CSK Vs GT History : ಐಪಿಎಲ್ ಇತಿಹಾಸದಲ್ಲಿ ಹಾರ್ದಿಕ್ ಮುಂದೆ ಧೋನಿ ಮಂಕಾಗಿದ್ದೇ ಹೆಚ್ಚು!
CSK Vs GT History : ಇನ್ನೇನು ಕೆಲವೇ ಕ್ಷಣಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಮೊದಲ ಪಂದ್ಯ ಆರಂಭವಾಗಲಿದೆ. ಮತ್ತೊಮ್ಮೆ ಮಹೇಂದ್ರ ಸಿಂಗ್ ಧೋನಿ ಮತ್ತು ಹಾರ್ದಿಕ್ ಪಾಂಡ್ಯ ಎದುರು ಬದುರಾಗಲಿದ್ದಾರೆ.
CSK Vs GT History : ಕ್ರಿಕೆಟ್ ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ಐಪಿಎಲ್ ಪಂದ್ಯಾವಳಿಗೆ ಇನ್ನು ಕೆಲವೇ ಕ್ಷಣಗಳು ಬಾಕಿ. ಮೊದಲ ಪಂದ್ಯ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟನ್ಸ್ ವಿರುದ್ದ ನಡೆಯಲಿದೆ. ಕಳೆದ ಸೀಸನ್ನ ಲೀಗ್ ಸುತ್ತಿನಲ್ಲಿ ಉಭಯ ತಂಡಗಳು 2 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದವು. ಎರಡೂ ಪಂದ್ಯಗಳಲ್ಲೂ ಹಾರ್ದಿಕ್ ನಾಯಕತ್ವ ಗುಜರಾತ್ ತಂಡ ಮೇಲುಗೈ ಸಾಧಿಸಿತ್ತು.
ಮೊದಲ ಸಮರ ಈಗ ಶುರು :
ಇನ್ನೇನು ಕೆಲವೇ ಕ್ಷಣಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಮೊದಲ ಪಂದ್ಯ ಆರಂಭವಾಗಲಿದೆ. ಮತ್ತೊಮ್ಮೆ ಮಹೇಂದ್ರ ಸಿಂಗ್ ಧೋನಿ ಮತ್ತು ಹಾರ್ದಿಕ್ ಪಾಂಡ್ಯ ಎದುರು ಬದುರಾಗಲಿದ್ದಾರೆ. ಪ್ರಸ್ತುತ ಲೀಗ್‌ನ ಚಾಂಪಿಯನ್ ಆಗಿರುವ ಗುಜರಾತ್ ಟೈಟಾನ್ಸ್ ಕಳೆದ ಸೀಸನ್ನಲ್ಲಿ ಆಡಿದ 14 ಪಂದ್ಯಗಳ ಪೈಕಿ 10 ಪಂದ್ಯಗಳಲ್ಲಿ ಗೆಲುವು ದಾಖಲಿಸಿತ್ತು. ಇನ್ನೊಂದೆಡೆ ಚೆನ್ನೈ ತಂಡ ಆಡಿದ 14 ಪಂದ್ಯಗಳಲ್ಲಿ ಕೇವಲ ನಾಲ್ಕರಲ್ಲಿ ಮಾತ್ರ ಗೆದ್ದಿತ್ತು.
ಇದನ್ನೂ ಓದಿ : IPL 2023 : ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿದೆ ಟಿ 20 ಕ್ರಿಕೆಟ್ ನ ಮಹಾ ಸಂಗ್ರಾಮ ! ಯಾರಿಗೆ ನೆರವಗಾಲಿದೆ ನರೇಂದ್ರ ಮೋದಿ ಸ್ಟೇಡಿಯಂ ಪಿಚ್
ಮಂಡಿಯೂರಿದ್ದ ಧೋನಿ :
ಕಳೆದ ಸೀಸನ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗುಜರಾತ್ ವಿರುದ್ಧ ಎರಡು ಪಂದ್ಯಗಳನ್ನು ಆಡಿತ್ತು. ಈ ಪೈಕಿ ಒಂದರಲ್ಲಿ ರವೀಂದ್ರ ಜಡೇಜಾ ನಾಯಕತ್ವ ವಹಿಸಿದ್ದರೆ, ಇನ್ನೊಂಡು ಪಂದ್ಯದ ಸಾರಥ್ಯ ಮಹೇಂದ್ರ ಸಿಂಗ್ ಧೋನಿಯದ್ದಾಗಿತ್ತು. ಆದರೆ ಈ ಎರಡೂ ಪಂದ್ಯಗಲ್ಲಿ ಚೆನ್ನೈ ತಂಡ ಸೋಲು ಅನುಭವಿಸಿತ್ತು.
ಯಾರಿಗೆ ಮೊದಲ ಗೆಲುವು :
ಈ ಸೀಸನ್ ನ ಮೊದಲ ಪಂದ್ಯ ಈ ಎರಡೂ ತಂಡಗಳ ನಡುವೆ ನಡೆಯುತ್ತಿದ್ದು, ಈ ಬಾರಿ ಗೆಲುವು ಯಾರದ್ದು ಎನ್ನುವ ಕುತೂಹಲ ಅಭಿಮಾನಿಗಳದ್ದಾಗಿದೆ. ಅಂದ ಹಾಗೆ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್ ಇತಿಹಾಸವನ್ನು ಗಮನಿಸಿದರೆ ಇಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡ ಸೋತಿದ್ದೇ ಹೆಚ್ಚು.
ಇದನ್ನೂ ಓದಿ : Impact Player: ಈ ನಿಯಮದಿಂದ ಸಂಪೂರ್ಣ ಬದಲಾಗುವುದು IPL 2023: ಲಖನೌ ಆಟಗಾರನ ಶಾಕಿಂಗ್ ಹೇಳಿಕೆ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.