GT vs LSG: ಲಕ್ನೋದ ಏಕಾನಾ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್-2023 ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಮತ್ತು ಲಕ್ನೋ ಸೂಪರ್‌ ಜೈಂಟ್ಸ್ ಮುಖಾಮುಖಿಯಾಗಿದ್ದವು. ಲಕ್ನೋ ಇನಿಂಗ್ಸ್‌’ನ ಕೊನೆಯ ಓವರ್‌’ನಲ್ಲಿ 12 ರನ್‌’ಗಳ ಅಗತ್ಯವಿದ್ದಾಗ ಅಭಿಮಾನಿಗಳ ರೋಮಾಂಚನ ಉತ್ತುಂಗಕ್ಕೇರಿತ್ತು. ಅಂತಿಮವಾಗಿ ಗುಜರಾತ್ ಗೆದ್ದರೂ ವೇಗಿಯೊಬ್ಬರು ತಮ್ಮ ಪ್ರದರ್ಶನದಿಂದ ಎಲ್ಲರ ಮನ ಗೆದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Virat Kohli: ವಿರಾಟ್’ಗೆ ಈ ತಿಂಡಿ ಅಂದ್ರೆ ಪಂಚಪ್ರಾಣ! ಇದನ್ನು ಸವಿಯಲೆಂದೇ ಈ ಸ್ಥಳಕ್ಕೆ ಓಡೋಡಿ ಬರ್ತಾರೆ ಕಿಂಗ್ ಕೊಹ್ಲಿ


ಏಕಾನಾ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧ 7 ರನ್‌’ಗಳ ಜಯ ದಾಖಲಿಸಿತು. ನಾಯಕ ಹಾರ್ದಿಕ್ ಪಾಂಡ್ಯ ಅವರ ಅಮೋಘ ಅರ್ಧಶತಕದ ನೆರವಿನಿಂದ ಗುಜರಾತ್ ಟೈಟಾನ್ಸ್ 20 ಓವರ್‌’ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 135 ರನ್ ಗಳಿಸಿತು. ಈ ಗರಿ ಬೆನ್ನತ್ತಿದ ಲಕ್ನೋ ತಂಡ, ನಾಯಕ ಕೆಎಲ್ ರಾಹುಲ್ (68) ಅವರ ಅದ್ಭುತ ಇನ್ನಿಂಗ್ಸ್‌ನ ಹೊರತಾಗಿಯೂ 7 ವಿಕೆಟ್‌’ಗೆ 128 ರನ್ ಗಳಿಸಲಷ್ಟೇ ಶಕ್ತವಾಯಿತು. ಗುಜರಾತ್ ತಂಡದ ಪರ ವೇಗಿ ಮೋಹಿತ್ ಶರ್ಮಾ ಇನಿಂಗ್ಸ್‌’ನ ಕೊನೆಯ ಓವರ್’ನಲ್ಲಿ ಬೌಲ್ ಮಾಡಿದರು.


ಭಾರತ ತಂಡದಿಂದ ಹೊರಗುಳಿಯುತ್ತಿರುವ ವೇಗಿ ಮೋಹಿತ್ ಶರ್ಮಾ ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದರು. ಇನಿಂಗ್ಸ್‌’ನ ಕೊನೆಯ ಓವರ್‌'ಗೆ ನಾಯಕ ಹಾರ್ದಿಕ್ ಪಾಂಡ್ಯ ಮೋಹಿತ್ ಅವರಿಗೆ ಚೆಂಡನ್ನು ನೀಡಿದರು. ಈ ಓವರ್‌’ನಲ್ಲಿ ಲಕ್ನೋ ಗೆಲುವಿಗೆ 12 ರನ್‌’ಗಳ ಅಗತ್ಯವಿತ್ತು. ಮೊದಲ ಎಸೆತದಲ್ಲಿ ರಾಹುಲ್ 2 ರನ್ ಪೂರೈಸಿದರು. ಮುಂದಿನ ಎಸೆತದಲ್ಲಿ ಸಿಕ್ಸ್ ಬಾರಿಸಲು ಹೋಗಿ, ಡೀಪ್ ಸ್ಕ್ವೇರ್ ಲೆಗ್‌’ನಲ್ಲಿದ್ದ ಜಯಂತ್ ಯಾದವ್ ಅವರಿಗೆ ಕ್ಯಾಚ್ ನೀಡಿದರು. ಇವರ ಬಳಿಕ ಮಾರ್ಕಸ್ ಸ್ಟೊಯಿನಿಸ್ ಕ್ಯಾಚಿತ್ತು ಔಟಾದರು. ಆಯುಷ್ ಬಡೋನಿ ಮತ್ತು ದೀಪಕ್ ಹೂಡಾ ಕೂಡ ರನೌಟ್ ಆದರು. ಈ ಮೂಲಕ ಓವರ್‌’ನಲ್ಲಿ 4 ವಿಕೆಟ್‌’ಗಳು ಪತನಗೊಂಡು ಕೇವಲ 2 ರನ್ ಗಳಿಸಲಷ್ಟೇ ಸಾಧ್ಯವಾಯಿತು.


ಮೋಹಿತ್ ಶರ್ಮಾ 2015 ರಲ್ಲಿ ತಮ್ಮ ಕೊನೆಯ ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. 2013 ರಲ್ಲಿ ತಮ್ಮ ಏಕದಿನ ಚೊಚ್ಚಲ ಪಂದ್ಯವನ್ನು ಆಡಿದ್ದರು. ಅಕ್ಟೋಬರ್ 2015ರಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ODIನಲ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಮೋಹಿತ್ ತಮ್ಮ ವೃತ್ತಿಜೀವನದಲ್ಲಿ 26 ODI ಮತ್ತು 8 T20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಏಕದಿನದಲ್ಲಿ 31 ವಿಕೆಟ್‌’ಗಳನ್ನು ಮತ್ತು ಟಿ20 ಅಂತರರಾಷ್ಟ್ರೀಯ ಸ್ವರೂಪದಲ್ಲಿ 6 ವಿಕೆಟ್‌’ಗಳನ್ನು ಕಬಳಿಸಿದ್ದಾರೆ.


ಇದನ್ನೂ ಓದಿ: Team India: ಯುಜ್ವೇಂದ್ರ ಚಹಾಲ್-ಧನಶ್ರೀ ಸಂಬಂಧದಲ್ಲಿ ಬಿರುಕು? ರಾಶಿ ರಾಶಿ ಪ್ರಶ್ನೆ ಹುಟ್ಟುಹಾಕಿತು ಆ ‘ಪೋಸ್ಟ್’


ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಟೈಟಾನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ನಾಯಕ ಪಾಂಡ್ಯ (66) ಮತ್ತು ವಿಕೆಟ್‌ ಕೀಪರ್ ವೃದ್ಧಿಮಾನ್ ಸಹಾ (47) ಅವರ ಅರ್ಧಶತಕದ ಹೊರತಾಗಿಯೂ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌’ಗೆ 135 ರನ್ ಗಳಿಸಲಷ್ಟೇ ಶಕ್ತವಾಯಿತು. ಲಖನೌ ಪರ ಕೃನಾಲ್ ಪಾಂಡ್ಯ ಮತ್ತು ಮಾರ್ಕಸ್ ಸ್ಟೊಯಿನಿಸ್ ತಲಾ 2 ವಿಕೆಟ್ ಪಡೆದರು. ನವೀನ್ ಉಲ್ ಹಕ್ ಮತ್ತು ಅಮಿತ್ ಮಿಶ್ರಾ ಒಂದೊಂದು ವಿಕೆಟ್ ಪಡೆದರು. ಪಾಂಡ್ಯ ಲಕ್ನೋ ನಾಯಕ ಕೆಎಲ್ ರಾಹುಲ್ 61 ಎಸೆತಗಳಲ್ಲಿ 8 ಬೌಂಡರಿಗಳ ನೆರವಿನಿಂದ 68 ರನ್ ಗಳಿಸಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ