WTC Final: ಟೀಂ ಇಂಡಿಯಾ ಪ್ಲೇಯಿಂಗ್ 11ನಿಂದ ಸೂರ್ಯಕುಮಾರ್ ಔಟ್! ಈ ಡ್ಯಾಶಿಂಗ್ ಆಟಗಾರನಿಗೆ ಸಿಗುತ್ತಾ ಚಾನ್ಸ್?

WTC Final, Team India Playing 11: ಭಾರತ ಕ್ರಿಕೆಟ್ ತಂಡವು ಈ ವರ್ಷದ ಜೂನ್‌’ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌’ಶಿಪ್ (ಡಬ್ಲ್ಯುಟಿಸಿ ಫೈನಲ್) ಫೈನಲ್‌ನಲ್ಲಿ ಆಡಬೇಕಾಗಿದೆ. ಜೂನ್ 7ರಿಂದ ಆತಿಥೇಯ ಇಂಗ್ಲೆಂಡ್‌ನಲ್ಲಿ ಈ ಪಂದ್ಯ ನಡೆಯಲಿದ್ದು, ಭಾರತದ ಮುಂದೆ ಆಸ್ಟ್ರೇಲಿಯಾ ಕಠಿಣ ಸವಾಲು ಎದುರಿಸಲಿದೆ. ಅಷ್ಟೇ ಅಲ್ಲ ಈ ವರ್ಷ ಎರಡು ಐಸಿಸಿ ಟ್ರೋಫಿ ಗೆಲ್ಲುವ ಅವಕಾಶ ಭಾರತಕ್ಕಿದೆ

Written by - Bhavishya Shetty | Last Updated : Apr 9, 2023, 05:04 PM IST
    • ಈ ವರ್ಷದ ಜೂನ್‌’ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌’ಶಿಪ್ (ಡಬ್ಲ್ಯುಟಿಸಿ ಫೈನಲ್) ಫೈನಲ್‌
    • ಭಾರತದ ಹಿರಿಯ ಬ್ಯಾಟ್ಸ್‌ಮನ್ ಟೀಮ್ ಇಂಡಿಯಾಕ್ಕೆ ಎಂಟ್ರಿ ಕೊಡುವ ಸಾಧ್ಯತೆ ಇದೆ
    • ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್‌ಗೆ ಅವಕಾಶ ಸಿಕ್ಕರೂ ಬ್ಯಾಟಿಂಗ್‌’ನಲ್ಲಿ ವಿಫಲರಾಗಿದ್ದರು
WTC Final: ಟೀಂ ಇಂಡಿಯಾ ಪ್ಲೇಯಿಂಗ್ 11ನಿಂದ ಸೂರ್ಯಕುಮಾರ್ ಔಟ್! ಈ ಡ್ಯಾಶಿಂಗ್ ಆಟಗಾರನಿಗೆ ಸಿಗುತ್ತಾ ಚಾನ್ಸ್? title=
WTC Final

WTC Final, Team India Playing 11: ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್-2023) 16ನೇ ಋತುವಿನಲ್ಲಿ ಅನೇಕ ಆಟಗಾರರು ಪ್ರಬಲ ಪ್ರದರ್ಶನ ನೀಡುತ್ತಿದ್ದಾರೆ. ಕೆಲವರು ರಾಷ್ಟ್ರೀಯ ತಂಡಕ್ಕೆ ಮರಳುವ ಪಣತೊಟ್ಟಿದ್ದಾರೆ. ಆಯ್ಕೆದಾರರು ಮತ್ತು ತಂಡದ ನಿರ್ವಹಣೆಯ ಮೇಲೆ ಬಹಳಷ್ಟು ಅವಲಂಬಿತವಾಗಿರುತ್ತದೆ. ಈ ಮಧ್ಯೆ, ಟೀಂ ಇಂಡಿಯಾಗೆ ಕಂ ಬ್ಯಾಕ್ ಮಾಡುವ ಪ್ರಯತ್ನದಲ್ಲಿ ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನ ನೀಡಬೇಕು ಎಂದು ಕೆಲ ಆಟಗಾರರು ಶತಪ್ರಯತ್ನ ಮಾಡುತ್ತಿದ್ದಾರೆ.

ಇದನ್ನೂ ಓದಿ: Watch: ಬಯಲಾಯ್ತು ಹಾರ್ದಿಕ್ ನಿಜಬಣ್ಣ: ನಾಯಕನಾಗುತ್ತಿದ್ದಂತೆ ಕೊಹ್ಲಿ ಜೊತೆ ಹೀಗಾ ವರ್ತಿಸೋದು? ಶಾಕಿಂಗ್!

ಭಾರತ ಕ್ರಿಕೆಟ್ ತಂಡವು ಈ ವರ್ಷದ ಜೂನ್‌’ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌’ಶಿಪ್ (ಡಬ್ಲ್ಯುಟಿಸಿ ಫೈನಲ್) ಫೈನಲ್‌ನಲ್ಲಿ ಆಡಬೇಕಾಗಿದೆ. ಜೂನ್ 7ರಿಂದ ಆತಿಥೇಯ ಇಂಗ್ಲೆಂಡ್‌ನಲ್ಲಿ ಈ ಪಂದ್ಯ ನಡೆಯಲಿದ್ದು, ಭಾರತದ ಮುಂದೆ ಆಸ್ಟ್ರೇಲಿಯಾ ಕಠಿಣ ಸವಾಲು ಎದುರಿಸಲಿದೆ. ಅಷ್ಟೇ ಅಲ್ಲ ಈ ವರ್ಷ ಎರಡು ಐಸಿಸಿ ಟ್ರೋಫಿ ಗೆಲ್ಲುವ ಅವಕಾಶ ಭಾರತಕ್ಕಿದೆ. ಟೀಮ್ ಇಂಡಿಯಾದ ಅನೇಕ ಆಟಗಾರರು ಪ್ರಸ್ತುತ ಐಪಿಎಲ್-2023 ರಲ್ಲಿ ವಿವಿಧ ತಂಡಗಳನ್ನು ಪ್ರತಿನಿಧಿಸುತ್ತಿದ್ದಾರೆ. ಮೇ 28 ರಂದು ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯದ ನಂತರ ಭಾರತದ ಸಂಪೂರ್ಣ ಗಮನವು ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ ಫೈನಲ್) ನ ಫೈನಲ್ ಮೇಲೆ ಕೇಂದ್ರೀಕೃತವಾಗಿರುತ್ತದೆ.

ಈ ಮಧ್ಯೆ ಐಪಿಎಲ್‌ನಲ್ಲಿನ ಅತ್ಯುತ್ತಮ ಪ್ರದರ್ಶನದ ಆಧಾರದ ಮೇಲೆ ಭಾರತದ ಹಿರಿಯ ಬ್ಯಾಟ್ಸ್‌ಮನ್ ಟೀಮ್ ಇಂಡಿಯಾಕ್ಕೆ ಎಂಟ್ರಿ ಕೊಡುವ ಸಾಧ್ಯತೆ ಇದೆ. ಈ ಆಟಗಾರ ಬೇರಾರು ಅಲ್ಲ, ಅವರೇ ಅಜಿಂಕ್ಯ ರಹಾನೆ. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಗಾಯದಿಂದಾಗಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಿಂದ ಬಹುತೇಕ ಹೊರಗುಳಿದಿದ್ದಾರೆ. ಅವರ ಸ್ಥಾನದಲ್ಲಿ ಸೂರ್ಯಕುಮಾರ್ ಯಾದವ್ ಆಡುತ್ತಾರೆ ಎಂದು ನಂಬಲಾಗಿದೆ ಆದರೆ ಅವರ ಪ್ರಸ್ತುತ ಫಾರ್ಮ್ ಉತ್ತಮವಾಗಿಲ್ಲ ಮತ್ತು ಅವರು ನಿರಂತರವಾಗಿ ಬ್ಯಾಟ್‌ನೊಂದಿಗೆ ಹೋರಾಡುತ್ತಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಅವರನ್ನು ತಂಡದಿಂದ ಹೊರಹಾಕಬಹುದು ಎನ್ನಲಾಗಿದೆ.

ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ ಸೂರ್ಯಕುಮಾರ್‌ಗೆ ಅವಕಾಶ ಸಿಕ್ಕರೂ ಬ್ಯಾಟಿಂಗ್‌’ನಲ್ಲಿ ವಿಫಲರಾಗಿದ್ದರು. ಏಕದಿನ ಸರಣಿಯಲ್ಲಿ ಸತತ ಮೂರು ಬಾರಿ ಗೋಲ್ಡನ್ ಡಕ್ ಆದರು. ಸೂರ್ಯಕುಮಾರ್ ಐಪಿಎಲ್‌’ನಲ್ಲಿ ಮುಂಬೈ ಇಂಡಿಯನ್ಸ್‌ಪರ ಆಡುತ್ತಿದ್ದಾರೆ. ಆದರೆ ಇಲ್ಲಿಯೂ ಅವರು ವಿಫಲರಾಗಿದ್ದಾರೆ. ಮತ್ತೊಂದೆಡೆ, ಹಿರಿಯ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಪರ ಅದ್ಭುತಗಳನ್ನು ಮಾಡಿದ್ದಾರೆ. ಅಜಿಂಕ್ಯ ಅತ್ಯುತ್ತಮ ಫಾರ್ಮ್‌ನಲ್ಲಿ ಕಾಣುತ್ತಿದ್ದಾರೆ.

ಇದನ್ನೂ ಓದಿ: Dhanashree Verma : ಚಹಾಲ್ ಪತ್ನಿ ಜೊತೆ ಪಾರ್ಟಿ! ಟೀಂ ಇಂಡಿಯಾ ಕ್ರಿಕೆಟರ್‌ ಫೋಟೋಸ್‌ ವೈರಲ್‌

ವಾಂಖೆಡೆಯಲ್ಲಿ ರಹಾನೆ-ಶೋ:

ವಾಂಖೆಡೆ ಮೈದಾನದಲ್ಲಿ ಅಜಿಂಕ್ಯ ರಹಾನೆ ಬ್ಯಾಟ್ ಬೀಸಿ ಬಿರುಸಿನ ಆಟ ತೋರಿದರು. ಶನಿವಾರ, ಏಪ್ರಿಲ್ 8 ರಂದು ಮುಂಬೈ ಇಂಡಿಯನ್ಸ್ ವಿರುದ್ಧ, ಚೆನ್ನೈ ಸ್ಟಾರ್ ಅಜಿಂಕ್ಯ ರಹಾನೆ ಅರ್ಷದ್ ಖಾನ್ ಅವರ ಓವರ್‌ನಲ್ಲಿ ಬಿರುಸಿನ ರೀತಿಯಲ್ಲಿ 23 ರನ್ ಬಾರಿಸಿದರು. ಇನಿಂಗ್ಸ್‌ನ 8ನೇ ಓವರ್‌ನ ಕೊನೆಯ ಎಸೆತದಲ್ಲಿ ಸೂರ್ಯಕುಮಾರ್ ಯಾದವ್‌’ಗೆ ಕ್ಯಾಚ್ ನೀಡಿದ ಅವರು ಪಿಯೂಷ್ ಚಾವ್ಲಾಗೆ ವಿಕೆಟ್ ಒಪ್ಪಿಸಿದರು. ರಹಾನೆ 27 ಎಸೆತಗಳಲ್ಲಿ 7 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 61 ರನ್ ಕಲೆ ಹಾಕಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News