ಐಪಿಎಲ್ ನಿಂದ ರಜತ್ ಪಟೆದಾರ್ ಔಟ್
Big Blow To RCB: ಫಾಫ್ ಡು ಪ್ಲೆಸಿಸ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸ್ಟಾರ್ ಬ್ಯಾಟ್ಸ್‌ಮನ್ ರಜತ್ ಪಾಟಿದಾರ್ 2023 ರ ಸಂಪೂರ್ಣ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಿಂದ ಹೊರಗುಳಿಯುವ ರೂಪದಲ್ಲಿ ಗಮನಾರ್ಹ ಹಿನ್ನಡೆ ಅನುಭವಿಸಿದೆ.
IPL 2023 RCB: ಐಪಿಎಲ್ 2023 ಶುರುವಾಗಿ ಇನ್ನೂ ಒಂದು ವಾರವೂ ಕಳೆದಿಲ್ಲ. ಆಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಆಘಾತ ಎದುರಾಗಿದೆ. ಹಿಮ್ಮಡಿ ಗಾಯದಿಂದ ಚೇತರಿಸಿಕೊಳ್ಳಲು ಇನ್ನೂ ಹೆಚ್ಚಿನ ಸಮಯ ಅಗತ್ಯವಿರುವ ಹಿನ್ನಲೆಯಲ್ಲಿ ರಜತ್ ಪಾಟಿದಾರ್ ಅವರನ್ನು ಐಪಿಎಲ್ 2023 ರಿಂದ ಹೊರಗಿಡಲಾಗಿದೆ.
ಹೌದು, ಆರ್‌ಸಿಬಿ ತಂಡದ ಆರಂಭಿಕ ಆಟಗಾರ ರಜತ್ ಪಟೆದಾರ್ ಗಾಯಗೊಂಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಆ ಗಾಯದಿಂದಾಗಿ ಮೊದಲ ಪಂದ್ಯದಲ್ಲಿ ಆಡುವ ಅವಕಾಶ ಅವರು ಕಳೆದುಕೊಂಡಿದ್ದರು. ನಂತರ ಮುಂದಿನ ಪಂದ್ಯಗಳಲ್ಲಿ ಅವರು ಕಣಕ್ಕಿಳಿಯಬಹುದು ಎಂದು ಅಭಿಮಾನಿಗಳು ನಿರೀಕ್ಷಿಸುತ್ತಿದ್ದರು.
RCB ತಂಡ ಕಪ್ ಗೆಲ್ಲದಿದ್ದಕ್ಕೆ ಟ್ರೋಲ್ ಮಾಡುವವರಿಗೆ ಖಡಕ್ ಉತ್ತರ ಕೊಟ್ಟ ವಿರಾಟ್ ಕೊಹ್ಲಿ
ದುರದೃಷ್ಟವಶಾತ್, ಅಕಿಲ್ಸ್ ಹೀಲ್ ಗಾಯದ ಕಾರಣ ರಜತ್ ಪಾಟಿದಾರ್ ಐಪಿಎಲ್ 2023 ರಿಂದ ಹೊರಗುಳಿದಿದ್ದಾರೆ. ನಾವು ರಜತ್ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸುತ್ತೇವೆ ಮತ್ತು ಪ್ರಕ್ರಿಯೆಯ ಸಮಯದಲ್ಲಿ ಅವರಿಗೆ ಬೆಂಬಲವನ್ನು ನೀಡುತ್ತೇವೆ ಎಂದು ಆರ್‌ಸಿಬಿ ತಂಡ ಟ್ವೀಟ್ ಮಾಡಿದೆ.
ಇದನ್ನೂ ಓದಿ- IPL 2023: ಲಕ್ನೋ ವಿರುದ್ಧ ಚೆನ್ನೈ ತಂಡಕ್ಕೆ 12 ರನ್ ಗಳ ರೋಚಕ ಗೆಲುವು
ಇದೇ ವೇಳೆ, ಆರ್‌ಸಿಬಿ ತರಬೇತುದಾರರು ಮತ್ತು ಆಡಳಿತವು ರಜತ್‌ಗೆ ಬದಲಿ ಆಟಗಾರನನ್ನು ಹೆಸರಿಸದಿರಲು ನಿರ್ಧರಿಸಿದೆ.
ಐಪಿಎಲ್ 2022 ರಲ್ಲಿ 281 ರನ್ ಗಳಿಸಿದ 24 ವರ್ಷದ ಬ್ಯಾಟ್ಸ್‌ಮನ್, ಈ ವರ್ಷ ಆರ್‌ಸಿಬಿಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆಯಿತ್ತು. ಆದರೆ, ದುರದೃಷ್ಟವಶಾತ್, ಅಕಿಲ್ಸ್ ಹೀಲ್ ಗಾಯದಿಂದಾಗಿ ರಜತ್ ಪಾಟಿದಾರ್ ಅವರನ್ನು #IPL2023 ರಿಂದ ಹೊರಗಿಟ್ಟಿರುವುದು ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಆರ್‌ಸಿಬಿ ಅಭಿಮಾನಿಗಳಲ್ಲೂ ಕೂಡ ನಿರಾಸೆ ಮೂಡಿಸಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.