CSKಗೆ ಗುಡ್’ನ್ಯೂಸ್…! SRH ವಿರುದ್ಧದ ಪಂದ್ಯಕ್ಕೂ ಮುನ್ನ ತಂಡಕ್ಕೆ ಎಂಟ್ರಿಕೊಟ್ಟ ಮಾರಕ ಆಟಗಾರ; ಚೆನ್ನೈಗೆ ಬಂತು ಆನೆಬಲ
IPL 2023, CSK vs SRH: ಚೆನ್ನೈ ಸೂಪರ್ ಕಿಂಗ್ಸ್ (CSK) ಪ್ಲೇಯಿಂಗ್ XI ನಲ್ಲಿ ಓರ್ವ ಅತ್ಯಂತ ಅಪಾಯಕಾರಿ ಆಟಗಾರ ಸ್ಥಾನ ಪಡೆಯಲಿದ್ದಾನೆ ಎಂದು ತಿಳಿದುಬಂದಿದೆ. ಬೆನ್ ಸ್ಟೋಕ್ಸ್ ಕಾಲಿನ ಗಾಯದಿಂದಾಗಿ ಕಳೆದ ಮೂರು ಪಂದ್ಯಗಳಿಂದ ಹೊರಗುಳಿದಿದ್ದರು, ಆದರೆ ಇದೀಗ ಅವರು ಫಿಟ್ ಆಗಿದ್ದು, ಆಯ್ಕೆಗೆ ಲಭ್ಯರಾಗಿರುವುದು ಚೆನ್ನೈಗೆ ಸಮಾಧಾನ ತಂದಿದೆ.
IPL 2023, CSK vs SRH: ನಾಲ್ಕು ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ IPL 2023 ರ ಮಧ್ಯದಲ್ಲಿ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಸಿಎಸ್’ಕೆ ತಂಡ ಶುಕ್ರವಾರ ಚೆನ್ನೈನ ಚೆಪಾಕ್ ಮೈದಾನದಲ್ಲಿ ಸನ್ ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಐಪಿಎಲ್ ಪಂದ್ಯವನ್ನು ಆಡಲಿದೆ.
ಇದನ್ನೂ ಓದಿ: IPL 2023: ವಿಶ್ವದ ಈ ದಿಗ್ಗಜ ಆಟಗಾರನಿಗೆ ಅವಕಾಶ ಕೊಡುತ್ತಿಲ್ಲ ಕೆಎಲ್ ರಾಹುಲ್! ಕೊನೆಗೊಳಿಸುತ್ತಾರಾ ವೃತ್ತಿಜೀವನ?
ಇನ್ನು ಈ ಪಂದ್ಯದ ವೇಳೆಗೆ ಚೆನ್ನೈ ಸೂಪರ್ ಕಿಂಗ್ಸ್ (CSK) ಪ್ಲೇಯಿಂಗ್ XI ನಲ್ಲಿ ಓರ್ವ ಅತ್ಯಂತ ಅಪಾಯಕಾರಿ ಆಟಗಾರ ಸ್ಥಾನ ಪಡೆಯಲಿದ್ದಾನೆ ಎಂದು ತಿಳಿದುಬಂದಿದೆ. ಬೆನ್ ಸ್ಟೋಕ್ಸ್ ಕಾಲಿನ ಗಾಯದಿಂದಾಗಿ ಕಳೆದ ಮೂರು ಪಂದ್ಯಗಳಿಂದ ಹೊರಗುಳಿದಿದ್ದರು, ಆದರೆ ಇದೀಗ ಅವರು ಫಿಟ್ ಆಗಿದ್ದು, ಆಯ್ಕೆಗೆ ಲಭ್ಯರಾಗಿರುವುದು ಚೆನ್ನೈಗೆ ಸಮಾಧಾನ ತಂದಿದೆ. ಬುಧವಾರದ ಅಭ್ಯಾಸ ಅವಧಿಯಲ್ಲಿ ಬೆನ್ ಸ್ಟೋಕ್ಸ್ ಕೂಡ ಭಾಗವಹಿಸಿದ್ದರು ಎಂಬುದು ಇಲ್ಲಿ ಹೇಳಲೇಬೇಕಾದ ವಿಷಯ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ ಸಿ ಬಿ) ವಿರುದ್ಧ ಗೆಲುವು ದಾಖಲಿಸಿದ ನಂತರ ಚೆನ್ನೈ ತಂಡವು ತನ್ನ ತವರು ನೆಲಕ್ಕೆ ಮರಳುತ್ತಿದೆ. ಈ ಸಂದರ್ಭದಲ್ಲಿ ಬೆನ್ ಸ್ಟೋಕ್ಸ್ ತಂಡಕ್ಕೆ ಮರಳಿರುವುದು ಹೆಚ್ಚಿನ ಬಲವನ್ನು ನೀಡುವ ಸಾಧ್ಯತೆ ಇದೆ.
ಇನ್ನು ಸನ್‌ರೈಸರ್ಸ್ ಕಳೆದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಕೈಯಲ್ಲಿ ಸೋಲನ್ನು ಎದುರಿಸಬೇಕಾಯಿತು. ಚೆನ್ನೈನ ಆರಂಭಿಕ ಜೋಡಿ ಡೆವೊನ್ ಕಾನ್ವೇ ಮತ್ತು ರಿತುರಾಜ್ ಗಾಯಕ್ವಾಡ್ ಹಾಗೂ ಶಿವಂ ದುಬೆ ತಮ್ಮ ಆಕ್ರಮಣಕಾರಿ ಇನ್ನಿಂಗ್ಸ್ ಪ್ರದರ್ಶಿಸಿದ ಕಾರಣ, ಕಳೆದ ಪಂದ್ಯದಲ್ಲಿ ದೊಡ್ಡ ಸ್ಕೋರ್ ಗಳಿಸಲು ಸಾಧ್ಯವಾಯಿತು. ಅಜಿಂಕ್ಯ ರಹಾನೆ ಕೂಡ ಆಕ್ರಮಣಕಾರಿ ರೀತಿಯಲ್ಲಿ ಬ್ಯಾಟಿಂಗ್ ಮಾಡುತ್ತಿರುವ ರೀತಿ ಚೆನ್ನೈಗೆ ಬಲ ತಂದಿದೆ, ಆದರೆ ಅವರ ಇತರ ಬ್ಯಾಟ್ಸ್‌ಮನ್‌ಗಳು ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗುತ್ತಿಲ್ಲ ಎಂಬುದು ಕೂಡ ಸತ್ಯ.
ಇದನ್ನೂ ಓದಿ: RCB ಪಂದ್ಯದ ಮಧ್ಯೆ ‘2 BHK ರೂಮ್ ಬೇಕು’ ಎನ್ನುತ್ತಾ ಬೋರ್ಡ್ ಹಿಡಿದ ಫ್ಯಾನ್! ಕಡೆಗೂ ಸಿಕ್ತಾ?
ಚೆನ್ನೈನ ಪ್ರಮುಖ ಬ್ಯಾಟ್ಸ್’ಮನ್’ಗಳು ತಮ್ಮ ಅಬ್ಬರವನ್ನು ತೋರಿಸುತ್ತಿದ್ದರೆ, ಬೌಲರ್‌ಗಳು ರನ್ ಹರಿವನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ. ಚೆನ್ನೈನ ಫೀಲ್ಡಿಂಗ್ ಕೂಡ ಹೇಳಿಕೊಳ್ಳುವಷ್ಟು ಚೆನ್ನಾಗಿಲ್ಲ. ಶ್ರೀಲಂಕಾದ ವೇಗದ ಬೌಲರ್ ಮತಿಶಾ ಪತಿರಾನ RCB ವಿರುದ್ಧ ಪ್ರಭಾವಶಾಲಿ ಪ್ರದರ್ಶನ ನೀಡಿದ್ದರು, ಆದರೆ ಇತರ ಬೌಲರ್‌ಗಳು ಹೇಳಿಕೊಳ್ಳುವಂತಹದ್ದೇನು ಮಾಡಿಲ್ಲ. ಪ್ರತಿ ಪಂದ್ಯದ ನಂತರ ತುಷಾರ್ ದೇಶಪಾಂಡೆ ಅವರ ಪ್ರದರ್ಶನ ಸುಧಾರಿಸುತ್ತಿದೆ. ಚೆನ್ನೈ, ಸನ್‌ರೈಸರ್ಸ್ ಬ್ಯಾಟ್ಸ್‌ಮನ್’ಗಳಿಗೆ ಲಗಾಮು ಹಾಕಬೇಕಾದರೆ, ತನ್ನ ಮೂವರು ಸ್ಪಿನ್ನರ್’ಗಳಾದ ಮಹಿಷ್ ತೀಕ್ಷಣ, ರವೀಂದ್ರ ಜಡೇಜಾ ಮತ್ತು ಮೊಯಿನ್ ಅಲಿ ಅವರಿಗೆ ಉತ್ತಮ ಪ್ರದರ್ಶನ ನೀಡುವಂತೆ ಪ್ರೋತ್ಸಾಹ ನೀಡಬೇಕಾಗಿದೆ. ಅಂಕಿ ಅಂಶಗಳ ಪ್ರಕಾರ ಸನ್‌ರೈಸರ್ಸ್ ವಿರುದ್ಧ ಕಳೆದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಚೆನ್ನೈ ಗೆದ್ದಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.