LSG vs SRH: ಇಂಡಿಯನ್ ಪ್ರೀಮಿಯರ್ ಲೀಗ್ 2023ನ 10 ನೇ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡ ಮುಖಾಮುಖಿಯಾಗಿದೆ. ಇನ್ನು ಈ ಪಂದ್ಯದಲ್ಲಿ ಕನ್ನಡಿಗ ಕೆ ಎಲ್ ರಾಹುಲ್ ನೇತೃತ್ವದ ಲಖನೌ 5 ವಿಕೆಟ್ ಗಳ ಗೆಲುವು ಸಾಧಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: KKR ವಿರುದ್ಧ RCB ಸೋತಿದಕ್ಕೆ ಖುಷಿಯಲ್ಲಿ ಕುಣಿದಾಡಿದ ‘ಪ್ರೇಮಲೋಕ’ ನಟಿ ಜೂಹಿ ಚಾವ್ಲಾ! ಆಮೇಲೆ ಏನಂದ್ರು ಗೊತ್ತಾ?


ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಸನ್ ರೈಸರ್ಸ್ ಹೈದರಾಬಾದ್ ತಂಡ, 20 ಓವರ್’ನಲ್ಲಿ 8 ವಿಕೆಟ್ ಕಳೆದುಕೊಂಡು ಕೇವಲ 121 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಹೈದರಾಬಾದ್ ಪರ ಅನ್ಮೋಲ್ ಪ್ರೀತ್ ಸಿಂಗ್ 31, ಮಯಾಂಕ್ ಅಗರ್ವಾಲ್ 8, ರಾಹುಲ್ ತ್ರಿಪಾಠಿ 34, ಏಡೆನ್ ಮರ್ಕ್ರಂ ಶೂನ್ಯ, ಹ್ಯಾರಿ ಬುಕ್ 3, ವಾಷಿಂಗ್ಟನ್ ಸುಂದರ್ 16, ಅಬ್ದುಲ್ ಸಮದ್ 21, ಆದಿಲ್ ರಶೀದ್ 4 ರನ್ ಕಲೆ ಹಾಕಿದ್ದಾರೆ. ಗೆಲುವಿನ ಗುರಿ ಬೆನ್ನತ್ತಿದ್ದ ಲಖನೌ 16 ಓವರ್’ನಲ್ಲಿ 5 ವಿಕೆಟ್ ನಷ್ಟಕ್ಕೆ  127 ರನ್ ಕಲೆ ಹಾಕಿ ಗೆಲುವಿನ ದಡವನ್ನು ಸುಲಭವಾಗಿ ಸೇರಿದೆ.


ಲಖನೌ ಪರ ಕೃನಾಲ್ ಪಾಂಡ್ಯ 3, ಅಮಿತ್ ಮಿಶ್ರಾ 2, ರವಿ ಬಿಶ್ನೋಯ್ ಮತ್ತು ಯಶ್ ಥಾಕೂರ್ ತಲಾ ಒಂದು ವಿಕೆಟ್ ಕಬಳಿಸಿದ್ದಾರೆ.


ಸನ್‌ರೈಸರ್ಸ್ ಹೈದರಾಬಾದ್ (ಪ್ಲೇಯಿಂಗ್-11): ಮಯಾಂಕ್ ಅಗರ್ವಾಲ್, ಅನ್ಮೋಲ್‌ಪ್ರೀತ್ ಸಿಂಗ್ (ವಿಕೆಟ್ ಕೀಪರ್), ರಾಹುಲ್ ತ್ರಿಪಾಠಿ, ಏಡೆನ್ ಮರ್ಕ್ರಂ (ನಾಯಕ), ಹ್ಯಾರಿ ಬ್ರೂಕ್, ವಾಷಿಂಗ್ಟನ್ ಸುಂದರ್, ಅಬ್ದುಲ್ ಸಮದ್, ಭುವನೇಶ್ವರ್ ಕುಮಾರ್, ಟಿ ನಟರಾಜನ್, ಉಮ್ರಾನ್ ಮಲಿಕ್ ಮತ್ತು ಆದಿಲ್ ರಶೀದ್


ಇದನ್ನೂ ಓದಿ: DC vs RR: ರಾಜಸ್ಥಾನ ವಿರುದ್ಧದ ಪಂದ್ಯಕ್ಕೂ ಮುನ್ನ ಡೆಲ್ಲಿ ಕ್ಯಾಪಿಟಲ್ಸ್’ಗೆ ‘ಮಹಾಮೋಸ' ಮಾಡಿದ ಈ ಸ್ಟಾರ್ ಆಟಗಾರ!


ಲಕ್ನೋ ಸೂಪರ್ ಜೈಂಟ್ಸ್ (ಪ್ಲೇಯಿಂಗ್-11): ಕೆಎಲ್ ರಾಹುಲ್ (ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ನಿಕೋಲಸ್ ಪೂರನ್ (ವಿಕೆಟ್ ಕೀಪರ್), ರೊಮಾರಿಯೊ ಶೆಫರ್ಡ್, ಕೃನಾಲ್ ಪಾಂಡ್ಯ, ಅಮಿತ್ ಮಿಶ್ರಾ, ಯಶ್ ಠಾಕೂರ್, ಜಯದೇವ್ ಉನದ್ಕತ್ ಮತ್ತು ರವಿ ಬಿಷ್ಣೋಯ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.