Impact Player: ಈ ನಿಯಮದಿಂದ ಸಂಪೂರ್ಣ ಬದಲಾಗುವುದು IPL 2023: ಲಖನೌ ಆಟಗಾರನ ಶಾಕಿಂಗ್ ಹೇಳಿಕೆ

Indian Premier League 2023: ಎಲ್‌ ಎಸ್‌ ಜಿಗೆ ಈ ಬಾರಿ ಐಪಿಎಲ್ ಪ್ಲೇಆಫ್ ತಲುಪಲು ಕಡಿಮೆ ಅವಕಾಶವಿದೆ ಎಂಬ ಆಸ್ಟ್ರೇಲಿಯಾದ ಮಾಜಿ ನಾಯಕ ಆರನ್ ಫಿಂಚ್ ಅವರ ಹೇಳಿಕೆಯನ್ನು ತಾನು ಒಪ್ಪುವುದಿಲ್ಲ ಎಂದು ಬಿಷ್ಣೋಯ್ ಹೇಳಿದ್ದಾರೆ. ಈ ಬಾರಿ ಐಪಿಎಲ್ ಪ್ರಶಸ್ತಿ ಗೆಲ್ಲುವ ಅವಕಾಶ ಲಖನೌಗೆ ಶೇ 100ರಷ್ಟು ಇದೆ ಎಂದರು.

Written by - Bhavishya Shetty | Last Updated : Mar 29, 2023, 08:34 PM IST
    • ಲಕ್ನೋ ಸೂಪರ್‌ ಜೈಂಟ್ಸ್ (LSG) ತಂಡದ ಪ್ರಮುಖ ಸ್ಪಿನ್ನರ್ ರವಿ ಬಿಷ್ಣೋಯ್
    • ಈ ಬಾರಿಯ ಐಪಿಎಲ್‌’ನಲ್ಲಿ ಹಲವು ಬದಲಾವಣೆಗಳು ಕಾಣಲಿವೆ.
    • ಈ ಬದಲಾದ ನಿಯಮಗಳೊಂದಿಗೆ, ಐಪಿಎಲ್ ಇನ್ನಷ್ಟು ಮನರಂಜನೆಯಾಗಲಿದೆ.
Impact Player: ಈ ನಿಯಮದಿಂದ ಸಂಪೂರ್ಣ ಬದಲಾಗುವುದು IPL 2023: ಲಖನೌ ಆಟಗಾರನ ಶಾಕಿಂಗ್ ಹೇಳಿಕೆ title=
Impact Player

Indian Premier League 2023: ಇಂಡಿಯನ್ ಪ್ರೀಮಿಯರ್ ಲೀಗ್ ಅಂದರೆ IPL 2023 ಮಾರ್ಚ್ 31 ರಿಂದ ಪ್ರಾರಂಭವಾಗಲಿದೆ. ಈ ಬಾರಿಯ ಐಪಿಎಲ್‌’ನಲ್ಲಿ ಹಲವು ಬದಲಾವಣೆಗಳು ಕಾಣಲಿವೆ. ಐಪಿಎಲ್ 2023 ಹಲವು ಹೊಸ ನಿಯಮಗಳೊಂದಿಗೆ ಆಡಲಿದೆ. ಈ ಬದಲಾದ ನಿಯಮಗಳೊಂದಿಗೆ, ಐಪಿಎಲ್ ಇನ್ನಷ್ಟು ಮನರಂಜನೆಯಾಗಲಿದೆ.

ಇದನ್ನೂ ಓದಿ: IPL 2023 : ಮೊದಲ ಪಂದ್ಯದಲ್ಲಿಯೇ ಈ ತಂಡಕ್ಕೆ ಟೆನ್ಶನ್ !ಪ್ಲೇಯಿಂಗ್ 11 ನಿಂದ ಹೊರಗುಳಿಯಲಿದ್ದಾರೆ ಸ್ಪೋಟಕ ಆಟಗಾರ

ಲಕ್ನೋ ಸೂಪರ್‌ ಜೈಂಟ್ಸ್ (LSG) ತಂಡದ ಪ್ರಮುಖ ಸ್ಪಿನ್ನರ್ ರವಿ ಬಿಷ್ಣೋಯ್, ಈ ಬಾರಿಯ ಪ್ರಭಾವಿ ಆಟಗಾರ ಮತ್ತು ಇತರ ಹೊಸ ನಿಯಮಗಳು ಈ ಲೀಗ್ ಅನ್ನು ಇನ್ನಷ್ಟು ರೋಮಾಂಚನಗೊಳಿಸುತ್ತವೆ ಎಂದು ಹೇಳಿದ್ದಾರೆ.

ಬುಧವಾರ ಪಿಟಿಐ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಅವರು, ಐಪಿಎಲ್‌’ನ ಹೊಸ ನಿಯಮಗಳ ಬಗ್ಗೆ, ವಿಶೇಷವಾಗಿ ಇಂಪಾಕ್ಟ್ ಪ್ಲೇಯರ್ ಬಗ್ಗೆ ಕೇಳಿದಾಗ, 'ಇದು ಉತ್ತಮ ಅವಕಾಶ. ಏಕೆಂದರೆ ಪ್ರಭಾವಿ ಆಟಗಾರನಾಗಿ, 12 ನೇ ಆಟಗಾರನೂ ಆಡಬಹುದು. ಇದರಿಂದ ತಂಡಗಳಿಗೆ ಲಾಭವಾಗುವುದಲ್ಲದೆ, ಇಂಪಾಕ್ಟ್ ಪ್ಲೇಯರ್ ತನ್ನನ್ನು ತಾನು ಆಟಗಾರನಾಗಿ ಸಾಬೀತುಪಡಿಸುವ ಅವಕಾಶವನ್ನೂ ಪಡೆಯುತ್ತಾನೆ. ಇದು ಪಂದ್ಯದಲ್ಲಿ ಅತ್ಯಂತ ವೇಗವಾಗಿ ಬದಲಾವಣೆಗಳನ್ನು ತರುತ್ತದೆ” ಎಂದು ಬಿಷ್ಣೋಯ್ ಹೇಳಿದರು.

ಎಲ್‌ ಎಸ್‌ ಜಿಗೆ ಈ ಬಾರಿ ಐಪಿಎಲ್ ಪ್ಲೇಆಫ್ ತಲುಪಲು ಕಡಿಮೆ ಅವಕಾಶವಿದೆ ಎಂಬ ಆಸ್ಟ್ರೇಲಿಯಾದ ಮಾಜಿ ನಾಯಕ ಆರನ್ ಫಿಂಚ್ ಅವರ ಹೇಳಿಕೆಯನ್ನು ತಾನು ಒಪ್ಪುವುದಿಲ್ಲ ಎಂದು ಬಿಷ್ಣೋಯ್ ಹೇಳಿದ್ದಾರೆ. ಈ ಬಾರಿ ಐಪಿಎಲ್ ಪ್ರಶಸ್ತಿ ಗೆಲ್ಲುವ ಅವಕಾಶ ಲಖನೌಗೆ ಶೇ 100ರಷ್ಟು ಇದೆ ಎಂದರು.

ಎಲ್‌ ಎಸ್‌ ಜಿಗೆ ಈ ಬಾರಿ ಐಪಿಎಲ್ ಪ್ಲೇಆಫ್ ತಲುಪುವ ಸಾಧ್ಯತೆ ಕಡಿಮೆ ಎಂಬ ಆಸ್ಟ್ರೇಲಿಯಾದ ಮಾಜಿ ನಾಯಕ ಆರನ್ ಫಿಂಚ್ ಹೇಳಿಕೆಗೆ ಸಂಬಂಧಿಸಿದಂತೆ ಬಿಷ್ಣೋಯ್ ಮಾತನಾಡಿ, 'ಫಿಂಚ್ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ನೀವು ಮುಂಚಿತವಾಗಿ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಈ ಬಾರಿ ಕೊನೆಯ ಓವರ್‌’ಗಳಲ್ಲಿ ಉತ್ತಮವಾಗಿ ಬೌಲ್ ಮಾಡುವ ಬೌಲರ್‌ಗಳನ್ನು ನಾವು ಹೊಂದಿದ್ದೇವೆ. ನಮ್ಮಲ್ಲಿ ಮಾರ್ಕ್ ವುಡ್, ಅವೇಶ್ ಖಾನ್ ಮತ್ತು ನವೀನ್-ಉಲ್-ಹಕ್ ಅವರಂತಹ ಬೌಲರ್‌ಗಳು ಇದ್ದಾರೆ. ಅವರು ಡೆತ್ ಓವರ್‌’ಗಳಲ್ಲಿ ನಿಖರವಾಗಿ ಬೌಲಿಂಗ್ ಮಾಡಬಹುದು” ಎಂದು ಹೇಳಿದ್ದಾರೆ.

ಇದನ್ನೂ ಓದಿ: CSK: ಮತ್ತೆ ಮೋಡಿ ಮಾಡುತ್ತಾ ಧೋನಿ ಮ್ಯಾಜಿಕ್! ಚೆನ್ನೈಗೆ ಇದು ಸಹಕರಿಸಿದ್ರೆ, ಅದು ಮುಳುವಾಗುತ್ತೆ! ಏನದು ಗೊತ್ತಾ?

IPL 2023ರಲ್ಲಿ LSG ಸಂಪೂರ್ಣ ತಂಡ:

ಕೆ ಎಲ್ ರಾಹುಲ್ (ನಾಯಕ), ಆಯುಷ್ ಬಡೋನಿ, ಕರಣ್ ಶರ್ಮಾ, ಮನನ್ ವೋಹ್ರಾ, ಕ್ವಿಂಟನ್ ಡಿ ಕಾಕ್, ಮಾರ್ಕಸ್ ಸ್ಟೋನಿಸ್, ಕೃಷ್ಣಪ್ಪ ಗೌತಮ್, ದೀಪಕ್ ಹೂಡಾ, ಕೈಲ್ ಮೇಯರ್ಸ್, ಕೃನಾಲ್ ಪಾಂಡ್ಯ, ಅವೇಶ್ ಖಾನ್, ಮೊಹ್ಸಿನ್ ಖಾನ್, ಮಾರ್ಕ್ ವುಡ್, ಮಯಾಂಕ್ ಯಾದವ್, ರವಿ ಬಿಷ್ಣೋಯ್, ನಿಕೋಲ್ಸ್ ಪೂರನ್, ಜಯದೇವ್ ಉನದ್ಕತ್, ಯಶ್ ಠಾಕೂರ್, ರೊಮಾರಿಯೋ ಶೆಫರ್ಡ್, ಡೇನಿಯಲ್ ಸೈಮ್ಸ್, ಅಮಿತ್ ಮಿಶ್ರಾ, ಪ್ರೇರಕ್ ಮಂಕಡ್, ಸ್ವಪ್ನಿಲ್ ಸಿಂಗ್, ನವೀನ್-ಉಲ್-ಹಕ್, ಯುದ್ಧವೀರ್ ಚರಕ್

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News