Team India: ಆ ಒಬ್ಬ ಆಟಗಾರನಿಗೆ ಅವಕಾಶ ಕೊಡಲು ವಿಶ್ವಕಪ್’ನಿಂದ ಹೊರಗಿಡಲ್ಪಟ್ಟ ಶುಭ್ಮನ್! ರಾಶಿ ರಾಶಿ ದಾಖಲೆ ವ್ಯರ್ಥವೇ?

Team India in World Cup 2023: ಐಪಿಎಲ್‌’ನಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿರುವ ಗುಜರಾತ್ ಟೈಟಾನ್ಸ್ ತಂಡದ ಆಟಗಾರ ಶುಭ್ಮನ್ ಗಿಲ್ ಬಗ್ಗೆ ತಿಳಿದೇ ಇದೆ, ಟೀಂ ಇಂಡಿಯಾದ ಆರಂಭಿಕ ಆಟಗಾರ ಇವರು. ಆದರೆ ಇಂದು ಲಕ್ನೋ ಸೂಪರ್‌ ಜೈಂಟ್ಸ್ (ಎಲ್‌’ಎಸ್‌’ಜಿ) ವಿರುದ್ಧ ನಡೆದ ಪಂದ್ಯದಲ್ಲಿ ಖಾತೆ ತೆರೆಯದೆ ಪೆವಿಲಿಯನ್‌’ಗೆ ಮರಳಿದ್ದಾರೆ.

Written by - Bhavishya Shetty | Last Updated : Apr 22, 2023, 06:13 PM IST
    • ಟೀಂ ಇಂಡಿಯಾದ ಆರಂಭಿಕ ಆಟಗಾರ ಶುಭ್ಮನ್ ಗಿಲ್
    • ಈ ಬಾರಿಯ ಸೀಸನ್’ನಲ್ಲಿ ಆಡಿರುವ 6 ಪಂದ್ಯಗಳಲ್ಲಿ ಗಿಲ್ ಒಟ್ಟು 228 ರನ್ ಗಳಿಸಿದ್ದಾರೆ.
    • ಮುಂಬರುವ ವಿಶ್ವಕಪ್‌’ನಲ್ಲಿ ಅವರ ಸ್ಥಾನಕ್ಕೆ ಕುತ್ತು ಬರಲಿದೆಯೇ? ಎಂಬ ಪ್ರಶ್ನೆ ಭುಗಿಲೆದ್ದಿದೆ.
Team India: ಆ ಒಬ್ಬ ಆಟಗಾರನಿಗೆ ಅವಕಾಶ ಕೊಡಲು ವಿಶ್ವಕಪ್’ನಿಂದ ಹೊರಗಿಡಲ್ಪಟ್ಟ ಶುಭ್ಮನ್! ರಾಶಿ ರಾಶಿ ದಾಖಲೆ ವ್ಯರ್ಥವೇ? title=
Shubhman Gill

Team India in World Cup 2023: ಇಂಡಿಯನ್ ಪ್ರೀಮಿಯರ್ ಲೀಗ್‌’ನ (ಐಪಿಎಲ್ -2023) 16ನೇ ಸೀಸನ್ ದೇಶದ ವಿವಿಧ ನಗರಗಳಲ್ಲಿ ಆಡಲಾಗುತ್ತಿದೆ. ಅನೇಕ ಆಟಗಾರರು ಲೀಗ್‌’ನಲ್ಲಿ ತಮ್ಮ ಶಕ್ತಿಯನ್ನು ತೋರಿಸುತ್ತಿದ್ದಾರೆ. ಕೆಲವರು ಬ್ಯಾಟಿಂಗ್’ನಲ್ಲಿ ಅಬ್ಬರಿಸುತ್ತಿದ್ರೆ, ಇನ್ನೂ ಕೆಲವರು ಬೌಲಿಂಗ್, ಫೀಲ್ಡಿಂಗ್’ನಲ್ಲಿ ಚಮತ್ಕಾರ ನಡೆಸುತ್ತಿದ್ದಾರೆ. ಈ ಮಧ್ಯೆ ಏಕದಿನ ವಿಶ್ವಕಪ್ -2023ರ ಬಗ್ಗೆ ಮಹತ್ವದ ಸುದ್ದಿ ಕೇಳಿಬಂದಿದೆ.

ಇದನ್ನೂ ಓದಿ: IPL2023: ಕ್ರೀಕೆಟ್ ಪ್ರಿಯರಿಗೆ ಜಿಯೋ ಸಿನಿಮಾದಿಂದ ಗುಡ್‌ ನ್ಯೂಸ್‌ !

ಐಪಿಎಲ್‌’ನಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡುತ್ತಿರುವ ಗುಜರಾತ್ ಟೈಟಾನ್ಸ್ ತಂಡದ ಆಟಗಾರ ಶುಭ್ಮನ್ ಗಿಲ್ ಬಗ್ಗೆ ತಿಳಿದೇ ಇದೆ, ಟೀಂ ಇಂಡಿಯಾದ ಆರಂಭಿಕ ಆಟಗಾರ ಇವರು. ಆದರೆ ಇಂದು ಲಕ್ನೋ ಸೂಪರ್‌ ಜೈಂಟ್ಸ್ (ಎಲ್‌’ಎಸ್‌’ಜಿ) ವಿರುದ್ಧ ನಡೆದ ಪಂದ್ಯದಲ್ಲಿ ಖಾತೆ ತೆರೆಯದೆ ಪೆವಿಲಿಯನ್‌’ಗೆ ಮರಳಿದ್ದಾರೆ. ಈ ಬಾರಿಯ ಸೀಸನ್’ನಲ್ಲಿ ಆಡಿರುವ 6 ಪಂದ್ಯಗಳಲ್ಲಿ ಗಿಲ್ ಒಟ್ಟು 228 ರನ್ ಗಳಿಸಿದ್ದಾರೆ. ಆದರೆ ಇದೀಗ ಗಿಲ್ ಬ್ಯಾಟಿಂಗ್ ಕೈಕೊಟ್ಟಿದ್ದು, ಮುಂಬರುವ ವಿಶ್ವಕಪ್‌’ನಲ್ಲಿ ಅವರ ಸ್ಥಾನಕ್ಕೆ ಕುತ್ತು ಬರಲಿದೆಯೇ? ಎಂಬ ಪ್ರಶ್ನೆ ಭುಗಿಲೆದ್ದಿದೆ.

ಶುಭ್ಮನ್ ಗಿಲ್ ಹೊರಗಿಡಲ್ಪಟ್ಟರೆ, ಅವರ ಸ್ಥಾನಕ್ಕೆ ಯಾರು ಬರಬಹುದು ಎಂಬ ಪ್ರಶ್ನೆಯೂ ಇದೆ. ಅನುಭವಿ ಶಿಖರ್ ಧವನ್ ಅವರು ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ವಿಶ್ವಕಪ್‌’ನಲ್ಲಿ ಗಿಲ್ ಅವರ ಸ್ಥಾನಕ್ಕೆ ಧವನ್ ಅವರು ಬರಬಹುದು ಎಂದು ಹೇಳಲಾಗುತ್ತಿದೆ. ಇನ್ನು ಸುದ್ದಿ ಹೊರ ಬೀಳುತ್ತಿದ್ದಂತೆ ಗಿಲ್ ಫ್ಯಾನ್ಸ್ ಕೋಪಗೊಂಡು, ಧವನ್’ಗಾಗಿ ಈ ಅವಕಾಶವನ್ನು ಗಿಲ್ ಅವರಿಂದ ಕಿತ್ತುಕೊಳ್ಳಲಾಗುತ್ತಿದೆ ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ: Virat Kohli: ವಿರಾಟ್’ಗೆ ಈ ತಿಂಡಿ ಅಂದ್ರೆ ಪಂಚಪ್ರಾಣ! ಇದನ್ನು ಸವಿಯಲೆಂದೇ ಈ ಸ್ಥಳಕ್ಕೆ ಓಡೋಡಿ ಬರ್ತಾರೆ ಕಿಂಗ್ ಕೊಹ್ಲಿ

ಎಲ್ಲಾ ಮೂರು ಸ್ವರೂಪಗಳು ಶತಮಾನಗಳು

23 ವರ್ಷ ಹರೆಯದ ಶುಭ್ಮನ್ ಗಿಲ್ ತಮ್ಮ ವೃತ್ತಿಜೀವನದಲ್ಲಿ 24 ಏಕದಿನ ಪಂದ್ಯಗಳನ್ನು ಆಡಿದ್ದಾರೆ, ಅದರಲ್ಲಿ 1311 ರನ್ ಗಳಿಸಿದ್ದಾರೆ. ಇದರಲ್ಲಿ 4 ಶತಕ, 5 ಅರ್ಧ ಶತಕಗಳು ಸೇರಿವೆ. ಇನ್ನು ಟೆಸ್ಟ್ ಕ್ರಿಕೆಟ್’ನಲ್ಲಿ 15 ಟೆಸ್ಟ್’ಗಳನ್ನಾಡಿದ್ದು, 2 ಶತಕ ಮತ್ತು 4 ಅರ್ಧಶತಕದ ನೆರವಿನಿಂದ 890 ರನ್ ಗಳಿಸಿದ್ದಾರೆ. 6 ಟಿ 20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 202 ರನ್ ಬಾರಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News