Watch: IPL 2023ರ ನಡುವೆ ಸಂಭವಿಸಿತು ಮಹಾದುರಂತ: ಸ್ವಲ್ಪದಲ್ಲೇ ಉಳಿಯಿತು ಆತನ ಪ್ರಾಣ!
Rajasthan Royals vs Gujarat Titans: ಐಪಿಎಲ್ ನ ಈ ಬಿಗ್ ಮ್ಯಾಚ್ ನಲ್ಲಿ ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ಕಳಪೆಯಾಗಿದ್ದು, ಇಡೀ ತಂಡ 118 ರನ್ ಗಳಿಗೆ ಕುಸಿಯಿತು. ರಾಜಸ್ಥಾನ್ ರಾಯಲ್ಸ್ ಇನ್ನಿಂಗ್ಸ್ ಸಮಯದಲ್ಲಿ, ಟ್ರೆಂಟ್ ಬೌಲ್ಟ್ ಅವರ ಬ್ಯಾಟ್ ನಿಂದ ಅದ್ಭುತ ಸಿಕ್ಸರ್ ಒಂದು ಕಂಡುಬಂದಿತ್ತು.
Rajasthan Royals vs Gujarat Titans: ಐಪಿಎಲ್’ನ 48 ನೇ ಪಂದ್ಯ ರಾಜಸ್ಥಾನ್ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಹೀನಾಯ ಸೋಲು ಎದುರಿಸಬೇಕಾಯಿತು. ಆದರೆ ಪಂದ್ಯದ ಮಧ್ಯೆ ಮೈದಾನದಲ್ಲಿ ದೊಡ್ಡ ದುರಂತ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ. ಈ ಅವಘಡದಲ್ಲಿ ಒಬ್ಬರ ಪ್ರಾಣ ಸ್ವಲ್ಪದರಲ್ಲೇ ಪಾರಾಗಿದೆ. ಘಟನೆಯ ವಿಡಿಯೋವನ್ನು ನೀವಿಲ್ಲಿ ನೋಡಬಹುದಾಗಿದೆ.
ಇದನ್ನೂ ಓದಿ: WTC Final: 7ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡೋದು ಈ ಕಿಲಾಡಿ ಬ್ಯಾಟ್ಸ್’ಮನ್! ಈತನಿಗಿದೆ ದ್ವಿಶತಕ ಬಾರಿಸುವ ಸಾಮಾರ್ಥ್ಯ
ಐಪಿಎಲ್ ನ ಈ ಬಿಗ್ ಮ್ಯಾಚ್ ನಲ್ಲಿ ರಾಜಸ್ಥಾನ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ಕಳಪೆಯಾಗಿದ್ದು, ಇಡೀ ತಂಡ 118 ರನ್ ಗಳಿಗೆ ಕುಸಿಯಿತು. ರಾಜಸ್ಥಾನ್ ರಾಯಲ್ಸ್ ಇನ್ನಿಂಗ್ಸ್ ಸಮಯದಲ್ಲಿ, ಟ್ರೆಂಟ್ ಬೌಲ್ಟ್ ಅವರ ಬ್ಯಾಟ್ ನಿಂದ ಅದ್ಭುತ ಸಿಕ್ಸರ್ ಒಂದು ಕಂಡುಬಂದಿತ್ತು. ಆದರೆ ಇದೇ ಒಂದು ಘಟನೆ ಒಬ್ಬರ ಪ್ರಾಣವನ್ನೇ ಕಸಿಯುವ ಹಂತಕ್ಕೆ ತಲುಪಿತ್ತು ಎಂದರೆ ನಂಬಲು ಸಾಧ್ಯವಿಲ್ಲ.
ಈ ಪಂದ್ಯದಲ್ಲಿ ಟ್ರೆಂಟ್ ಬೌಲ್ಟ್ 15 ರನ್ ಕೊಡುಗೆ ನೀಡಿದರು. ಈ ಇನ್ನಿಂಗ್ಸ್ ಸಮಯದಲ್ಲಿ, ಟ್ರೆಂಟ್ ಬೌಲ್ಟ್ ಮಿಡ್ ವಿಕೆಟ್ ಕಡೆಗೆ ಸಿಕ್ಸರ್ ಬಾರಿಸಿದರು. ಈ ಸಿಕ್ಸರ್ ನೇರವಾಗಿ ಬೌಂಡರಿ ಹೊರಗೆ ನಿಂತಿದ್ದ ಕ್ಯಾಮರಾಮನ್ ಮೇಲೆ ಬಿದ್ದಿದೆ. ಈ ಘಟನೆಯ ನಂತರ ಗುಜರಾತ್ ನ ಟೀಮ್ ಫಿಸಿಯೋ ಕ್ಯಾಮರಾಮನ್ ಗೆ ಸಹಾಯ ಮಾಡಿತ್ತು. ಅದೃಷ್ಟವಶಾತ್ ಗಾಯ ಗಂಭೀರವಾಗಿಲ್ಲ ಎಂಬುದು ಸಮಾಧಾನಕರ ಸಂಗತಿ.
ಡಿನ್ನರ್ ಡೇಟ್ ಮಧ್ಯೆ ರೊಮ್ಯಾಂಟಿಕ್ ಆದ Virat-Anushka! ಕ್ಯೂಟ್ ಕಪಲ್ ಫೋಟೋ ನೋಡಿ
ಗುಜರಾತ್ ಟೈಟಾನ್ಸ್ ಗೆ 7 ನೇ ಜಯ:
ಶುಕ್ರವಾರ ನಡೆದ ಐಪಿಎಲ್ 16ನೇ ಸೀಸನ್ ನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ 7ನೇ ಜಯ ದಾಖಲಿಸಿದೆ. ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಸಾರಥ್ಯದ ತಂಡ ಜೈಪುರದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು 9 ವಿಕೆಟ್ ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಗುಜರಾತ್ ತಂಡ ರಾಜಸ್ಥಾನದ ಇನ್ನಿಂಗ್ಸ್ ಅನ್ನು 17.5 ಓವರ್ ಗಳಲ್ಲಿ ಕೇವಲ 118 ರನ್‌ಗಳಿಗೆ ಆಲೌಟ್ ಮಾಡಿತು. ಇದಾದ ಬಳಿಕ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಆರಂಭಿಕ ವೃದ್ಧಿಮಾನ್ ಸಹಾ ಅವರ ನೆರವಿನಿಂದ ಈ ಸುಲಭ ಗುರಿಯನ್ನು ಕೇವಲ 13.5 ಓವರ್ ಗಳಲ್ಲಿ ಸಾಧಿಸಲಾಯಿತು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.