Mumbai Indians Captain Rohit Sharma: ಟೀಂ ಇಂಡಿಯಾದ ಆರಂಭಿಕ ಆಟಗಾರ ರೋಹಿತ್ ಶರ್ಮಾ ಪ್ರಸ್ತುತ ಐಪಿಎಲ್ 16 ನೇ ಸೀಸನ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ. ದಾಖಲೆಯ 5 ಬಾರಿಯ ಚಾಂಪಿಯನ್ ತಂಡ ಇದಾಗಿದೆ. ಈ ತಂಡದ ಮುಂದಿನ ಪಂದ್ಯವು ಇಂದು ರಾಜಸ್ಥಾನ ರಾಯಲ್ಸ್‌ ವಿರುದ್ಧ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಇದಕ್ಕೂ ಮುನ್ನ ತಂಡದ ಮುಖ್ಯ ಕೋಚ್ ಮಾರ್ಕ್ ಬೌಚರ್ ಹೇಳಿಕೆಯೊಂದನ್ನು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Viral Video: ಪಂದ್ಯದ ಮಧ್ಯೆ ಸಿಡಿದೆದ್ದ Hardik Pandya! ಆಟಗಾರನ ಮೇಲೆ ಜರಿದ ಈ ವಿಡಿಯೋ ನೋಡಿ


ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್-2023) ಪ್ರಸಕ್ತ ಋತುವಿನಿಂದ ವಿರಾಮ ನೀಡುವಂತೆ ತಂಡದ ನಾಯಕ ರೋಹಿತ್ ಶರ್ಮಾ ಕೇಳಿಲ್ಲ. ಆದರೆ ರೋಹಿತ್ ಬೇಡಿಕೆ ಇಟ್ಟರೆ ಪರಿಗಣಿಸಲಾಗುವುದು ಎಂದು ಮುಂಬೈ ಇಂಡಿಯನ್ಸ್ ಮುಖ್ಯ ಕೋಚ್ ಮಾರ್ಕ್ ಬೌಚರ್ ಶನಿವಾರ ಹೇಳಿದ್ದಾರೆ.


ರೋಹಿತ್ ಕೆಲವು ಸಮಯದಿಂದ ಸ್ಥಿರವಾದ ಕ್ರಿಕೆಟ್ ಆಡುತ್ತಿದ್ದಾರೆ. ಮಾಜಿ ಅನುಭವಿ ಬ್ಯಾಟ್ಸ್‌ಮನ್ ಸುನಿಲ್ ಗವಾಸ್ಕರ್ ಇತ್ತೀಚೆಗೆ ಭಾರತೀಯ ನಾಯಕ ಐಪಿಎಲ್‌ ನಿಂದ ಸ್ವಲ್ಪ ಸಮಯದವರೆಗೆ ವಿರಾಮ ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದ್ದರು. ರೋಹಿತ್ ವಿಶ್ರಾಂತಿ ಪಡೆದರೆ, ಆಸ್ಟ್ರೇಲಿಯಾ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್‌ ಗೆ (ಡಬ್ಲ್ಯುಟಿಸಿ ಫೈನಲ್) ತನ್ನನ್ನು ತಾನು ರಿಫ್ರೆಶ್ ಮಾಡಿಕೊಳ್ಳಬಹುದು ಎಂದು ಅನುಭವಿ ಸುನಿಲ್ ಗವಾಸ್ಕರ್ ಹೇಳಿದ್ದರು.


ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ನ ಅಂತಿಮ ಪಂದ್ಯವು ಜೂನ್ 7 ರಿಂದ ಲಂಡನ್‌ ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿದೆ. ಮುಂಬೈ ಮತ್ತು ರಾಜಸ್ಥಾನ್ ರಾಯಲ್ಸ್ (MI vs RR) ನಡುವಿನ ಭಾನುವಾರದ ಪಂದ್ಯದ ಮುನ್ನಾ ದಿನದಂದು ಬೌಚರ್ ಈ ಕುತೂಹಲಕಾರಿ ಹೇಳಿಕೆ ನೀಡಿದ್ದಾರೆ.


ಇದನ್ನೂ ಓದಿ: ಐಪಿಎಲ್ ಸೀಸನ್’ನಿಂದ ಡೆಲ್ಲಿ ಕ್ಯಾಪಿಟಲ್ಸ್ ಔಟ್! ಟ್ರೋಫಿ ಕನಸು ಹೈದರಾಬಾದ್’ಗೆ ಜೀವಂತ


“ಅವರು (ರೋಹಿತ್) ವಿಶ್ರಾಂತಿ ತೆಗೆದುಕೊಳ್ಳಬೇಕು ಎಂದು ನಾನು ಭಾವಿಸುವುದಿಲ್ಲ. ಇದನ್ನು ನಿರ್ಧರಿಸುವುದು ನನ್ನ ಕೆಲಸವಲ್ಲ. ರೋಹಿತ್ ಅವರು ಉತ್ತಮ ಆಟಗಾರ ಮತ್ತು ನಾಯಕರಾಗಿರುವ ಕಾರಣ ಅವರು ಆಟವನ್ನು ಮುಂದುವರಿಸಬೇಕೆಂದು ನಾವು ಬಯಸುತ್ತೇವೆ. ಒಂದು ವೇಳೆ ರೋಹಿತ್‌ ನನ್ನ ಬಳಿಗೆ ಬಂದು ವಿಶ್ರಾಂತಿ ಪಡೆಯಬೇಕೆಂದು ಹೇಳಿದರೆ, ನಾವು ಖಂಡಿತವಾಗಿಯೂ ಅದನ್ನು ಪರಿಗಣಿಸುತ್ತೇವೆ. ಅವರು ಆ ನಿರ್ಧಾರವನ್ನು ಇನ್ನೂ ಮಾಡಿಲ್ಲ” ಎಂದು ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.