RCB unboxing program : ಇದೇ ಮಾರ್ಚ್ 29ರಿಂದ ನಡೆಯಲಿರುವ 16ನೇ ಆವೃತ್ತಿಯ ಐಪಿಎಲ್ ಗೆ ದಿನಗಣನೆ ಆರಂಭವಾಗುತ್ತಿದೆ. ಪ್ರತಿವರ್ಷದಂತೆ ಈ ವರ್ಷವೂ ಕೂಡ ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್ ನೀಡಲು ಆರ್​​ಸಿಬಿ ತಂಡ ರೆಡಿಯಾಗಿದೆ. ಹೌದು, ಕಳೆದ ಎಲ್ಲಾ ಸೀಸನ್ ಗಳಲ್ಲೂ ಫ್ಯಾನ್ಸ್ ಗಳಿಗೆ ಸರ್ಪ್ರೈಸ್ ಕೊಡೋಕೆ ಆರ್​​ಸಿಬಿ ತಂಡ ಹೊಸ ಹೊಸ ವಿನ್ಯಾಸಗಳನ್ನು  ಪರಿಚಯಿಸುತ್ತಲೇ ಇದೆ. 


COMMERCIAL BREAK
SCROLL TO CONTINUE READING

ಅದೇ ರೀತಿ ಈ ವರ್ಷವು ಕೂಡಾ ಒಂದು ಸ್ಪೆಷಲ್ ಸರ್ಪ್ರೈಸ್ ಪ್ಯಾಕ್ ನೊಂದಿಗೆ ಇದೇ ಮಾರ್ಚ್ 25 ರಂದು ಚಿನ್ನಸ್ವಾಮಿ ಅಂಗಳದಲ್ಲಿ ಅದ್ದೂರಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಎಲ್ಲಾ ಅಭಿಮಾನಿಗಳು ಈ ಕಾರ್ಯಕ್ರಮಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. 2019 ರ ಬಳಿಕ ತವರು ಮೈದಾನದಲ್ಲಿ ಕಣಕ್ಕಿಳಿಯಲು ಎಲ್ಲಾ ತಂಡಗಳು ತಯಾರಾಗಿವೆ. ನಮ್ಮ ಆರ್​​ಸಿಬಿ ತಂಡದ ಮೊದಲ ಹಾಗೂ ತವರು ಪಂದ್ಯ ಏಪ್ರಿಲ್ 3 ರಂದು ಮುಂಬೈ ಇಂಡಿಯನ್ಸ್ ವಿರುದ್ಧ ನಡೆಯಲಿದೆ. ಪಂದ್ಯ ನಡೆಯುವ 1 ವಾರಕ್ಕೂ ಮುನ್ನವೇ ಆರ್​​ಸಿಬಿ  ತಂಡ ಅಭಿಮಾನಿಗಳನ್ನು ಮೈದಾನಕ್ಕೆ ಆಹ್ವಾನಿಸಿ 'ಆರ್​​ಸಿಬಿ ಅನ್ ಬಾಕ್ಸಿಂಗ್' ಇವೆಂಟ್ ಮೂಲಕ ಬಿಗ್ ಸರ್ಪ್ರೈಸ್ ನೀಡಲು ಸಜ್ಜಾಗಿದೆ. ಆರ್​​ಸಿಬಿ ತಂಡದ ಎಲ್ಲಾ ಆಟಗಾರರು ಈ ಇವೆಂಟ್ ನಲ್ಲಿ ಭಾಗವಹಿಸಲಿದ್ದಾರೆ.


ಇದನ್ನೂ ಓದಿ : MS Dhoni Retirement : 'ಈ ವರ್ಷ ಐಪಿಎಲ್‌ನಿಂದ ಎಂಎಸ್ ಧೋನಿ ನಿವೃತ್ತಿ'


Player Injury : ರೋಹಿತ್ ಶರ್ಮಾಗೆ ಬಿಗ್ ಶಾಕ್, ಇದ್ದಕ್ಕಿದ್ದಂತೆ ಟೀಂನಿಂದ ಈ ಆಟಗಾರ ಹೊರಗೆ!


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.