Ambareesh birthday: ಪ್ರೀತಿಯ 'ಅಂಬಿ' ಅಣ್ಣನಿಗೆ ಪ್ರೀತಿಯಿಂದ ಬರ್ತ್‌ ಡೇ ವಿಶ್ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್..!

Ambareesh birthday: ದೈಹಿಕವಾಗಿ ಅಗಲಿದರೂ ಮಾನಸಿಕವಾಗಿ ನಮ್ಮ ಮನಸ್ಸಿನಲ್ಲಿ ಸದಾ ಜೀವಂತವಾಗಿರುವ ನಟ ಅಂಬರೀಷ್. ಚಾಲೆಂಜಿಂಗ್ ಸ್ಟಾರ್ ದರ್ಶನ್ ರೆಬೆಲ್ ಸ್ಟಾರ್ ಅಂಬರೀಷ್ ಅವರ 71ನೇ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿದ್ದಾರೆ. 

Written by - YASHODHA POOJARI | Last Updated : May 29, 2023, 01:26 PM IST
  • ಮಂಡ್ಯದ ಗಂಡು ಅಂಬರೀಷ್‌ ಜನ್ಮದಿನ
  • ಪ್ರೀತಿಯ 'ಅಂಬಿ' ಅಣ್ಣನಿಗೆ ಪ್ರೀತಿಯಿಂದ ಬರ್ತ್‌ ಡೇ ವಿಶ್
  • 71ನೇ ಹುಟ್ಟುಹಬ್ಬಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶುಭಾಶಯ
Ambareesh birthday: ಪ್ರೀತಿಯ 'ಅಂಬಿ' ಅಣ್ಣನಿಗೆ ಪ್ರೀತಿಯಿಂದ ಬರ್ತ್‌ ಡೇ ವಿಶ್ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್..!  title=
darshan

Ambareesh birthday: ನಮ್ಮೆಲ್ಲರ ಪ್ರೀತಿಯ ಮಂಡ್ಯದ ಗಂಡು ಅಂಬಿ ಅಪ್ಪಾಜಿ ರವರ ಜನ್ಮದಿನಾಚರಣೆಯನ್ನು ಎಂದಿಗೂ ಮರೆಯಲಾಗದು. ದೈಹಿಕವಾಗಿ ಅಗಲಿದರೂ ಮಾನಸಿಕವಾಗಿ ನಮ್ಮ ಮನಸ್ಸಿನಲ್ಲಿ ಸದಾ ಜೀವಂತವಾಗಿರುತ್ತಾರೆ. ಅವರ ನೇರ ನುಡಿ ಹಾಗೂ ಕಾಪಾಡಿಕೊಂಡು ಬಂದ ಪ್ರೀತಿ-ಆದರ್ಶಗಳು ಇಂದಿನ ಪೀಳಿಗೆಗೂ ಮಾದರಿ. We all miss him ಅಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ರೆಬೆಲ್ ಸ್ಟಾರ್ ಅಂಬರೀಷ್ ಅವರ 71ನೇ ಹುಟ್ಟುಹಬ್ಬಕ್ಕೆ ಪ್ರೀತಿಯಿಂದ ಶುಭಾಶಯ ಕೋರಿದ್ದಾರೆ.

ಯೆಸ್ ನಿಮ್ಗೆ ಗೊತ್ತಿರೋ ಹಾಗೇ ರೆಬೆಲ್ ಸ್ಟಾರ್ ಅಂಬರೀಷ್ ಅಂದ್ರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಪಂಚಪ್ರಾಣ.ಪ್ರಾರಂಭದ ದಿನಗಳಲ್ಲಿ ಅಂಬರೀಷ್ ಅವರು ಡಿ ಬಾಸ್ ದರ್ಶನ್ ಅವರಿಗೆ ಮಾಡಿದ ಸಹಾಯ ಮತ್ತು ಬೆಂಬಲವನ್ನ ಹಲವಾರು ವೇದಿಕೆಗಳಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:  ಅಂಬರೀಶ್ ಗೆ ಮಂಡ್ಯದ ಗಂಡು ಎಂದು ಹೆಸರಿಟ್ಟವರು ಯಾರು ಗೊತ್ತಾ ?

 

 

ಜೊತೆಗೆ ಸುಮಲತಾ ಅಂಬರೀಷ್ ಕೂಡ ಡಿ ಬಾಸ್ ದರ್ಶನ್ ಅವರನ್ನ ಮನೆಯ ಮಗ ಅಂತಲೇ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ.ಮನೆಯ ಪ್ರತಿಯೊಂದು ಕಾರ್ಯಕ್ರಮಗಳಲ್ಲೂ ಡಿ ಬಾಸ್ ಮುಂದಾಳತ್ವ ಇರುತ್ತೆ ಅನ್ನೋದನ್ನ ಸಾಕಷ್ಟು ಬಾರೀ ಮರಿ ರೆಬೆಲ್ ಸ್ಟಾರ್ ಅಂಬರೀಷ್ ಕೂಡ ಹೇಳಿದ್ದಾರೆ. ಇದೀಗ ಅಂಬಿಯ ಹುಟ್ಟುಹಬ್ಬಕ್ಕೆ ಡಿ ಬಾಸ್ ವಿಶ್ ಮಾಡಿರೋದು ಅಂಬಿ ಅಭಿಮಾನಿಗಳಿಗೆ ಮತ್ತು ಡಿ ಬಾಸ್ ಫ್ಯಾನ್ಸ್ ಗೆ ಖುಷಿ ಕೊಟ್ಟಿದೆ.

ಇದನ್ನೂ ಓದಿ:  "ಹ್ಯಾಪಿ ಬರ್ತ್‌ ಡೇ ಮೈ ಅಂಬಿ.." ಭಾವುಕ ಪೋಸ್ಟ್ ಹಾಕಿದ ಸುಮಲತಾ ಅಂಬರೀಷ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News