ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2023 ಟೂರ್ನಿಯ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ವು ಡಕ್ ವರ್ತ್ ಲೂಯಿಸ್ ನಿಯಮದನ್ವಯ ಐದು ವಿಕೆಟ್ ಗಳ ರೋಚಕ ಗೆಲುವು ಸಾಧಿಸುವ ಮೂಲಕ ಐದನೇ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.


COMMERCIAL BREAK
SCROLL TO CONTINUE READING

ಟಾಸ್ ಗೆದ್ದು ಚೆನ್ನೈ ಸೂಪರ್ ಕಿಂಗ್ಸ್ ತಂಡವು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಇದೆ ವೇಳೆ ಮೊದಲು ಬ್ಯಾಟಿಂಗ್ ಅವಕಾಶ ಪಡೆದ ಗುಜರಾತ್ ಟೈಟಾನ್ಸ್ ತಂಡವು ಕೇವಲ ನಾಲ್ಕು ವಿಕೆಟ್ ನಷ್ಟಕ್ಕೆ 20 ಓವರ್ ಗಳಲ್ಲಿ 214 ರನ್ ಗಳನ್ನು ಗಳಿಸಿತು. ಗುಜರಾತ್ ತಂಡದ ಪರವಾಗಿ ಆರಂಭಿಕ ಆಟಗಾರ ವ್ರುದ್ದಿಮಾನ್ ಸಹಾ ಕೇವಲ 39 ಎಸೆತಗಳಲ್ಲಿ ಐದು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನೊಂದಿಗೆ 54 ರನ್ ಗಳಿಸಿದರು. ಈ ಸಂದರ್ಭದಲ್ಲಿ ಇವರಿಗೆ ಸಾಥ್ ನೀಡಿದ ಶುಬ್ಮನ್ ಗಿಲ್ 39 ರನ್ ಗಳಿಸಿದರು.


ಇದನ್ನೂ ಓದಿ: Rain Alert: ರಾಜ್ಯದಲ್ಲಿ ಇನ್ನೂ 2 ದಿನ ವರುಣಾರ್ಭಟ: ಈ ಜಿಲ್ಲೆಗಳಲ್ಲಿ ಗುಡ್ಡ ಕುಸಿತದ ಭೀತಿ-ಹೈ ಅಲರ್ಟ್ ಘೋಷಿಸಿದ ಇಲಾಖೆ!


ಇನ್ನೂ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ ಸಾಯಿ ಸುದರ್ಶನ್ ಕೇವಲ 47 ಎಸೆತಗಳಲ್ಲಿ ಆರು ಭರ್ಜರಿ ಸಿಕ್ಸರ್ ಹಾಗೂ ಎಂಟು ಬೌಂಡರಿಗಳ ನೆರವಿನೊಂದಿಗೆ 96 ರನ್ ಗಳಿಸಿ ಕೇವಲ ನಾಲ್ಕು ರನ್ ಗಳಿಂದ ಶತಕ ವಂಚಿತರಾದರು.ಇನ್ನೂ ಕೊನೆಯಲ್ಲಿ ಹಾರ್ದಿಕ್ ಪಾಂಡ್ಯ 12 ಎಸೆತಗಳಲ್ಲಿ 21 ರನ್ ಗಳಿಸುವ ಮೂಲಕ ತಂಡವನ್ನು 200 ರ ಗಡಿ ದಾಟುವಲ್ಲಿ ನೆರವಾದರು.


Ambareesh birthday: ಪ್ರೀತಿಯ 'ಅಂಬಿ' ಅಣ್ಣನಿಗೆ ಪ್ರೀತಿಯಿಂದ ಬರ್ತ್‌ ಡೇ ವಿಶ್ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್..!


ಚೆನ್ನೈ ತಂಡಕ್ಕೆ ಕೊನೆಯ ಓವರ್ ನಲ್ಲಿ ಎರಡು ಎಸೆತಗಳಿಗೆ 10 ರನ್ ಗಳ ಗೆಲುವಿನ ಅವಶ್ಯಕತೆ ಇತ್ತು, ಈ ಸಂದರ್ಭದಲ್ಲಿ ಆಕ್ರಮಣಕಾರಿ ಆಟವಾಡಿದ ರವೀಂದ್ರ ಜಡೇಜಾ ಸತತವಾಗಿ ಒಂದು ಸಿಕ್ಸರ್ ಹಾಗೂ ಬೌಂಡರಿ ಬಾರಿಸುವ ಮೂಲಕ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಐದನೇ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟವನ್ನು ಅಲಂಕರಿಸುವಲ್ಲಿ ನೆರವಾದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ