಿಗೆ ಈ ಬಾರಿ ಎಷ್ಟು ಬಜೆಟ್ ನಿಗದಿ ಮಾಡಲಾಗಿದೆ? ಎಂಬೆಲ್ಲಾ ಸಂಗತಿಗಳು ಇಂದು ಸಂಜೆಯೊಳಗೆ ಗೊತ್ತಾಗಲಿದೆ. ಏಕೆಂದರೆ ಇಂದು ಸಂಜೆ 5ಗಂಟೆಗೆ ಐಪಿಎಲ್  2025ರ ಆಕ್ಷನ್. 


COMMERCIAL BREAK
SCROLL TO CONTINUE READING

ಮೊದಲಿಗೆ  ರೈಟ್ ಟು ಮ್ಯಾಚ್ (RTM) ಎಂದರೆ ಏನು?
ರೈಟ್ ಟು ಮ್ಯಾಚ್ ಎಂದರೆ ಇಂಡಿಯನ್ ಪ್ರೀಮಿಯಮ್ ಲೀಗ್ ಕ್ರಿಕೆಟ್ ಆಕ್ಷನ್ ಅಥವಾ ಮೆಗಾ ಹರಾಜು ಸಂದರ್ಭದಲ್ಲಿ ತಂಡವು ತಮ್ಮ ಮೂಲ ಆಟಗಾರರನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಅಥವಾ ಖರೀದಿಸಲು ಅನುಮತಿ ಇರುವ ವ್ಯವಸ್ಥೆಯಾಗಿದೆ. ಯಾವುದೇ ತಂಡ ಮೆಗಾ ಹರಾಜು ಪ್ರಕ್ರಿಯೆಗೆ ಇರುವ ಡೆಡ್ ಲೈನ್ ಗೂ ಮೊದಲು ಯಾವ್ಯಾವ ಆಟಗಾರರನ್ನು ಉಳಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡದೆ ಇದ್ದಾರೆ ಅಂತಹ ತಂಡವು ಕೇವಲ 6 ಆಟಗಾರರನ್ನು ಮಾತ್ರ ತಮ್ಮ ತಂಡದಲ್ಲಿ ಉಳಿಸಿಕೊಳ್ಳಬೇಕಾಗುತ್ತದೆ. ಉಳಿದ ಆಟಗಾರರಿಗೆ ಹೊಸದಾಗಿ ಬಿಡ್ ಮಾಡಬೇಕಾಗುತ್ತದೆ. 


2024ರ ಐಪಿಎಲ್ ಪಂದ್ಯಾವಳಿಯಲ್ಲಿ ಆಡಿದ 10 ತಂಡಗಳು ತಲಾ 6 ಆಟಗಾರರನ್ನು ಉಳಿಸಿಕೊಳ್ಳಬಹುದು. ಈ ಪೈಕಿ ಗರಿಷ್ಟ 5 ಅಂತಾರಾಷ್ಟ್ರೀಯ ಆಟಗಾರರನ್ನು ಆಯ್ಕೆ ಉಳಿಸಿಕೊಳ್ಳಬಹುದಾಗಿದೆ. ಉಳಿದಂತೆ ದೇಸಿ ಕ್ರಿಕೆಟಿಗರು ಹಾಗೂ ಇಬ್ಬರು ‘ಅನ್ ಕ್ಯಾಪ್ಡ್’ ಮಾಡದ ಸಾಗರೋತ್ತರ ಆಟಗಾರರಿಗೆ ಬಿಡ್ ಮಾಡಬಹುದಾಗಿದೆ. 


ಇದನ್ನೂ ಓದಿ- RCB ತಂಡದಲ್ಲಿ ಕಿಂಗ್‌ಗೆ ಕ್ಯಾಪ್ಟನ್ಸಿ..! ಕೊಹ್ಲಿ ಅವರನ್ನು ಒಪ್ಪಿಸಲು ಹರಸಾರಸ ಪಟ್ಟ ಫ್ರಾಂಚೈಸಿ!!


ಅನ್ ಕ್ಯಾಪ್ಡ್ ಆಟಗಾರರು ಯಾರು?
ಯಾವುದೇ ಸ್ವರೂಪದಲ್ಲಿ ಅಥವಾ ಮಾದರಿಯಲ್ಲಿ (ಟೆಸ್ಟ್, ಒನ್ ಡೆ, ಟಿ-20) ರಾಷ್ಟ್ರೀಯ ಕ್ರಿಕೆಟ್ ತಂಡಕ್ಕೆ ಪಾದಾರ್ಪಣೆ ಮಾಡಿರದ ಕ್ರಿಕೆಟ್ ಆಟಗಾರನನ್ನು ಅನ್ ಕ್ಯಾಪ್ಡ್ ಆಟಗಾರ ಎಂದು ಕರೆಯಲಾಗುತ್ತದೆ. ಯಾವುದೇ ದೇಶದ ಇಂಥ ಇಬ್ಬರು ಇಬ್ಬರು ಅನ್ ಕ್ಯಾಪ್ಡ್ ಆಟಗಾರರನ್ನು ಬಿಡ್ ಮಾಡಬಹುದಾಗಿದೆ.


ಇದಲ್ಲದೆ ಯಾವುದೇ ಮಾದರಿಯಲ್ಲಿ (ಟೆಸ್ಟ್, ಒನ್ ಡೆ, ಟಿ-20) ಕಳೆದ 5 ವರ್ಷಗಳಿಂದ ದೇಶವನ್ನು ಪ್ರತಿನಿಧಿಸದ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಜೊತೆ ಯಾವುದೇ ರೀತಿಯಲ್ಲಿ ಒಪ್ಪಂದ ಮಾಡಿಕೊಳ್ಳದ ದೇಸಿ ಆಟಗಾರರನ್ನು ಕೂಡ  ಅನ್ ಕ್ಯಾಪ್ಡ್ ಆಟಗಾರರರು ಎಂದು ಪರಿಗಣಿಸಲಾಗುತ್ತದೆ.


ಪ್ರತಿ ತಂಡಕ್ಕೆ ಇರುವ ಒಟ್ಟು ಬಜೆಟ್/ಪರ್ಸ್ ಎಷ್ಟು?
ಐಪಿಎಲ್ ತಂಡಗಳಿಗೆ ಅಥವಾ ಫ್ರ್ಯಾಂಚೈಸಿಗಳಿಗೆ ಆಟಗಾರರನ್ನು ಖರೀದಿಸಲು ನಿಗಧಿ ಮಾಡುವ ಮೊತ್ತವನ್ನು ತಂಡದ ಬಜೆಟ್ ಅಥವಾ ಪರ್ಸ್ ಎಂದು ಕರೆಯಲಾಗುತ್ತದೆ. ಈ ಬಾರಿ ಪ್ರತಿ ತಂಡಕ್ಕೆ 120 ಕೋಟಿ ರೂಪಾಯಿಗಳ ಬಜೆಟ್ ಅನ್ನು ನಿಗದಿ ಮಾಡಲಾಗಿದೆ. ಕಳೆದ ಬಾರಿ ಪ್ರತಿ ತಂಡಕ್ಕೆ 110 ಕೋಟಿ ರೂಪಾಯಿಗಳನ್ನು ನಿಗದಿ ಮಾಡಲಾಗಿತ್ತು.



ಆಟಗಾರರನ್ನು ಉಳಿಸಿಕೊಳ್ಳಲು ಎಷ್ಟು ವೆಚ್ಚವಾಗುತ್ತದೆ?
ಕ್ಯಾಪ್ಡ್ ಆಟಗಾರರನ್ನು ಉಳಿಸಿಕೊಳ್ಳಲು ಇಂಡಿಯನ್ ಪ್ರೀಮಿಯಮ್ ಲೀಗ್ ಈ ಕೆಳಗಿನಂತೆ ದರ ನಿಗದಿ ಮಾಡಿದೆ. 
1ನೇ ಕ್ಯಾಪ್ಡ್ ಆಟಗಾರನಿಗೆ 18 ಕೋಟಿ ರೂಪಾಯಿ.
2ನೇ ಕ್ಯಾಪ್ಡ್ ಆಟಗಾರನಿಗೆ 14 ಕೋಟಿ ರೂಪಾಯಿ.
3ನೇ ಕ್ಯಾಪ್ಡ್ ಆಟಗಾರನಿಗೆ 11 ಕೋಟಿ ರೂಪಾಯಿ.
4ನೇ ಕ್ಯಾಪ್ಡ್ ಆಟಗಾರನಿಗೆ 18 ಕೋಟಿ ರೂಪಾಯಿ.
5ನೇ ಕ್ಯಾಪ್ಡ್ ಆಟಗಾರನಿಗೆ 14 ಕೋಟಿ ರೂಪಾಯಿ.


ಇದನ್ನೂ ಓದಿ- ಈ 5 ಆಟಗಾರರನ್ನು 20 ಕೋಟಿ ಕೊಟ್ಟಾದರೂ ಸರಿ ತಂಡದಲ್ಲಿ ಉಳಿಸಿಕೊಳ್ಳಲು ಶತಪ್ರಯತ್ನ ಮಾಡ್ತಿದೆ ಐಪಿಎಲ್ ಫ್ರಾಂಚೈಸಿ! ಆ ದಿಗ್ಗಜರ ಪಟ್ಟಿ ಇಲ್ಲಿದೆ


ಇದಲ್ಲದೆ ಯಾವುದೇ ತಂಡ ಯಾವುದೇ ಅನ್ ಕ್ಯಾಪ್ಡ್ ಭಾರತೀಯ ಆಟಗಾರನನ್ನು ಉಳಿಸಿಕೊಂಡರೆ ಆ ಆಟಗಾರನಿಗೆ 4 ಕೋಟಿ ರೂಪಾಯಿ ಕೊಡಬೇಕಾಗುತ್ತದೆ. ಸಾಗರೋತ್ತರ ಆಟಗಾರರಿಗೆ ಸಂಬಂಧಿಸಿದಂತೆ ಯಾವುದೇ ಮಿತಿ ಇರುವುದಿಲ್ಲ. ಯಾವುದೇ ಐಪಿಎಲ್ ತಂಡ ಆಟಗಾರನನ್ನು ಬಿಡ್ ಮಾಡಿದ ಮೇಲೆ ಹಿಂದಿನ ಬಿಡ್ ಅನ್ನು ಹೊಂದಿಸಲು ರೈಟ್ ಟು ಮ್ಯಾಚ್ ಅನ್ನು ಬಳಸಲಾಗುತ್ತದೆ. ಯಾವುದೇ ತಂಡ ತನ್ನ ಧಾರಣ ಮೌಲ್ಯಕ್ಕಿಂತ ಅಂದರೆ ನಿಗದಿ ಮಾಡಿರುವ ಮೊತ್ತಕ್ಕಿಂತ ಕಡಿಮೆ ಮೊತ್ತಕ್ಕೆ ಬಿಡ್ ಮಾಡಿಕೊಂಡರೆ ಉಳಿದ ಹಣವನ್ನು ಇತರೆ ಆಟಗಾರರಿಗೆ ಹಂಚಬಹುದಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.