Viral Video: ಪಂದ್ಯದ ಮಧ್ಯೆ ಸಿಡಿದೆದ್ದ Hardik Pandya! ಆಟಗಾರನ ಮೇಲೆ ಜರಿದ ಈ ವಿಡಿಯೋ ನೋಡಿದ್ರೆ ಶಾಕ್ ಆಗ್ತೀರ

Hardik Pandya Viral Video: ಹಾರ್ದಿಕ್ ಪಾಂಡ್ಯ ಬೌಲಿಂಗ್ ಮುಗಿಸಿ ಹಿಂತಿರುಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದೇ ಸಂದರ್ಭದಲ್ಲಿ ನಾನ್ ಸ್ಟ್ರೈಕರ್ ತುದಿಯಲ್ಲಿ ನಿಂತಿದ್ದ ರಹಮಾನುಲ್ಲಾಜ್ ಗುರ್ಬಾಜ್ ಜೊತೆ ಮಾತನಾಡತೊಡಗಿದ್ದು, ಕೊಂಚ ಸಮಯವಾಗುತ್ತಿದ್ದಂತೆ, ಕೋಪಗೊಂಡ ಅವರು, ಏನೋ ತೋರಿಸುತ್ತಾ ಸಿಟ್ಟಿನಿಂದ ಹೇಳುತ್ತಿರುವುದು ಕಂಡುಬಂದಿತು

Written by - Bhavishya Shetty | Last Updated : Apr 30, 2023, 07:15 AM IST
    • ಗುಜರಾತ್ ಟೈಟಾನ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.
    • ಬ್ಯಾಟಿಂಗ್‌ ಗೆ ಬಂದ ವಿಜಯ್ ಶಂಕರ್ ಅವರು ಅದ್ಭುತ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ ಆಡಿದರು.
    • ಹಾರ್ದಿಕ್ ಪಾಂಡ್ಯ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Viral Video: ಪಂದ್ಯದ ಮಧ್ಯೆ ಸಿಡಿದೆದ್ದ Hardik Pandya! ಆಟಗಾರನ ಮೇಲೆ ಜರಿದ ಈ ವಿಡಿಯೋ ನೋಡಿದ್ರೆ ಶಾಕ್ ಆಗ್ತೀರ title=
Hardik Pandya

Hardik Pandya Viral Video: ಇಂಡಿಯನ್ ಪ್ರೀಮಿಯರ್ ಲೀಗ್ 2023 ರಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ ನಲ್ಲಿ ಶನಿವಾರ (ಏಪ್ರಿಲ್ 29) ನಡೆದ ಮೊದಲ ಪಂದ್ಯದಲ್ಲಿ, ಗುಜರಾತ್ ಟೈಟಾನ್ಸ್ ತನ್ನ ತವರಿನಲ್ಲಿ ಕೆಕೆಆರ್ ಅನ್ನು 7 ವಿಕೆಟ್‌ ಗಳಿಂದ ಸೋಲಿಸಿತು. ಈ ಗೆಲುವಿನೊಂದಿಗೆ ಗುಜರಾತ್ ಟೈಟಾನ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಈ ಋತುವಿನ ಉಭಯ ತಂಡಗಳ ನಡುವಿನ ಮೊದಲ ಪಂದ್ಯದಲ್ಲಿ ಗುಜರಾತ್ ತಂಡವನ್ನು ಕೋಲ್ಕತ್ತಾ ಸೋಲಿಸಿದರೆ, ಈ ಪಂದ್ಯದಲ್ಲಿ ಗುಜರಾತ್ ಗೆಲುವಿನ ಮೂಲಕ ಸಮಬಲ ಸಾಧಿಸಿದೆ. ಈ ನಡುವೆ ಹಾರ್ದಿಕ್ ಪಾಂಡ್ಯ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: Arjun Tendulkar: ಮೊದಲು ಮೂಗಿನೊಳಗೆ ಬೆರಳಿಟ್ಟ… ಆಮೇಲೆ ಬಾಯಿಗೆ ಹಾಕಿದ! ಅರ್ಜುನ್ ತೆಂಡೂಲ್ಕರ್ ಅಸಹ್ಯ ವಿಡಿಯೋ ವೈರಲ್

ಹಾರ್ದಿಕ್ ಪಾಂಡ್ಯ ಬೌಲಿಂಗ್ ಮುಗಿಸಿ ಹಿಂತಿರುಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದೇ ಸಂದರ್ಭದಲ್ಲಿ ನಾನ್ ಸ್ಟ್ರೈಕರ್ ತುದಿಯಲ್ಲಿ ನಿಂತಿದ್ದ ರಹಮಾನುಲ್ಲಾಜ್ ಗುರ್ಬಾಜ್ ಜೊತೆ ಮಾತನಾಡತೊಡಗಿದ್ದು, ಕೊಂಚ ಸಮಯವಾಗುತ್ತಿದ್ದಂತೆ, ಕೋಪಗೊಂಡ ಅವರು, ಏನೋ ತೋರಿಸುತ್ತಾ ಸಿಟ್ಟಿನಿಂದ ಹೇಳುತ್ತಿರುವುದು ಕಂಡುಬಂದಿತು. ವೀಡಿಯೋದಲ್ಲಿ ಅವರ ಮುಖವನ್ನು ಸ್ಪಷ್ಟವಾಗಿ ನೋಡಿದ ಜನರು, ಯಾವುದೋ ವಿಷಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ಘಟನೆ ನಡೆದ ನಂತರ ಹಾರ್ದಿಕ್ ಪಾಂಡ್ಯ ಅಂಪೈರ್‌ ಬಳಿ ಬಂದು ಏನೋ ಹೇಳಿದ್ದಾರೆ.

 

ಗುಜರಾತ್ ಬ್ಯಾಟ್ಸ್‌ಮನ್‌ ಗಳ ಅದ್ಭುತ ಬ್ಯಾಟಿಂಗ್:

ಗುಜರಾತ್ ಟೈಟಾನ್ಸ್ ಪರ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಗೆ ಬಂದ ವಿಜಯ್ ಶಂಕರ್ ಅವರು ಅದ್ಭುತ ಪಂದ್ಯಶ್ರೇಷ್ಠ ಇನ್ನಿಂಗ್ಸ್‌ ಆಡಿದರು. ಈ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟು ಅಜೇಯರಾಗಿ ಮರಳಿದರು (24 ಎಸೆತಗಳಲ್ಲಿ 51 ರನ್ ಗಳಿಸಿದ್ದಾರೆ). ಈ ಇನ್ನಿಂಗ್ಸ್‌ ನಲ್ಲಿ 2 ಬೌಂಡರಿ ಮತ್ತು 5 ದೀರ್ಘ ಸಿಕ್ಸರ್‌ ಗಳನ್ನು ಬಾರಿಸಿದ್ದರು. ಇವರಲ್ಲದೆ ಡೇವಿಡ್ ಮಿಲ್ಲರ್ ಕೂಡ 18 ಎಸೆತಗಳಲ್ಲಿ 32 ರನ್ ಗಳಿಸಿ ಅಜೇಯರಾಗಿ ಮರಳಿದರು. ನಾಯಕ ಹಾರ್ದಿಕ್ ಪಾಂಡ್ಯ 26 ರನ್ ಗಳಿಸಿದರೆ, ಓಪನಿಂಗ್ ಗೆ ಬಂದ ಶುಭಮನ್ ಗಿಲ್ ಕೇವಲ 1 ರನ್ ನಿಂದ ಅರ್ಧಶತಕ ವಂಚಿತರಾದರು. ವೃದ್ಧಿಮಾನ್ ಸಹಾ 10 ರನ್ ಗಳಿಸಿದರು.

ಇದನ್ನೂ ಓದಿ: IPL ಮಧ್ಯೆಯೇ ಈ ಆಟಗಾರನಿಗೆ ಗಂಭೀರ ಗಾಯ! ಟೂರ್ನಿಯಿಂದಲೇ ಹೊರಬೀಳುವ ಸಾಧ್ಯತೆ

ಪಂದ್ಯದ ಸ್ಥಿತಿ ಹೀಗಿತ್ತು:

ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡ ಕೆಕೆಆರ್ ತಂಡವನ್ನು 7 ವಿಕೆಟ್ ಗಳಿಂದ ಸೋಲಿಸಿದೆ. ಈ ಗೆಲುವಿನೊಂದಿಗೆ ಗುಜರಾತ್ ಟೈಟಾನ್ಸ್ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ತಂಡ ನಿಗದಿತ 20 ಓವರ್‌ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಗುಜರಾತ್ ಬ್ಯಾಟ್ಸ್‌ಮನ್‌ ಗಳು 17.5 ಓವರ್‌ ಗಳಲ್ಲಿ 180 ರನ್ ಗಳಿಸಿ ಗೆಲುವನ್ನು ದಾಖಲಿಸಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News