IPL GK Quiz: ಅತಿಹೆಚ್ಚು ಬಾರಿ ಐಪಿಎಲ್ ಟ್ರೋಫಿ ಗೆದ್ದ ತಂಡಗಳು ಯಾವುವು..?
IPL GK Quiz: For You: ಇಂದು ನಾವು ನಿಮಗಾಗಿ ಐಪಿಎಲ್ ಟೂರ್ನಿಯ ಬಗ್ಗೆ ಕೆಲವು ರಸಪ್ರಶ್ನೆಗಳನ್ನು ತಂದಿದ್ದೇವೆ. ಇಲ್ಲಿ ಕೇಳಲಾಗಿರುವ ಪ್ರಶ್ನೆಗಳಿಗೆ ನೀವು ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.
General Knowledge Quiz: ಇಂದಿನ ಕಾಲದಲ್ಲಿ ಯಾವುದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು, ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನಗಳು ಬಹಳ ಅವಶ್ಯಕವೆಂದು ನಮಗೆಲ್ಲರಿಗೂ ತಿಳಿದಿದೆ. ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪರೀಕ್ಷೆಗಳಲ್ಲಿ ಇವುಗಳಿಗೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಹೀಗಾಗಿ ಇಂದು ನಾವು ನಿಮಗಾಗಿ ಅಂತಹ ಕೆಲವು ಪ್ರಶ್ನೆಗಳನ್ನು ತಂದಿದ್ದೇವೆ. ಕೆಳಗೆ ನೀಡಲಾದ ಪ್ರಶ್ನೆಗಳನ್ನು ಎಚ್ಚರಿಕೆಯಿಂದ ಓದಿ ಮತ್ತು ಅವುಗಳಿಗೆ ಉತ್ತರಿಸಲು ಪ್ರಯತ್ನಿಸಿರಿ. ಇಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ನಾವು ಸಹ ಉತ್ತರಗಳನ್ನು ನೀಡಿದ್ದೇವೆ. ಈ ಪ್ರಶ್ನೆಗಳಿಗೆ ಉತ್ತರಿಸಲು ಪ್ರಯತ್ನಿಸಿ ನಿಮ್ಮ ಬುದ್ಧಿಮಟ್ಟವನ್ನು ಪರೀಕ್ಷಿಸಿಕೊಳ್ಳಿರಿ.
ಪ್ರಶ್ನೆ 1: ಇಂಡಿಯನ್ ಪ್ರೀಮಿಯರ್ ಲೀಗ್ (IPL)ನ ಮೊದಲ ಆವೃತ್ತಿಯನ್ನು ಯಾವ ವರ್ಷದಲ್ಲಿ ನಡೆಸಲಾಯಿತು?
ಉತ್ತರ: ಮೊದಲ ಐಪಿಎಲ್ ಪಂದ್ಯಾವಳಿಯನ್ನು 2008 ರಲ್ಲಿ 44 ದಿನಗಳ ಕಾಲ ನಡೆಸಲಾಯಿತು.
ಪ್ರಶ್ನೆ 2: 2024ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಯಾವಾಗ ಪ್ರಾರಂಭವಾಗಲಿದೆ?
ಉತ್ತರ: IPL 2024 ಇಂದು ಅಂದರೆ ಮಾರ್ಚ್ 22ರಿಂದ ಪ್ರಾರಂಭವಾಗಲಿದೆ. ಸಾರ್ವತ್ರಿಕ ಚುನಾವಣೆಗಳ ಹೊರತಾಗಿಯೂ ಭಾರತದಲ್ಲಿ ಆಯೋಜಿಸಲಾಗುವುದು ಎಂದು ಲೀಗ್ ಅಧ್ಯಕ್ಷ ಅರುಣ್ ಧುಮಾಲ್ ಖಚಿತಪಡಿಸಿದ್ದಾರೆ.
ಪ್ರಶ್ನೆ 3: IPL 2024 ಪಂದ್ಯಾವಳಿಯಲ್ಲಿ ಎಷ್ಟು ತಂಡಗಳು ಭಾಗವಹಿಸುತ್ತವೆ?
ಉತ್ತರ: ಐಪಿಎಲ್ 2024ರಲ್ಲಿ ಅತ್ಯುತ್ತಮ ಕ್ರಿಕೆಟಿಗರನ್ನು ಹೊಂದಿರುವ 10 ತಂಡಗಳಿವೆ.
ಪ್ರಶ್ನೆ 4: ಐಪಿಎಲ್ 2024 ರ ಪ್ರಾಯೋಜಕ ಸಂಸ್ಥೆ ಯಾವುದು?
ಉತ್ತರ: ಟಾಟಾ ಗ್ರೂಪ್ ಇಂಡಿಯನ್ ಪ್ರೀಮಿಯರ್ ಲೀಗ್‌ನ ಶೀರ್ಷಿಕೆ ಪ್ರಾಯೋಜಕರಾಗಿ 5 ವರ್ಷಗಳ ಅವಧಿಗೆ (2024-28) ₹2,500 ಕೋಟಿಗೆ (US$310 ಮಿಲಿಯನ್) ತಮ್ಮ ಒಪ್ಪಂದವನ್ನು ನವೀಕರಿಸಿದೆ. ಇದು ಲೀಗ್‌ನ ಇತಿಹಾಸದಲ್ಲಿ ಅತ್ಯಧಿಕ ಪ್ರಾಯೋಜಕತ್ವದ ಮೊತ್ತವಾಗಿದೆ.
ಪ್ರಶ್ನೆ 5: IPL 2024ರ ಆರಂಭಿಕ ಪಂದ್ಯದಲ್ಲಿ ಯಾವ್ಯಾವ ತಂಡಗಳು ಮುಖಾಮುಖಿಯಾಗುತ್ತಿವೆ?
ಉತ್ತರ: ಇಂದು ರಾತ್ರಿ ೮ ಗಂಟೆಗೆ ಚೆನ್ನೈ ಎಂ.ಚಿದಂಬರಂ ಕ್ರೀಡಾಂಗಣದಲ್ಲಿ ಆರಂಭಿಕ ಪಂದ್ಯ ನಡೆಯಲಿದೆ. ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಹಣಾಹಣಿ ನಡೆಯಲಿದೆ.
ಪ್ರಶ್ನೆ 6: IPL 2024ರ ಆರಂಭಿಕ ಪಂದ್ಯ ಎಲ್ಲಿ ನಡೆಯಲಿದೆ?
ಉತ್ತರ: ಚೆನ್ನೈ ಸೂಪರ್ ಕಿಂಗ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಚೆನ್ನೈನ ಚೆಪಾಕ್‌ನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಪ್ರಾರಂಭವಾಗಲಿದೆ.
ಪ್ರಶ್ನೆ 7: ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ನಾಯಕ ಯಾರು?
ಉತ್ತರ: ಋತುರಾಜ್ ಗಾಯಕ್ವಾಡ್ ಚೆನ್ನೈ ಸೂಪರ್ ಕಿಂಗ್ಸ್ (CSK) ನಾಯಕರಾಗಿದ್ದಾರೆ.
ಪ್ರಶ್ನೆ 8: IPL 2024ಗೆ ಎಷ್ಟು ಹೊಸ ಫ್ರಾಂಚೈಸಿಗಳನ್ನು ಸೇರಿಸಲಾಗಿದೆ?
ಉತ್ತರ: ಬಿಸಿಸಿಐ ಪ್ರತಿವರ್ಷ ಐಪಿಎಲ್ ಆಯೋಜಿಸುತ್ತದೆ. ಸಂಪೂರ್ಣ IPL 2024 ವೇಳಾಪಟ್ಟಿಯನ್ನು BCCI ಬಹಿರಂಗಪಡಿಸಿದೆ. ಬಿಸಿಸಿಐ ಎರಡು ಹೊಸ ತಂಡಗಳನ್ನು ಸೇರಿಸಿರುವುದರಿಂದ ಒಟ್ಟು 10 ತಂಡಗಳು ಈ ಐಪಿಎಲ್ ಟೂರ್ನಿಯಲ್ಲಿ ಭಾಗವಹಿಸಲಿವೆ.
ಪ್ರಶ್ನೆ 9: ಅತಿಹೆಚ್ಚು ಬಾರಿ ಐಪಿಎಲ್ ಟ್ರೋಫಿ ಗೆದ್ದ ತಂಡಗಳು ಯಾವುವು..?
ಉತ್ತರ: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ತಲಾ ಐದು ಬಾರಿ ಐಪಿಎಲ್ ಟ್ರೋಫಿ ಗೆದ್ದಿವೆ
ಪ್ರಶ್ನೆ 10: IPL 2024ರ ಋತುವಿನಲ್ಲಿ ಎಷ್ಟು ಪಂದ್ಯಗಳನ್ನು ಆಡಲು ನಿಗದಿಪಡಿಸಲಾಗಿದೆ?
ಉತ್ತರ: ಪ್ರಸಕ್ತ ಐಪಿಎಲ್ ಟೂರ್ನಿಯಲ್ಲಿ ಒಟ್ಟು 74 ಪಂದ್ಯಗಳು ನಡೆಯಲಿವೆ
ಇದನ್ನೂ ಓದಿ: IPL 2024: 8 ವರ್ಷಗಳ ಬಳಿಕ ಮೈದಾನಕ್ಕಿಳಿದ RCB ಮಾಜಿ ಪ್ಲೇಯರ್! ಈ ಬಾರಿ IPLನಲ್ಲಿ ಈತನದ್ದೇ ಹವಾ ಗ್ಯಾರಂಟಿ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ