IPL 2023ರ ಬಳಿಕ ಧೋನಿ ನಿವೃತ್ತಿ ಕನ್ಫರ್ಮ್! ಸ್ವತಃ ಅವರೇ ಕೊಟ್ರು ಈ ರೀತಿಯ ಸುಳಿವು
MS Dhoni retirement: ಧೋನಿಯ ಮೇಲೆ ಅಭಿಮಾನಿಗಳಿಗೆ ಯಾವ ಮಟ್ಟಿಗೆ ಕ್ರೇಜ್ ಇದೆ ಎಂದರೆ, ಕೇವಲ ಧೋನಿಯನ್ನು ನೋಡೋದಕ್ಕೆಂದೇ ಓರ್ವ ಅಭಿಮಾನಿ ತನ್ನ ಬೈಕ್ ಮಾರಿ ಗೋವಾದಿಂದ ಬೆಂಗಳೂರಿಗೆ ಬಂದಿದ್ದ, ಇದೊಂದೇ ಅಲ್ಲ, ಸಾವಿರಾರು ನಿದರ್ಶನಗಳು ನಮಗೆ ಕಾಣ ಸಿಗುತ್ತವೆ. ಆದರೆ ಈ ಮಧ್ಯೆ, ಧೋನಿ ತನ್ನ ಐಪಿಎಲ್ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳುವ ಸುಳಿವನ್ನು ನೀಡಿದ್ದಾರೆ.
MS Dhoni retirement: ಭಾರತೀಯ ಕ್ರಿಕೆಟ್ ಲೋಕ ಕಂಡ ಅತ್ಯುತ್ತಮ ಕ್ರಿಕೆಟಿಗ ಅಂದರೆ ಎಂಎಸ್ ಧೋನಿ. 41 ನೇ ವಯಸ್ಸಿನಲ್ಲಿಯೂ ಸೂಪರ್ ಸ್ಟಾರ್ ಆಗಿರುವ ಧೋನಿ ಸದ್ಯ ಐಪಿಎಲ್ ಆವೃತ್ತಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕತ್ವ ವಹಿಸಿ ಆಟವಾಡುತ್ತಿದ್ದಾರೆ. ಅವರ ಅಸಾಧಾರಣ ಕೌಶಲ್ಯತೆ, ನಾಯಕತ್ವ, ಸಮಯ ಪ್ರಜ್ಞೆ ಇವೆಲ್ಲವೂ ಊಹೆಗೂ ಮೀರಿದ್ದು. ಇನ್ನು ಕಳೆದ ದಿನ ನಡೆದ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಸಿಎಸ್’ಕೆಯ ಪಂದ್ಯದಲ್ಲಿ ಧೋನಿ ಮತ್ತೊಂದು ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಇದು ಅವರ ವೃತ್ತಿ ಜೀವನವನ್ನು ಮತ್ತೆ ನೆನಪಿಸುವಂತೆ ಮಾಡಿದೆ.
ಧೋನಿಯ ಮೇಲೆ ಅಭಿಮಾನಿಗಳಿಗೆ ಯಾವ ಮಟ್ಟಿಗೆ ಕ್ರೇಜ್ ಇದೆ ಎಂದರೆ, ಕೇವಲ ಧೋನಿಯನ್ನು ನೋಡೋದಕ್ಕೆಂದೇ ಓರ್ವ ಅಭಿಮಾನಿ ತನ್ನ ಬೈಕ್ ಮಾರಿ ಗೋವಾದಿಂದ ಬೆಂಗಳೂರಿಗೆ ಬಂದಿದ್ದ, ಇದೊಂದೇ ಅಲ್ಲ, ಸಾವಿರಾರು ನಿದರ್ಶನಗಳು ನಮಗೆ ಕಾಣ ಸಿಗುತ್ತವೆ. ಆದರೆ ಈ ಮಧ್ಯೆ, ಧೋನಿ ತನ್ನ ಐಪಿಎಲ್ ವೃತ್ತಿ ಜೀವನಕ್ಕೆ ಗುಡ್ ಬೈ ಹೇಳುವ ಸುಳಿವನ್ನು ನೀಡಿದ್ದಾರೆ.
ಇದನ್ನೂ ಓದಿ: Team Indiaದ ಬ್ರಹ್ಮಾಸ್ತ್ರ RCB ಕೈಯಲ್ಲಿ! ಬೆಂಗಳೂರಿಗೆ IPL ಕಪ್; ಭಾರತಕ್ಕೆ WTC ಟ್ರೋಫಿ ಗೆದ್ದುಕೊಡೋದು ಈತನೇ…
ಪ್ರತಿ ಐಪಿಎಲ್ ಸೀಸನ್ ಪ್ರಾರಂಭವಾದರೆ ಸಾಕು, ಇದು ಧೋನಿ ಅವರ ಕೊನೆಯ ಐಪಿಎಲ್ ಪಂದ್ಯ ಎಂದು ಹಲವು ವರ್ಷಗಳಿಂದ ಅಭಿಮಾನಿಗಳು ಹೇಳುತ್ತಿದ್ದರು. ಇದೀಗ ತಮ್ಮ 40 ರ ಹರೆಯವನ್ನು ಪ್ರವೇಶಿಸುತ್ತಿದ್ದಂತೆ, ಧೋನಿ ಸ್ವತಃ ಒಂದು ಹೇಳಿಕೆಯನ್ನು ನೀಡಿದ್ದು, ಅಭಿಮಾನಿಗಳಲ್ಲಿ ಶಾಕ್ ಮೂಡಿಸಿದೆ.
"ತಮ್ಮ ವೃತ್ತಿಜೀವನ ಕೊನೆಯ ಹಂತದಲ್ಲಿದೆ" ಎಂದು ಹೇಳುವ ಮೂಲಕ ನಿವೃತ್ತಿಯ ಸುಳಿವನ್ನು ನೀಡಿದ್ದಾರೆ ಧೋನಿ, ಈ ಹೇಳಿಕೆಯು ಸಾಮಾಜಿಕ ಮಾಧ್ಯಮದ ಮೂಲಕ ಶೇರ್ ಆಗುತ್ತಿದ್ದು, ಆಘಾತವನ್ನು ಉಂಟುಮಾಡಿದೆ. ಮತ್ತೊಂದೆಡೆ ಅಭಿಮಾನಿಗಳಿಗೆ ಭಾವನಾತ್ಮಕವಾಗಿ ನೋವುಂಟು ಮಾಡಿದೆ.
"ಇದು ನನ್ನ ವೃತ್ತಿಜೀವನದ ಕೊನೆಯ ಹಂತ, ನಾನು ಅನೇಕ ವರ್ಷಗಳಿಂದ ಆಡುತ್ತಿದ್ದೇನೆ. ಅಭಿಮಾನಿಗಳು ನನಗೆ ಸಾಕಷ್ಟು ಪ್ರೀತಿ ಮತ್ತು ವಾತ್ಸಲ್ಯವನ್ನು ನೀಡಿದ್ದಾರೆ. ಬ್ಯಾಟಿಂಗ್ ಮಾಡಲು ಸಾಕಷ್ಟು ಅವಕಾಶಗಳು ಸಿಗುತ್ತಿಲ್ಲ, ಆದರೆ ಯಾವುದೇ ಬೇಜಾರಿಲ್ಲ" ಎಂದು ಧೋನಿ ತಮ್ಮ ಪಂದ್ಯದ ನಂತರದ ಹೇಳಿದರು.
"ಏನೇ ಹೇಳಿದರೂ ಮತ್ತು ಮಾಡಿದರೂ, ಇದು ನನ್ನ ವೃತ್ತಿಜೀವನದ ಕೊನೆಯ ಹಂತ, ಅದನ್ನು ಆನಂದಿಸುವುದು ಮುಖ್ಯ" ಎಂದು ಹೇಳಿದ್ದಾರೆ ಮಾಹಿ.
ಇದನ್ನೂ ಓದಿ: ಕಡಿಮೆ ವಿದ್ಯುತ್ ಬಳಕೆ; ಭಾರೀ ಅಗ್ಗದ ಬೆಲೆಯಲ್ಲಿ.. ಬೇಸಿಗೆಯಲ್ಲೂ ಕಾಶ್ಮೀರದ ಅನುಭವ ನೀಡುತ್ತೆ ಈ ಪುಟ್ಟ Air Cooler
ಅವರ ಮುಂದಿನ ದಿನಗಳ ಬಗ್ಗೆ ಇದು ಅನೇಕ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಅಭಿಮಾನಿಗಳಿಗೆ ಉತ್ತರ ಸಿಕ್ಕಿಲ್ಲ. ಇವೆಲ್ಲದರ ಹೊರತಾಗಿ ಮಾತನಾಡುವುದಾದರೆ, ಧೋನಿ ಕ್ರಿಕೆಟ್ ಜಗತ್ತಿನಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ ಎಂಬುದನ್ನು ಮಾತ್ರ ಅಲ್ಲಗಳೆಯುವಂತಿಲ್ಲ. ಅವರ ಪ್ರತಿಭೆ, ಸಮರ್ಪಣೆ ಮತ್ತು ನಾಯಕತ್ವದ ಪರಿ ಅಸಂಖ್ಯಾತ ಅಭಿಮಾನಿಗಳು ಮತ್ತು ಆಟಗಾರರನ್ನು ಪ್ರೇರೇಪಿಸುವಂತೆ ಮಾಡಿದ್ದು ಸುಳ್ಳಲ್ಲ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.