IPL 2023, SRH vs RR: ಐಪಿಎಲ್ 2023ರ ಪಂದ್ಯದಲ್ಲಿ ಸನ್‌ ರೈಸರ್ಸ್ ಹೈದರಾಬಾದ್ ವಿರುದ್ಧದ ಕೊನೆಯ ಎಸೆತದಲ್ಲಿ ಸಂದೀಪ್ ಶರ್ಮಾ ಅವರ ನೋ ಬಾಲ್ ರಾಜಸ್ಥಾನ ರಾಯಲ್ಸ್‌ ಸೋಲಿಗೆ ಕಾರಣವಾಯಿತು ಎನ್ನಬಹುದು. ಇದರಿಂದಾಗಿ ತಂಡವು ಬಹುತೇಕ ಗೆದ್ದ ಪಂದ್ಯವನ್ನು ನಾಲ್ಕು ವಿಕೆಟ್‌ ಗಳಿಂದ ಕಳೆದುಕೊಂಡಿತು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮೋಚಾ ಚಂಡಮಾರುತ ಹಿನ್ನೆಲೆ : ಹಲವು ರಾಜ್ಯಗಳಿಗೆ ಮಳೆಮುನ್ಸೂಚನೆ ; ಕೆಲವೆಡೆ ಯಲ್ಲೋ ಅಲರ್ಟ್


ಸನ್‌ ರೈಸರ್ಸ್ ಹೈದರಾಬಾದ್‌ ಗೆ ಕೊನೆಯ ಓವರ್‌ ನಲ್ಲಿ ಗೆಲ್ಲಲು 17 ರನ್ ಅಗತ್ಯವಿತ್ತು. ಇನ್ನು ಕೊನೆಯ ಎಸೆತದಲ್ಲಿ ಐದು ರನ್ ಗಳಿಸಿತು. ಅದಾಗಲೇ ಬೌಲಿಂಗ್ ಗೆಂದು ಸಂದೀಪ್ ಶರ್ಮಾ ಬಂದಿದ್ದರು. ಹೈದರಾಬಾದ್ ಪರ ಬ್ಯಾಟ್ ಹಿಡಿದು ನಿಂತಿದ್ದ ಅಬ್ದುಲ್ ಸಮದ್ (7 ಎಸೆತಗಳಲ್ಲಿ ಔಟಾಗದೆ 17)ಗೆ ಬಾಲ್ ಎಸೆದರು. ಆ ಶಾಟ್ ನೇರವಾಗಿ ಜೋಸ್ ಬಟ್ಲರ್ ಕೈ ಸೇರುತ್ತಿದ್ದಂತೆಯೇ ರಾಜಸ್ಥಾನ ನೋ ಬಾಲ್ ಎಸೆದಿದೆ ಎಂಬ ಸೈರನ್ ಮೊಳಗಿತು. ಇದು ಹೈದರಾಬಾದ್ ತಂಡಕ್ಕೆ ಗೆಲುವಿನ ಭರವಸೆಯನ್ನು ನೀಡಿತು. ಸಮದ್ ಮುಂದಿನ ಎಸೆತದಲ್ಲಿ ಸಿಕ್ಸರ್ ಬಾರಿಸಿ ತಂಡಕ್ಕೆ ಸ್ಮರಣೀಯ ಜಯ ತಂದುಕೊಟ್ಟರು.


ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ಎರಡು ವಿಕೆಟ್‌ ನಷ್ಟಕ್ಕೆ 214 ರನ್ ಗಳಿಸಿತು. ಆದರೆ ಸನ್‌ ರೈಸರ್ಸ್ ಕೊನೆಯ ಎಸೆತದವರೆಗೆ ಆರು ವಿಕೆಟ್‌ ಗೆ 217 ರನ್ ಗಳಿಸುವ ಮೂಲಕ 10 ಪಂದ್ಯಗಳಲ್ಲಿ ನಾಲ್ಕನೇ ಗೆಲುವು ದಾಖಲಿಸಿತು. ಕೊನೆಯ ಎರಡು ಓವರ್‌ ಗಳಲ್ಲಿ ಹೈದರಾಬಾದ್ ಗೆಲ್ಲಲು 41 ರನ್‌ ಗಳ ಅಗತ್ಯವಿತ್ತು, ಈ ವೇಳೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಗೆದ್ದ ನಂತರ ಗ್ಲೆನ್ ಫಿಲಿಪ್ಸ್, ಕುಲದೀಪ್ ಯಾದವ್ (50 ರನ್‌ ಗಳಿಗೆ ಒಂದು ವಿಕೆಟ್) ವಿರುದ್ಧ ಹ್ಯಾಟ್ರಿಕ್ ಸಿಕ್ಸರ್ ಮತ್ತು ಫೋರ್ ಹೊಡೆಯುವ ಮೂಲಕ ಪಂದ್ಯವನ್ನು ತಮ್ಮ ತಂಡದ ಕಡೆಗೆ ತಿರುಗಿಸಿದರು. ಏಳು ಎಸೆತಗಳಲ್ಲಿ 25 ರನ್‌ ಗಳ ಅಬ್ಬರದ ಇನ್ನಿಂಗ್ಸ್‌ ಆಡಿದರು. ತಂಡದ ಪರ ಆರಂಭಿಕರಾದ ಅಭಿಷೇಕ್ ಶರ್ಮಾ 34 ಎಸೆತಗಳಲ್ಲಿ 55, ರಾಹುಲ್ ತ್ರಿಪಾಠಿ 29 ಎಸೆತಗಳಲ್ಲಿ 47, ಅನ್ಮೋಲ್ ಪ್ರೀತ್ ಸಿಂಗ್ 25 ಎಸೆತಗಳಲ್ಲಿ 33 ಮತ್ತು ಹೆನ್ರಿಚ್ ಕ್ಲಾಸೆನ್ 12 ಎಸೆತಗಳಲ್ಲಿ 26 ರನ್ ಗಳಿಸಿದರು.


ಟ್ವಿಟರ್ ನಲ್ಲಿ ಫ್ಯಾನ್ಸ್ ಗುಡುಗು:


ಯುಜ್ವೇಂದ್ರ ಚಹಾಲ್ ನಾಲ್ಕು ಓವರ್‌ ಗಳಲ್ಲಿ 29 ರನ್‌ ಗಳಿಗೆ ನಾಲ್ಕು ವಿಕೆಟ್‌ ಗಳನ್ನು ಕಬಳಿಸುವ ಮೂಲಕ ರಾಜಸ್ಥಾನದ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡರು. ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪಟ್ಟಿಯಲ್ಲಿ ಡ್ವೇನ್ ಬ್ರಾವೋ ಅವರ ಸರಿಸಮಾನಕ್ಕೆ ಬಂದಿದ್ದಾರೆ. ಐಪಿಎಲ್ ಲೀಗ್‌ ನಲ್ಲಿ ಇಬ್ಬರೂ ತಮ್ಮ ಹೆಸರಿನಲ್ಲಿ 183 ವಿಕೆಟ್‌ ಗಳನ್ನು ಹೊಂದಿದ್ದಾರೆ. ಜೋಸ್ ಬಟ್ಲರ್ ಅವರ (59 ಎಸೆತಗಳಲ್ಲಿ 95 ರನ್) ಆಕ್ರಮಣಕಾರಿ ಇನ್ನಿಂಗ್ಸ್‌ ನ ಆಧಾರದ ಮೇಲೆ ರಾಜಸ್ಥಾನ ದೊಡ್ಡ ಸ್ಕೋರ್ ಗಳಿಸಿತು. ಬಟ್ಲರ್ ತಮ್ಮ ಇನ್ನಿಂಗ್ಸ್‌ನಲ್ಲಿ 10 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ ಗಳನ್ನು ಬಾರಿಸಿದರು, ಮೊದಲ ವಿಕೆಟ್‌ ಗೆ ಯಶಸ್ವಿ ಜೈಸ್ವಾಲ್ (18 ಎಸೆತಗಳಲ್ಲಿ 35) ಮತ್ತು ನಂತರ ನಾಯಕ ಸಂಜು ಸ್ಯಾಮ್ಸನ್ (38 ಎಸೆತಗಳಲ್ಲಿ ಅಜೇಯ 66) ಅವರೊಂದಿಗೆ ಎರಡನೇ ವಿಕೆಟ್‌ ಗೆ 30 ಎಸೆತಗಳಲ್ಲಿ 54 ರನ್ ಸೇರಿದಂತೆ. 81 ಎಸೆತಗಳಲ್ಲಿ 138 ರನ್ ಜೊತೆಯಾಟವಾಡಿದರು.


ಇದನ್ನೂ ಓದಿ: Today Gold Price: ಜೀವಮಾನದಲ್ಲಿ ಇಷ್ಟೊಂದು ಕಡಿಮೆಯಾಗಿರಲಿಲ್ಲ ಚಿನ್ನದ ಬೆಲೆ! 10 ಗ್ರಾಂ ಬಂಗಾರದ ಬೆಲೆ ಎಷ್ಟಿದೆ ಗೊತ್ತಾ?


ಪಂದ್ಯ ತಿರುಗಿಸಿದ ಸಮದ್:


ಹೈದರಾಬಾದ್ ವಿರುದ್ಧದ ಪಂದ್ಯದಲ್ಲೂ ಅರ್ಧಶತಕ ಇನ್ನಿಂಗ್ಸ್‌ ಆಡಿದ ಸಂಜು ಸ್ಯಾಮ್ಸನ್ ನಾಲ್ಕು ಬೌಂಡರಿ ಮತ್ತು ಐದು ಸಿಕ್ಸರ್‌ ಗಳನ್ನು ಹೊಡೆದರು. ನಂತರ ಗುರಿ ಬೆನ್ನಟ್ಟಿದ ಅಭಿಷೇಕ್ ಶರ್ಮಾ ಮತ್ತು ಅನ್ಮೋಲ್‌ ಪ್ರೀತ್ ಸಿಂಗ್ 35 ಎಸೆತಗಳಲ್ಲಿ 51 ರನ್ ಜೊತೆಯಾಟದ ಮೂಲಕ ಸನ್‌ ರೈಸರ್ಸ್ ಹೈದರಾಬಾದ್‌ ಗೆ ಚುರುಕಿನ ಆರಂಭವನ್ನು ನೀಡಿದರು. ಇದಾದ ಬಳಿಕ ಫಿಲಿಪ್ ಮತ್ತು ಸಮದ್ ಅವರ ಆಕ್ರಮಣಕಾರಿ ಇನ್ನಿಂಗ್ಸ್‌ನೊಂದಿಗೆ ಸನ್‌ ರೈಸರ್ಸ್ ಹೈದರಾಬಾದ್ ತಂಡವು ಪಂದ್ಯದ ದಿಕ್ಕನ್ನೇ ಬದಲಿಸಿತು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.