ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಐಪಿಎಲ್ ಟೂರ್ನಿಯ ಮಹತ್ವದ ಪಂದ್ಯದಲ್ಲಿ ರಾಜಸ್ಥಾನ್​ ರಾಯಲ್ಸ್​ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಭರ್ಜರಿ ಗೆಲುವು ದಾಖಲಿಸಿದೆ. ಟಾಸ್ ಗೆದ್ದ ರಾಜಸ್ಥಾನ್ ಫೀಲ್ಡಿಂಗ್ ಆಯ್ದುಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಆರ್‍ಸಿಬಿ ನಿಗದಿತ 20 ಓವರ್‍ಗಳಲ್ಲಿ 9 ವಿಕೆಟ್ ನಷ್ಟಕ್ಕೆ 189 ರನ್‍ಗಳ ಸವಾಲಿನ ಮೊತ್ತ ಪೇರಿಸಿತು.  


COMMERCIAL BREAK
SCROLL TO CONTINUE READING

190 ರನ್​ಗಳ ಗುರಿ ಬೆನ್ನಟ್ಟಿದ ರಾಜಸ್ಥಾನ್​ ರಾಯಲ್ಸ್​​ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 182 ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ರೋಚಕ ಪಂದ್ಯದಲ್ಲಿ ಆರ್​ಸಿಬಿ 7 ರನ್​ಗಳಿಂದ ಭರ್ಜರಿ ಗೆಲುವು ಸಾಧಿಸಿತು.


ಇದನ್ನೂ ಓದಿ: BCCI: ಬಿಸಿಸಿಐ ಮಹತ್ವದ ಘೋಷಣೆ: 2023-24ರ ಭಾರತೀಯ ಕ್ರಿಕೆಟ್ ವೇಳಾಪಟ್ಟಿ ಬಿಡುಗಡೆ


ರಾಜಸ್ಥಾನ್ ಪರ ದೇವದತ್​​ ಪಡಿಕ್ಕಲ್​(52), ಯಶಸ್ವಿ ಜೈಸ್ವಾಲ್​(47), ಧೃವ ಜುರೆಲ್​​(34), ಸಂಜು ಸ್ಯಾಮ್ಸನ್​ (22), ಆರ್.ಅಶ್ವಿನ್​​ 12 ರನ್​ ಗಳಿಸಿದರು. ಗೆಲುವಿನ ಭರವಸೆಯಲ್ಲಿದ್ದ ರಾಜಸ್ಥಾನ್‍ಗೆ ಕೊನೇ ಓವರ್​ನಲ್ಲಿ 20 ರನ್​ ಬೇಕಿತ್ತು. ಕೊನೆ ಓವರ್ ಎಸೆದ ಹರ್ಷಲ್​ ಪಟೇಲ್​ 13 ರನ್​ ನೀಡಿ ಆರ್​ಸಿಬಿಗೆ 7 ರನ್​ಗಳ ಗೆಲುವು ತಂದುಕೊಟ್ಟರು. ಆರ್‍ಸಿಬಿ ಪರ ವನಿಂದು ಹಸರಂಗ 3, ಮೊಹಮ್ಮದ್ ಸಿರಾಜ್, ಡೇವಿಡ್ ವಿಲ್ಲಿ ತಲಾ ಒಂದೊಂದು ವಿಕೆಟ್ ಗಳಿಸಿದರು.  


ಇನ್ನು ಆರ್‌ಸಿಬಿ ಪರ ಗ್ಲೇನ್ ಮ್ಯಾಕ್ಸ್‍ವೇಲ್(77), ಫಾಫ್ ಡು ಪ್ಲೆಸಿಸ್(62) ಮತ್ತು ದಿನೇಶ್ ಕಾರ್ತಿಕ್(16) ರನ್ ಗಳಿಸಿದರು. ರಾಜಸ್ಥಾನ್ ಪರ ಟ್ರೆಂಟ್ ಬೌಲ್ಟ್ 2, ಸಂದೀಶ್ ಶರ್ಮಾ 2, ಆರ್.ಅಶ್ವಿನ್ ಮತ್ತು ಯುಜುವೇಂದ್ರ ಚಹಾಲ್ ತಲಾ ಒಂದೊಂದು ವಿಕೆಟ್ ಕಬಳಿಸಿದರು. ಈ ಪಂದ್ಯ ಗೆದ್ದ ಬಳಿಕ ಆರ್​ಸಿಬಿ ಪಾಯಿಂಟ್ಸ್​ ಟೇಬಲ್​ನಲ್ಲಿ 5ನೇ ಸ್ಥಾನಕ್ಕೇರಿದೆ.  


ಇದನ್ನೂ ಓದಿ: WTC Final: ಟೀಂ ಇಂಡಿಯಾ ಪ್ಲೇಯಿಂಗ್ 11ನಿಂದ ಸೂರ್ಯಕುಮಾರ್ ಔಟ್! ಈ ಡ್ಯಾಶಿಂಗ್ ಆಟಗಾರನಿಗೆ ಸಿಗುತ್ತಾ ಚಾನ್ಸ್?


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.