IPL 2023 : ಐಪಿಎಲ್ 16ನೇ ಸೀಸನ್ ಮಾರ್ಚ್ 31ರಿಂದ ಆರಂಭವಾಗಲಿದೆ. ಇದರ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ಮುಖಾಮುಖಿಯಾಗಲಿವೆ. ಈ ನಡುವೆ ಟೂರ್ನಿಗೂ ಮುನ್ನವೇ ಐಪಿಎಲ್ ತಂಡವೊಂದಕ್ಕೆ ಆಘಾತ ಎದುರಾಗಿದೆ. ಈ ತಂಡದ ಮ್ಯಾಚ್ ವಿನಿಂಗ್ ಆಟಗಾರ ಐಪಿಎಲ್ ತಂಡದ ಆರಂಭಿಕ ಪಂದ್ಯದಲ್ಲಿ ತಂಡದಿಂದ ಹೊರಗುಳಿಯಲಿದ್ದಾರೆ. 


COMMERCIAL BREAK
SCROLL TO CONTINUE READING

ತಂಡದಲ್ಲಿರುವುದಿಲ್ಲ ಈ ಮ್ಯಾಚ್ ವಿನ್ನರ್  :
ಸನ್ ರೈಸರ್ಸ್ ಹೈದರಾಬಾದ್ ತಂಡ ಈ ಬಾರಿ ತನ್ನ ನಾಯಕನನ್ನು ಬದಲಾಯಿಸಿದೆ. ಏಡೆನ್ ಮಾರ್ಕ್ರಾಮ್ ಅವರನ್ನು ತಂಡದ ನೂತನ ನಾಯಕರನ್ನಾಗಿ ನೇಮಿಸಲಾಗಿದೆ. ಆದರೆ, ವರದಿಗಳ ಪ್ರಕಾರ, ತಂಡದ ನಾಯಕ ಮಾರ್ಕ್ರಾಮ್ ಹೈದರಾಬಾದ್‌ಗಾಗಿ ಆರಂಭಿಕ ಪಂದ್ಯವನ್ನು ಆಡಲು ಸಾಧ್ಯವಾಗುವುದಿಲ್ಲ. ಹೀಗಿರುವಾಗ ಅವರ ಅನುಪಸ್ಥಿತಿಯಲ್ಲಿ ಯಾರು ತಂಡದ ನಾಯಕರಾಗುತ್ತಾರೆ ಎಂಬುದೇ ಈಗ ತಂಡದ ಮುಂದಿರುವ ಸವಾಲು.


ಇದನ್ನೂ ಓದಿ : RCB : ಆರ್​​ಸಿಬಿ ಟೀಂಗೆ ದಿಢೀರ್ ಎಂಟ್ರಿ ನೀಡಿದ ಈ ಅಪಾಯಕಾರಿ ಆಲ್ ರೌಂಡರ್!


ತಂಡದಿಂದ ಹೊರಗುಳಿಯುವುದರ ಹಿಂದಿನ ಕಾರಣ : 
ವರದಿಗಳ ಪ್ರಕಾರ, ನೆದರ್ಲ್ಯಾಂಡ್ಸ್ ವಿರುದ್ಧದ 2 ODI ಸರಣಿಗೆ ಮಾರ್ಕ್ರಾಮ್ ತಂಡದ ಭಾಗವಾಗಲಿದ್ದಾರೆ. ಇದರಿಂದಾಗಿ ಅವರು IPLನ ಮೊದಲ ಪಂದ್ಯದಲ್ಲಿ ಕಣಕ್ಕಿಳಿಯುವುದು ಸಾಧ್ಯವಾಗುವುದಿಲ್ಲ. ಈ ಸರಣಿಯ ಕೊನೆಯ ಪಂದ್ಯ ಏಪ್ರಿಲ್ 2 ರಂದು ನಡೆಯಲಿದೆ. ಹಾಗಾಗಿ ನಂತರ, ಏಪ್ರಿಲ್ 7 ರಂದು ನಡೆಯಲಿರುವ ಎರಡನೇ ಐಪಿಎಲ್ ಪಂದ್ಯದಲ್ಲಿ ಮಾರ್ಕ್ರಾಮ್ ತಂಡದ ನಾಯಕನ ಜವಾಬ್ದಾರಿ ನಿರ್ವಹಿಸಲಿದ್ದಾರೆ. 


ಮೊದಲ ಪಂದ್ಯದಲ್ಲಿ ತಂಡಡ ಸಾರಥ್ಯ ಯಾರಿಗೆ ? : 
ಮಾರ್ಕ್ರಾಮ್ ಅನುಪಸ್ಥಿತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ನಾಯಕತ್ವವನ್ನು ಯಾರಿಗೆ ಹಸ್ತಾಂತರಿಸಲಿದೆ ಎಂಬುದು ತಂಡದ ಮುಂದಿರುವ ಸವಾಲು. ಈ ಪಟ್ಟಿಯಲ್ಲಿ ಇಬ್ಬರು ಆಟಗಾರರ ಹೆಸರು ಕೇಳಿ ಬರುತ್ತಿದೆ. ಮೊದಲನೆಯದು ಭುವನೇಶ್ವರ್ ಕುಮಾರ್.  ಭುವನೇಶ್ವರ್ ಕಳೆದ ಋತುವಿನಲ್ಲಿ ಅವರು ಹೈದರಾಬಾದ್ ಪರ ಆಡಿದ್ದರು. ಇನ್ನೊಂದು ಹೆಸರು ಮಯಾಂಕ್ ಅಗರ್ವಾಲ್. ಮಾಯಾಂಕ್  ಇಡೀ ಋತುವಿನಲ್ಲಿ ಪಂಜಾಬ್ ಕಿಂಗ್ಸ್ ನಾಯಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹೀಗಾಗಿ ಈ ಇಬ್ಬರನ್ನು ತಂಡದ ನಾಯಕನನ್ನಾಗಿ ನೇಮಕ ಮಾಡಬಹುದು ಎನ್ನಲಾಗಿದೆ. 


ಇದನ್ನೂ ಓದಿ : BCCI : ಟೀಂ ಇಂಡಿಯಾ ಈ 7 ಆಟಗಾರರಿಗೆ ಬಿಗ್ ಶಾಕ್ ನೀಡಿದ ಬಿಸಿಸಿಐ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.