IPL 2023: ಕೊಲ್ಕತ್ತಾ ನೈಟ್ ರೈಡರ್ಸ್’ಗೆ ಹೊಸ ನಾಯಕ! ಶ್ರೇಯಸ್ ಅಯ್ಯರ್ ಬದಲು ಈ ಆಟಗಾರನದ್ದೇ ಸಾರಥ್ಯ!

Kolkata Knight Riders Captaincy: ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಶ್ರೇಯಸ್ ಅಯ್ಯರ್ ಬದಲಿಗೆ ಸ್ಟಾರ್ ಬ್ಯಾಟ್ಸ್‌ಮನ್ ನಿತೀಶ್ ರಾಣಾ ಅವರನ್ನು ನಾಯಕರನ್ನಾಗಿ ಮಾಡಲು ನಿರ್ಧರಿಸಿದೆ. ನಿತೀಶ್ ರಾಣಾ ಹಲವು ಸೀಸನ್’ಗಳಿಂದ ಕೋಲ್ಕತ್ತಾ ನೈಟ್ ರೈಡರ್ಸ್‌ನ ಭಾಗವಾಗಿದ್ದಾರೆ. ಜೊತೆಗೆ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಐಪಿಎಲ್‌’ನಲ್ಲಿ ಇದುವರೆಗೆ 91 ಪಂದ್ಯಗಳನ್ನು ಆಡಿದ್ದು ಸುಮಾರು 2181 ರನ್ ಗಳಿಸಿದ್ದಾರೆ, ಇದರಲ್ಲಿ 15 ಅರ್ಧ ಶತಕಗಳೂ ಸೇರಿವೆ.

Written by - Bhavishya Shetty | Last Updated : Mar 27, 2023, 07:02 PM IST
    • ಶ್ರೇಯಸ್ ಅಯ್ಯರ್ ಗಾಯದ ಸಮಸ್ಯೆಯಿಂದ ಐಪಿಎಲ್‌’ನಿಂದ ಹೊರಗುಳಿದಿದ್ದಾರೆ
    • ಟೀಂ ಇಂಡಿಯಾ ಪರ ಕೇವಲ 3 ಪಂದ್ಯಗಳನ್ನು ಆಡಿದ ಆಟಗಾರನಿಗೆ ಈ ದೊಡ್ಡ ಜವಾಬ್ದಾರಿ ನೀಡಲಾಗಿದೆ.
    • ಐಪಿಎಲ್ ಇತಿಹಾಸದಲ್ಲಿ ಕೋಲ್ಕತ್ತಾ ತಂಡ ಇದುವರೆಗೆ 2 ಬಾರಿ ಟ್ರೋಫಿ ಗೆದ್ದಿದೆ.
IPL 2023: ಕೊಲ್ಕತ್ತಾ ನೈಟ್ ರೈಡರ್ಸ್’ಗೆ ಹೊಸ ನಾಯಕ! ಶ್ರೇಯಸ್ ಅಯ್ಯರ್ ಬದಲು ಈ ಆಟಗಾರನದ್ದೇ ಸಾರಥ್ಯ! title=
Kolkata Knight Riders

Kolkata Knight Riders Captaincy: ಇಂಡಿಯನ್ ಪ್ರೀಮಿಯರ್ ಲೀಗ್ ಮಾರ್ಚ್ 31 ರಿಂದ ಪ್ರಾರಂಭವಾಗಲಿದೆ. ಈ ಬೃಹತ್ ಕ್ರಿಕೆಟ್ ಲೀಗ್ ಆರಂಭಕ್ಕೂ ಮುನ್ನವೇ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಡ್ಯಾಶಿಂಗ್ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಗಾಯದ ಸಮಸ್ಯೆಯಿಂದ ಐಪಿಎಲ್‌’ನಿಂದ ಹೊರಗುಳಿದಿದ್ದಾರೆ. ಅವರೇ ಈ ತಂಡದ ನಾಯಕರೂ ಹೌದು. ಅವರ ಅನುಪಸ್ಥಿತಿಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಹೊಸ ನಾಯಕನನ್ನು ಘೋಷಿಸಿದೆ. ಟೀಂ ಇಂಡಿಯಾ ಪರ ಕೇವಲ 3 ಪಂದ್ಯಗಳನ್ನು ಆಡಿದ ಆಟಗಾರನಿಗೆ ಈ ದೊಡ್ಡ ಜವಾಬ್ದಾರಿ ನೀಡಲಾಗಿದೆ.

ಇದನ್ನೂ ಓದಿ: IPL 2023: ಪಾಕಿಸ್ತಾನದ ನಂತರ ಈ ದೇಶಗಳ ಆಟಗಾರರಿಗೆ ಐಪಿಎಲ್’ನಿಂದ ಶಾಶ್ವತ ನಿಷೇಧ!

ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಶ್ರೇಯಸ್ ಅಯ್ಯರ್ ಬದಲಿಗೆ ಸ್ಟಾರ್ ಬ್ಯಾಟ್ಸ್‌ಮನ್ ನಿತೀಶ್ ರಾಣಾ ಅವರನ್ನು ನಾಯಕರನ್ನಾಗಿ ಮಾಡಲು ನಿರ್ಧರಿಸಿದೆ. ನಿತೀಶ್ ರಾಣಾ ಹಲವು ಸೀಸನ್’ಗಳಿಂದ ಕೋಲ್ಕತ್ತಾ ನೈಟ್ ರೈಡರ್ಸ್‌ನ ಭಾಗವಾಗಿದ್ದಾರೆ. ಜೊತೆಗೆ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಐಪಿಎಲ್‌’ನಲ್ಲಿ ಇದುವರೆಗೆ 91 ಪಂದ್ಯಗಳನ್ನು ಆಡಿದ್ದು ಸುಮಾರು 2181 ರನ್ ಗಳಿಸಿದ್ದಾರೆ, ಇದರಲ್ಲಿ 15 ಅರ್ಧ ಶತಕಗಳೂ ಸೇರಿವೆ.

ನಿತೀಶ್ ರಾಣಾ 2021 ರಲ್ಲಿ ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧ ತಮ್ಮ ಚೊಚ್ಚಲ ಏಕದಿನ ಪಂದ್ಯವನ್ನು ಆಡಿದರು, ಈ ಪಂದ್ಯದಲ್ಲಿ ಅವರು ಹೇಳಿಕೊಳ್ಳುವಂತಹ ಯಾವುದೇ ಸಾಧನೆ ಮಾಡಿಲ್ಲ. ಕೇವಲ 7 ರನ್ ಗಳಿಸಲು ಮಾತ್ರ ಶಕ್ತವಾದರು. ನಿತೀಶ್ ರಾಣಾ ಅವರು ಭಾರತ ತಂಡಕ್ಕಾಗಿ 2 T20 ಪಂದ್ಯಗಳನ್ನು ಸಹ ಆಡಿದ್ದಾರೆ, ಆದರೆ ಈ ಪಂದ್ಯಗಳಲ್ಲಿಯೂ ಅವರು ವಿಶೇಷವಾದ ಏನನ್ನೂ ಮಾಡಲಿಲ್ಲ, ಈ 2 T20 ಪಂದ್ಯಗಳಲ್ಲಿ 15 ರನ್ ಗಳಿಸಿದರು.

ಐಪಿಎಲ್ 2022 ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಪ್ಲೇಆಫ್‌ಗೆ ಪ್ರವೇಶಿಸಲು ವಿಫಲವಾದರೂ, ನಿತೀಶ್ ರಾಣಾ ಈ ಋತುವಿನಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಈ ಋತುವಿನಲ್ಲಿ ಆಡಿದ 14 ಪಂದ್ಯಗಳಲ್ಲಿ ನಿತೀಶ್ ರಾಣಾ 27.77 ಸರಾಸರಿಯಲ್ಲಿ 361 ರನ್ ಗಳಿಸಿದರು. ಅವರು 2 ಅರ್ಧಶತಕಗಳನ್ನು ಸಹ ಗಳಿಸಿದ್ದಾರೆ.

ಇದನ್ನೂ ಓದಿ: BCCI ವಾರ್ಷಿಕ ಒಪ್ಪಂದ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಶಾಶ್ವತ ಅಂತ್ಯ ಕಂಡಿತು ಈ ಸ್ಟಾರ್ ಆಟಗಾರನ ವೃತ್ತಿಜೀವನ!

ಐಪಿಎಲ್ ಇತಿಹಾಸದಲ್ಲಿ ಕೋಲ್ಕತ್ತಾ ತಂಡ ಇದುವರೆಗೆ 2 ಬಾರಿ ಟ್ರೋಫಿ ಗೆದ್ದಿದೆ. ಎರಡೂ ಬಾರಿ ಗೌತಮ್ ಗಂಭೀರ್ ನಾಯಕತ್ವದಲ್ಲಿ ತಂಡ ಟ್ರೋಫಿ ಗೆದ್ದಿದೆ. 2012 ಮತ್ತು 2014ರಲ್ಲಿ ತಂಡದ ನಾಯಕರಾಗಿದ್ದ ಗೌತಮ್ ಗಂಭೀರ್ ತಂಡವನ್ನು ಐಪಿಎಲ್ ವಿಜೇತರನ್ನಾಗಿಸಿದ್ದರು. ಆ ನಂತರ ತಂಡದಲ್ಲಿ ಹಲವು ನಾಯಕರು ಬದಲಾದರೂ ಸಹ ಕೋಲ್ಕತ್ತಾಗೆ ಟ್ರೋಫಿಯನ್ನು ಪಡೆಯಲು ಸಾಧ್ಯವಾಗಲಿಲ್ಲ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News