Virat Kohli: ವಿರಾಟ್ ಕೊಹ್ಲಿ ಮಾಡಿದ ಆ ಒಂದು ತಪ್ಪಿಗೆ 24 ಲಕ್ಷ ರೂ. ದಂಡ: ಐಪಿಎಲ್’ನಿಂದ ನಿಷೇಧ!
IPL 2023 Slow Over Rate Rule: ವಿರಾಟ್ ಕೊಹ್ಲಿ ಕಳೆದ ಎರಡು ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನು ನಿಭಾಯಿಸಿದ್ದರು. ಈ ಎರಡೂ ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವು ಸಾಧಿಸಿದೆ. ಆದರೆ ಈ ಸಮಯದಲ್ಲಿ ಅವರು ದೊಡ್ಡ ತಪ್ಪು ಮಾಡಿದ್ದು, ಇದರಿಂದಾಗಿ ನಿಷೇಧದ ಭೀತಿಯೂ ಕಾಡುವಂತಾಗಿದೆ.
IPL 2023 Slow Over Rate Rule: ಇಂಡಿಯನ್ ಪ್ರೀಮಿಯರ್ ಲೀಗ್ 2023 (IPL 2023) ರಲ್ಲಿ ಇದುವರೆಗೆ ಒಟ್ಟು 34 ಪಂದ್ಯಗಳನ್ನು ಆಡಲಾಗಿದೆ. ಈ ಪಂದ್ಯಗಳಲ್ಲಿ ಒಂದಕ್ಕಿಂತ ಒಂದು ಸಖತ್ ಕ್ರೇಜ್ ಸೃಷ್ಟಿಸಿದೆ ಎನ್ನಬಹುದು. ಆದರೆ ಐಪಿಎಲ್ 2023ರ ಮಧ್ಯೆ, ವಿರಾಟ್ ಕೊಹ್ಲಿಯ ಟೆನ್ಷನ್ ಹೆಚ್ಚಾಗಿದೆ. ಇದಕ್ಕೆ ಬಲವಾದ ಕಾರಣ ಒಂದಿದೆ.
ಇದನ್ನೂ ಓದಿ: WFI: ಕುಸ್ತಿ ಸಂಘದ ಚುನಾವಣೆ ಮೇಲೆ ನಿಷೇಧ, ಕುಸ್ತಿಪಟುಗಳ ಮುಷ್ಕರದ ಹಿನ್ನೆಲೆ ಮಹತ್ವದ ನಿರ್ಧಾರ ಕೈಗೊಂಡ ಕ್ರೀಡಾ ಇಲಾಖೆ
ವಿರಾಟ್ ಕೊಹ್ಲಿ ಕಳೆದ ಎರಡು ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕತ್ವವನ್ನು ನಿಭಾಯಿಸಿದ್ದರು. ಈ ಎರಡೂ ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗೆಲುವು ಸಾಧಿಸಿದೆ. ಆದರೆ ಈ ಸಮಯದಲ್ಲಿ ಅವರು ದೊಡ್ಡ ತಪ್ಪು ಮಾಡಿದ್ದು, ಇದರಿಂದಾಗಿ ನಿಷೇಧದ ಭೀತಿಯೂ ಕಾಡುವಂತಾಗಿದೆ.
ಇತ್ತೀಚೆಗಷ್ಟೇ ಆರ್’ಸಿಬಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಸೋಲಿಸಿತ್ತು. ಆದರೆ ಈ ಸಮಯದಲ್ಲಿ ತಂಡಕ್ಕೆ ನಿಗದಿತ ಸಮಯದಲ್ಲಿ ಓವರ್’ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಕೊಹ್ಲಿಗೆ 24 ಲಕ್ಷ ದಂಡ ವಿಧಿಸಲಾಗಿದೆ. ಸ್ಲೋ ಓವರ್ ರೇಟ್’ನಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಿಗೆ ದಂಡ ವಿಧಿಸಿರುವುದು ಇದು ಎರಡನೇ ಬಾರಿ. ಇದಕ್ಕೂ ಮುನ್ನ ಫಾಫ್ ಡುಪ್ಲೆಸಿಸ್’ಗೆ ಕೂಡ ಸ್ಲೋ ಓವರ್ ರೇಟ್‌ಗಾಗಿ 12 ಲಕ್ಷ ರೂ. ದಂಡ ವಿಧಿಸಲಾಗಿತ್ತು. ಇದರ ಬೆನ್ನಲೇ ಇದೀಗ ವಿರಾಟ್ ಕೊಹ್ಲಿ ಮೇಲೆ ನಿಷೇಧದ ಭೀತಿ ಎದುರಾಗಿದೆ.
ಸ್ಲೋ ಓವರ್ ರೇಟ್ ನಿಯಮಗಳ ಪ್ರಕಾರ ಮೊದಲ ಬಾರಿಗೆ ಸ್ಲೋ ಓವರ್ ರೇಟ್’ಗೆ ನಾಯಕ 12 ಲಕ್ಷ ರೂಪಾಯಿ ದಂಡ ತೆರಬೇಕಾಗುತ್ತದೆ. ಈ ತಪ್ಪು ಪುನರಾವರ್ತನೆಯಾದಲ್ಲಿ ನಾಯಕನಿಗೆ 24 ಲಕ್ಷ ದಂಡ ಹಾಗೂ ತಂಡದ ಉಳಿದ ಆಟಗಾರರ ಪಂದ್ಯ ಶುಲ್ಕದ ಶೇ.25ರಷ್ಟು ದಂಡ ತೆರಬೇಕಾಗುತ್ತದೆ. ಮೂರನೇ ಬಾರಿ ಸ್ಲೋ ಓವರ್ ರೇಟ್ ತಪ್ಪು ಮಾಡಿದರೆ, ನಾಯಕನಿಗೆ 30 ಲಕ್ಷ ದಂಡ, ಜೊತೆಗೆ ಒಂದು ಪಂದ್ಯದಿಂದ ನಿಷೇಧವೂ ಆಗಬಹುದು. ಜೊತೆಗೆ ತಂಡದ ಆಟಗಾರರು ಪಂದ್ಯದ ಶುಲ್ಕದ ಶೇಕಡಾ 50 ರಷ್ಟು ದಂಡವನ್ನು ಪಾವತಿಸಬೇಕಾಗುತ್ತದೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಮತ್ತೊಮ್ಮೆ ಇಂತಹ ತಪ್ಪು ಮಾಡಿದರೆ ಆರ್’ಸಿಬಿಯ ಒಂದು ಪಂದ್ಯದಿಂದ ನಿಷೇಧಕ್ಕೊಳಗಾಗಬಹುದು.
ಇದನ್ನೂ ಓದಿ: Team Indiaಗೆ ಸಿಕ್ಕಾಯ್ತು ಯುವರಾಜ್ ಸಿಂಗ್ ತರಹದ ಬ್ಯಾಟ್ಸ್’ಮನ್! ಬೌಲಿಂಗ್’ನಲ್ಲೂ ಯುವಿಗೆ ಸರಿಸಾಟಿ ಈತ!
ಈ ಸ್ಲೋ ಓವರ್ ರೇಟ್ ಎಂದರೇನು?
ಐಪಿಎಲ್’ನಲ್ಲಿ ಒಟ್ಟಾರೆ 20 ಓವರ್’ಗಳಿದ್ದು, ಅದಕ್ಕೆ 90 ನಿಮಿಷಗಳನ್ನು ನಿಗದಿಪಡಿಸಲಾಗಿದೆ. ಎಲ್ಲಾ ತಂಡಗಳು ನಿಗದಿತ ಸಮಯದಲ್ಲಿ 20 ಓವರ್‌ಗಳಲ್ಲಿ ಬೌಲಿಂಗ್ ಮಾಡಬೇಕು. ಪಂದ್ಯದ 20ನೇ ಓವರ್ 85ನೇ ನಿಮಿಷದಲ್ಲಿ ಆರಂಭವಾದರೆ, ನಾಯಕ ಹಾಗೂ ತಂಡ ನಿಧಾನಗತಿಯ ಓವರ್ ರೇಟ್ ದಂಡಕ್ಕೆ ಗುರಿಯಾಗುವುದಿಲ್ಲ. ಒಂದು ವೇಳೆ 85 ನಿಮಿಷಗಳಲ್ಲಿ 20 ನೇ ಓವರ್ ಅನ್ನು ಪ್ರಾರಂಭಿಸಲು ಸಾಧ್ಯವಾಗದಿದ್ದರೆ, ಅದು ಸ್ಲೋ ಓವರ್ ರೇಟ್ ಆಗಿ, ದಂಡವನ್ನು ಪಾವತಿಸಬೇಕಾಗುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ