Virat Kohli: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರ ಪುತ್ರಿ ವಾಮಿಕಾ ಜನಿಸಿದಾಗಿನಿಂದ ಕ್ಯಾಮರಾ ಮುಂದೆ ಅಧಿಕೃತವಾಗಿ ಕಂಡಿಲ್ಲ. ಆಕೆಯ ಖಾಸಗಿ ಬದುಕಿನ ಬಗ್ಗೆ ಅಪಾರ ಕಾಳಜಿ ವಹಿಸುವ ವಿರುಷ್ಕಾ, ಮಗಳ ಫೋಟೋಗಳಾಗಲಿ, ವಿಡಿಯೋಗಳಾಗಲಿ ಸೆರೆಹಿಡಿದು ಪ್ರಸಾರ ಮಾಡದಂತೆ ಒಂದೊಮ್ಮೆ ಮನವಿ ಮಾಡಿದ್ದರು. ಆದರೆ ಮಾಧ್ಯಮದಲ್ಲಿ ವಾಮಿಕಾಳಿಗೆ ಸಂಬಂಧಿಸಿದ ಅನೇಕ ಸುದ್ದಿಗಳು ಪ್ರಸಾರವಾಗುತ್ತಲೇ ಇರುತ್ತವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IPL 2023: ವಿರಾಟ್ ವೀರಾವೇಶಕ್ಕೆ ಪೆಟ್ಟುಕೊಟ್ಟ ಬಿಸಿಸಿಐ! ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಲಕ್ಷ ಲಕ್ಷ ದಂಡ


ಆದರೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ RCB vs CSK ಪಂದ್ಯದ ವೇಳೆ, ವಾಮಿಕಾ ಜೊತೆ ಡೇಟಿಂಗ್ ಮಾಡಲು ಕೊಹ್ಲಿ ಬಳಿ ಅನುಮತಿ ಕೋರಿ ಮಗುವೊಂದು ಫಲಕವನ್ನು ಹಿಡಿದಿರುವುದು ಕಂಡುಬಂತು. ಈ ಫೋಟೋ ವೈರಲ್ ಆಗಿದ್ದೇ ತಡ, ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಆ ಮಗುವಿನ ಹೆತ್ತವರು ಇಂತಹ ನಡವಳಿಕೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ ಎಂದು ಖಂಡಿಸಿದ್ದಾರೆ.


ವೈರಲ್ ಆಗಿರುವ ಫೋಟೋದಲ್ಲಿ ನೀವು ನೋಡುವಂತೆ, "ಹಾಯ್ ವಿರಾಟ್ ಅಂಕಲ್, ನಾನು ವಾಮಿಕಾಳನ್ನು ಡೇಟ್‌’ಗೆ ಕರೆದುಕೊಂಡು ಹೋಗಬಹುದೇ?!" ಎಂದು ಬರೆದ ಫಲಕವನ್ನು ಹಿಡಿದುಕೊಂಡು ಮಗು ನಿಂತಿದೆ. ಈ ಫೋಟೋವನ್ನು ಕೆಲವರು ಇಷ್ಟಪಟ್ಟರೆ, ಇನ್ನೂ ಕೆಲವರು ಇಂತಹ ನಡವಳಿಕೆಯನ್ನು ಟೀಕಿಸಿದ್ದಾರೆ.


RCB ಪಂದ್ಯದ ಮಧ್ಯೆ ‘2 BHK ರೂಮ್ ಬೇಕು’ ಎನ್ನುತ್ತಾ ಬೋರ್ಡ್ ಹಿಡಿದ ಫ್ಯಾನ್! ಕಡೆಗೂ ಸಿಕ್ತಾ?


ಓರ್ವ ಸೋಶಿಯಲ್ ಮೀಡಿಯಾ ಬಳಕೆದಾರ ತಮ್ಮ ಅಭಿಪ್ರಾಯವನ್ನು ಹೀಗೆ ವ್ಯಕ್ತಪಡಿಸಿದ್ದಾರೆ, "ಇಲ್ಲಿ ಪೋಷಕರದ್ದು ತಪ್ಪಿದೆ. ಆದರೆ ಜನರು ಏಕೆ ಮುದ್ದಾಗಿದೆ ಎಂದು ಇವುಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ" ಎಂದು ಪ್ರಶ್ನಿಸಿದರೆ, ಮತ್ತೊಬ್ಬರು “ ವಾಮಿಕಾಳನ್ನು ಏಕಾಂಗಿಯಾಗಿ ಬದುಕಲು ಬಿಡುವುದು ಉತ್ತಮ, ಈ ಮಗುವಿಗೆ ತಾನು ಹಿಡಿದುಕೊಂಡ ಫಲಕ ಏನೂ ಎಂಬುದೇ ತಿಳಿದಿಲ್ಲ, ಜೊತೆಗೆ ಅದನ್ನು ಓದುವ ವಯಸ್ಸು ವಾಮಿಕಾದಲ್ಲ” ಎಂದು ಅರ್ಥಪೂರ್ಣವಾಗಿ ಬರೆದಿದ್ದಾರೆ.


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.