IPL 2023: ವಿಶ್ವದ ಈ ದಿಗ್ಗಜ ಆಟಗಾರನಿಗೆ ಅವಕಾಶ ಕೊಡುತ್ತಿಲ್ಲ ಕೆಎಲ್ ರಾಹುಲ್! ಕೊನೆಗೊಳಿಸುತ್ತಾರಾ ವೃತ್ತಿಜೀವನ?

RR vs LSG IPL 2023: ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ (LSG) ನ ವಿಕೆಟ್ ಕೀಪರ್ ಕಂ ಬ್ಯಾಟ್ಸ್‌’ಮನ್ ಕ್ವಿಂಟನ್ ಡಿ ಕಾಕ್ ಈ ಸೀಸನ್’ನಲ್ಲಿ ಮೊದಲ ಅವಕಾಶ ಪಡೆಯಲು ಕಾಯುತ್ತಿದ್ದಾರೆ. ಕ್ವಿಂಟನ್ ಡಿ ಕಾಕ್ ಅವರು ಟಿ20ಯಲ್ಲಿ ವಿಶ್ವದ ಅತ್ಯಂತ ಸ್ಫೋಟಕ ಬ್ಯಾಟ್ಸ್‌’ಮನ್‌’ಗಳಲ್ಲಿ ಒಬ್ಬರಾಗಿದ್ದಾರೆ. ಆದರೆ 2023ರ ಐಪಿಎಲ್‌’ನಲ್ಲಿ ಅವರಿಗೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಕ್ಕಿಲ್ಲ.

Written by - Bhavishya Shetty | Last Updated : Apr 19, 2023, 10:07 PM IST
    • ಈ ಅನುಭವಿ ಬ್ಯಾಟ್ಸ್‌ಮನ್‌’ಗೆ ಆಡುವ ಅವಕಾಶವನ್ನೇ ನೀಡುತ್ತಿಲ್ಲ ಎಂದು ಹೇಳಲಾಗುತ್ತಿದೆ
    • ಈ ಸೀಸನ್’ನಲ್ಲಿ ಮೊದಲ ಅವಕಾಶ ಪಡೆಯಲು ಕಾಯುತ್ತಿದ್ದಾರೆ.
    • ಕ್ವಿಂಟನ್ ಡಿ ಕಾಕ್ ಅವರು ಟಿ20ಯಲ್ಲಿ ವಿಶ್ವದ ಅತ್ಯಂತ ಸ್ಫೋಟಕ ಬ್ಯಾಟ್ಸ್‌’ಮನ್‌’ಗಳಲ್ಲಿ ಒಬ್ಬರಾಗಿದ್ದಾರೆ
IPL 2023: ವಿಶ್ವದ ಈ ದಿಗ್ಗಜ ಆಟಗಾರನಿಗೆ ಅವಕಾಶ ಕೊಡುತ್ತಿಲ್ಲ ಕೆಎಲ್ ರಾಹುಲ್! ಕೊನೆಗೊಳಿಸುತ್ತಾರಾ ವೃತ್ತಿಜೀವನ? title=
KL Rahul

RR vs LSG IPL 2023: IPL 2023 ರ 26 ನೇ ಪಂದ್ಯವು ರಾಜಸ್ಥಾನ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (LSG vs RR) ನಡುವೆ ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ರಾಜಸ್ಥಾನ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದೆ. ಇನ್ನು ಲಕ್ನೋ ತಂಡವು ತನ್ನ ಪ್ಲೇಯಿಂಗ್ 11 ರಲ್ಲಿ ಕೇವಲ 1 ಬದಲಾವಣೆಯನ್ನು ಮಾಡಿದ್ದು, ಈ ಅನುಭವಿ ಬ್ಯಾಟ್ಸ್‌ಮನ್‌’ಗೆ ಆಡುವ ಅವಕಾಶವನ್ನೇ ನೀಡುತ್ತಿಲ್ಲ ಎಂದು ಹೇಳಲಾಗುತ್ತಿದೆ.  

ಇದನ್ನೂ ಓದಿ: MI vs SRH: ಪ್ರಾಣಾಪಾಯದಿಂದ ರೋಹಿತ್ ಜಸ್ಟ್ ಮಿಸ್! ಈ ವಿಡಿಯೋ ನೋಡಿದ್ರೆ ಎದೆ ಝಲ್ ಅನ್ನುತ್ತೆ

ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ (LSG) ನ ವಿಕೆಟ್ ಕೀಪರ್ ಕಂ ಬ್ಯಾಟ್ಸ್‌’ಮನ್ ಕ್ವಿಂಟನ್ ಡಿ ಕಾಕ್ ಈ ಸೀಸನ್’ನಲ್ಲಿ ಮೊದಲ ಅವಕಾಶ ಪಡೆಯಲು ಕಾಯುತ್ತಿದ್ದಾರೆ. ಕ್ವಿಂಟನ್ ಡಿ ಕಾಕ್ ಅವರು ಟಿ20ಯಲ್ಲಿ ವಿಶ್ವದ ಅತ್ಯಂತ ಸ್ಫೋಟಕ ಬ್ಯಾಟ್ಸ್‌’ಮನ್‌’ಗಳಲ್ಲಿ ಒಬ್ಬರಾಗಿದ್ದಾರೆ. ಆದರೆ 2023ರ ಐಪಿಎಲ್‌’ನಲ್ಲಿ ಅವರಿಗೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಕ್ಕಿಲ್ಲ.

ಈ ಆಟಗಾರನಿಂದಾಗಿ ಸಿಗುತ್ತಿಲ್ಲ ಅವಕಾಶ!

ಐಪಿಎಲ್ 2023 ರಲ್ಲಿ, ಕೈಲ್ ಮೇಯರ್ಸ್ ಕೆಎಲ್ ರಾಹುಲ್ ಅವರೊಂದಿಗೆ ಆರಂಭಿಕ ಆಟಗಾರನಾಗಿ ಆಡುವ ಅವಕಾಶವನ್ನು ಪಡೆಯುತ್ತಿದ್ದಾರೆ. ಕೈಲ್ ಮೇಯರ್ಸ್ ಸ್ಫೋಟಕ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಇನ್ನು ಟಾಸ್ ವೇಳೆ ಕ್ವಿಂಟನ್ ಡಿ ಕಾಕ್ ಬಗ್ಗೆ ಮಾತನಾಡಿದ ಕೆಎಲ್ ರಾಹುಲ್, “ಎಡ ಮತ್ತು ಬಲಗೈಯ ಸಂಯೋಜನೆಯೊಂದಿಗೆ ಆಟವನ್ನು ಮುಂದುವರಿಯಲು ಪ್ರಯತ್ನಿಸುತ್ತಿದ್ದೇವೆ. ಕ್ವಿಂಟನ್ ಡಿ ಕಾಕ್ ಸದ್ಯ ಸ್ಥಾನ ಪಡೆದಿಲ್ಲ. ಅವರು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗಿದೆ. ನಾನು ಕ್ವಿಂಟನ್ ಅವರೊಂದಿಗೆ ಓಪನಿಂಗ್ ಬ್ಯಾಟಿಂಗ್ ಮಾಡಲು ಇಷ್ಟಪಡುತ್ತೇನೆ” ಎಂದು ಹೇಳಿದ್ದಾರೆ.  

ಎರಡೂ ತಂಡಗಳ ಪ್ಲೇಯಿಂಗ್ XI

ರಾಜಸ್ಥಾನ್ ರಾಯಲ್ಸ್ ಪ್ಲೇಯಿಂಗ್ XI: ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್, ಶಿಮ್ರಾನ್ ಹೆಟ್ಮೆಯರ್, ಧ್ರುವ ಜುರೆಲ್, ರಿಯಾನ್ ಪರಾಗ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್.

ಇದನ್ನೂ ಓದಿ: MI vs SRH ಪಂದ್ಯದಲ್ಲಿ ದಿಲ್ ಗೆದ್ದ ಅರ್ಜುನ್: ಮುಂಬೈ ಗೆಲುವಿಗೆ ತೆಂಡೂಲ್ಕರ್ ಪುತ್ರನ ಕೊಡುಗೆ ಹೇಗಿತ್ತು ನೋಡಿ

ಲಕ್ನೋ ಸೂಪರ್ ಜೈಂಟ್ಸ್ ಪ್ಲೇಯಿಂಗ್ XI: ಲೋಕೇಶ್ ರಾಹುಲ್, ಕೈಲ್ ಮೇಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್, ಆಯುಷ್ ಬಡೋನಿ, ನವೀನ್ ಉಲ್ ಹಕ್, ಯುದ್ಧವೀರ್ ಸಿಂಗ್ ಚರಕ್, ರವಿ ಬಿಷ್ಣೋಯ್, ಅವೇಶ್ ಖಾನ್.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News