IPL 2023: ಸದ್ಯ ಐಪಿಎಲ್ 2023ರ 16ನೇ ಸೀಸನ್ ಸಖತ್ ಕ್ರೇಜ್ ಹುಟ್ಟುಹಾಕಿದೆ. ಇದರ ಬೆನ್ನಲ್ಲೇ ಟೀಂ ಇಂಡಿಯಾದ ಅನುಭವಿ ಆಟಗಾರ ರವಿಶಾಸ್ತ್ರಿ ಹೇಳಿಕೆಯೊಂದನ್ನು ನೀಡಿದ್ದಾರೆ. ಐಪಿಎಲ್’ನ ಆರಂಭಿಕ ಪಂದ್ಯ ದೊಡ್ಡ ಮಟ್ಟದ ಯಶಸ್ಸು ಕಾಣಲು ಇಡೀ ರಾಷ್ಟ್ರವು ಒಗ್ಗೂಡಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: IPL 2023: ಹ್ಯಾರಿ ಬ್ರೂಕ್ ಅಬ್ಬರದ ಶತಕ, ಹೈದರಾಬಾದ್ ಗೆ 23 ರನ್ ಗಳ ಭರ್ಜರಿ ಗೆಲುವು
ಏಪ್ರಿಲ್ 18ರಂದು ಈ ಮೆಗಾ ಲೀಗ್ ತನ್ನ 15 ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಇನ್ನು ಈ ಬಾರಿಯ ಲೀಗ್’ನಲ್ಲಿ ಅನೇಕ ಪಂದ್ಯಗಳು ಕೆಲವು ರೋಚಕ ಮುಕ್ತಾಯಗಳನ್ನು ಕಂಡಿದೆ.
ಈ ಬಗ್ಗೆ ಮಾತನಾಡಿದ ರವಿಶಾಸ್ತ್ರಿ, "ಆ ದಿನ ನನಗೆ ಚೆನ್ನಾಗಿ ನೆನಪಿದೆ. ನಾನು ಆಡಳಿತ ಸಲಹೆಗಾರರೊಂದಿಗೆ ಇದ್ದೆ. ಇನ್ನು ಮೊದಲ ಬಾರಿಗೆ ಲೀಗ್ ಪ್ರಾರಂಭಿಸುವ ವಿಚಾರ ಬಂದಾಗ ಎಲ್ಲರೂ ಉತ್ಸುಕರಾಗಿದ್ದರು. ಇದಕ್ಕೆ ಕಾರಣ, ಅದಾಗಲೇ ಅಂದರೆ 2007ರಲ್ಲಿ ಭಾರತ ವಿಶ್ವಕಪ್ ಗೆದ್ದಿತ್ತು. ಈ ಲೀಗ್’ನ್ನು ಬೆಂಬಲಿಸಲು ಇಡೀ ರಾಷ್ಟ್ರವು ಒಗ್ಗೂಡಿದಂತೆ ತೋರುತ್ತಿತ್ತು. ಜಾಹೀರಾತು ಉದ್ಯಮ, ಕ್ರಿಕೆಟ್ ಅಭಿಮಾನಿಗಳು, ಬಾಲಿವುಡ್, ಕಾಲಿವುಡ್, ಟಾಲಿವುಡ್, ಸೇರಿದಂತೆ ಅನೇಕರು ಅಲ್ಲಿ ಜಮಾಯಿಸಿದ್ದರು. ಮೊದಲ ಪಂದ್ಯದಿಂದಲೇ ಕ್ರಿಕೆಟ್’ನ ಗುಣಮಟ್ಟವು ಕಂಡುಬಂದಿತ್ತು. ಇದುವೇ ಯಶಸ್ಸಿಗೆ ಕಾರಣ” ಎಂದು ಹೇಳಿದರು.
“ಇನ್ನು ಈ ಕ್ರಿಕೆಟ್ ಲೀಗ್’ನ ಗುಣಮಟ್ಟ ಎಷ್ಟಿತ್ತೆಂದರೆ, ಐಪಿಎಲ್ ಪ್ರಾರಂಭವಾದ 2ನೇ ಸೀಸನ್ ಒಳಗೆ, ಫುಟ್’ಬಾಲ್’ಗೆ ಇದ್ದ ಕ್ರೇಜ್ ಇದಕ್ಕೆ ಕಂಡುಬಂತು” ಎಂದು ಶಾಸ್ತ್ರಿ ಹೇಳಿದ್ದಾರೆ.
ಇದನ್ನೂ ಓದಿ: IPL 2023 ಮಧ್ಯೆ ಮತ್ತೆ ಕೇಳಿಬಂತು ಬೆಟ್ಟಿಂಗ್ ದಂಧೆ! ಈ ದಿಗ್ಗಜ ಕ್ರಿಕೆಟಿಗ ಶಾಮೀಲು!
"ಪ್ರಪಂಚದಾದ್ಯಂತದ ಜನರು ತಮ್ಮ ನೆಚ್ಚಿನ ತಂಡಗಳನ್ನು ಆಯ್ಕೆ ಮಾಡಲು ಪ್ರಾರಂಭಿಸಿದ್ದರು. ಫುಟ್’ಬಾಲ್’ಗೆ ಇರುವ ಕ್ರೇಜ್ ಕಂಡುಬಂತು. ಇಪಿಎಲ್ ಆರ್ಸೆನಲ್ ಮತ್ತು ಮ್ಯಾಂಚೆಸ್ಟರ್ ಯುನೈಟೆಡ್’ನಂತಹ ತಂಡಗಳು ವರ್ಷಗಳಿಂದ ನಡೆಯುತ್ತಿವೆ. ಆದರೆ ಇಲ್ಲಿ ಎರಡು ವರ್ಷಗಳಲ್ಲಿ ಅಭಿಮಾನಿಗಳು ತಮ್ಮ ತಂಡಗಳನ್ನು ಮೆಚ್ಚಲು ಶುರು ಮಾಡಿದ್ದರು. ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಅಥವಾ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹೀಗೆ ಅಭಿಮಾನಿಗಳು ಸಖತ್ ಕ್ರೇಜ್ ಹೊಂದಿದ್ದರು" ಎಂದು ಶಾಸ್ತ್ರಿ ಹೇಳಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.