Virat Kohli: ವಿರಾಟ್’ಗೆ ಈ ತಿಂಡಿ ಅಂದ್ರೆ ಪಂಚಪ್ರಾಣ! ಇದನ್ನು ಸವಿಯಲೆಂದೇ ಈ ಸ್ಥಳಕ್ಕೆ ಓಡೋಡಿ ಬರ್ತಾರೆ ಕಿಂಗ್ ಕೊಹ್ಲಿ

Virat Kohli favourite food: ದೆಹಲಿಯ ತಿಲಕ್ ನಗರದಲ್ಲಿರುವ ರಾಮ್ ಅವರ ಹೋಟೇಲ್, ರಾಜಧಾನಿಯ ಪ್ರಸಿದ್ಧ ಚೋಲೆ ಭಟೂರೆ ತಯಾರಿಸುವ ಹೊಟೇಲ್’ಗಳಲ್ಲಿ ಒಂದಾಗಿದೆ. ಅಲ್ಲಿ ತಯಾರಿಸುವ ಚೋಲೆ ಭಟೂರೆಯ ಸ್ವಾದಕ್ಕೆ ಭಾರತೀಯ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಕೂಡ ಫಿದಾ ಆಗಿದ್ದಾರೆ. ಈ ಹಿಂದೆ ಕೊಹ್ಲಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

Written by - Bhavishya Shetty | Last Updated : Apr 21, 2023, 02:13 AM IST
    • ವಿರಾಟ್‌’ಗೆ ಈ ಆಹಾರವೆಂದರೆ ತುಂಬಾ ಇಷ್ಟ. ಅದುವೇ ಚೋಲೆ ಭಟೂರೆ.
    • ಇಂದು ನಾವು ನಿಮಗೆ ದೆಹಲಿಯಲ್ಲಿರುವ ಆ ಸ್ಥಳದ ಬಗ್ಗೆ ಮಾಹಿತಿ ನೀಡಲಿದ್ದೇವೆ.
    • ಚೋಲೆ ಭಟೂರೆಯ ಸ್ವಾದಕ್ಕೆ ಭಾರತೀಯ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಕೂಡ ಫಿದಾ ಆಗಿದ್ದಾರೆ
Virat Kohli: ವಿರಾಟ್’ಗೆ ಈ ತಿಂಡಿ ಅಂದ್ರೆ ಪಂಚಪ್ರಾಣ! ಇದನ್ನು ಸವಿಯಲೆಂದೇ ಈ ಸ್ಥಳಕ್ಕೆ ಓಡೋಡಿ ಬರ್ತಾರೆ ಕಿಂಗ್ ಕೊಹ್ಲಿ title=
Virat Kohli Favorite Food

Virat Kohli favourite food: ಅತ್ಯುತ್ತಮ ಬ್ಯಾಟಿಂಗ್‌’ಗೆ ಹೆಸರಾದ ವಿಶ್ವದ ಸ್ಟಾರ್ ಬ್ಯಾಟ್ಸ್‌ಮನ್‌ ವಿರಾಟ್ ಕೊಹ್ಲಿ ಬಗ್ಗೆ ನಾವಿಂದು ಮಾಹಿತಿ ನೀಡಲಿದ್ದೇವೆ. ಸದ್ಯ ಅವರು ಇಂಡಿಯನ್ ಪ್ರೀಮಿಯರ್ ಲೀಗ್’ನಲ್ಲಿ RCB ಪರ ಆಡುತ್ತಿದ್ದಾರೆ. ವಿರಾಟ್‌’ಗೆ ಈ ಆಹಾರವೆಂದರೆ ತುಂಬಾ ಇಷ್ಟ. ಅದುವೇ ಚೋಲೆ ಭಟೂರೆ. ಇಂದು ನಾವು ನಿಮಗೆ ದೆಹಲಿಯಲ್ಲಿರುವ ಆ ಸ್ಥಳದ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಇದನ್ನೂ ಓದಿ: Health Tips: ಮಲಗುವ ಮುನ್ನ ಈ ಮಸಾಲೆ ವಸ್ತು ತಿಂದರೆ ಒಂದೇ ವಾರದಲ್ಲಿ 4 ಕೆಜಿ ತೂಕ ಇಳಿಸಬಹುದು!

ದೆಹಲಿಯ ತಿಲಕ್ ನಗರದಲ್ಲಿರುವ ರಾಮ್ ಅವರ ಹೋಟೇಲ್, ರಾಜಧಾನಿಯ ಪ್ರಸಿದ್ಧ ಚೋಲೆ ಭಟೂರೆ ತಯಾರಿಸುವ ಹೊಟೇಲ್’ಗಳಲ್ಲಿ ಒಂದಾಗಿದೆ. ಅಲ್ಲಿ ತಯಾರಿಸುವ ಚೋಲೆ ಭಟೂರೆಯ ಸ್ವಾದಕ್ಕೆ ಭಾರತೀಯ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಕೂಡ ಫಿದಾ ಆಗಿದ್ದಾರೆ. ಈ ಹಿಂದೆ ಕೊಹ್ಲಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ರಾಮ್ ಅವರು ತಯಾರಿಸಿದ ಚೋಲೆ ಭಟೂರೆ ತಿಂದಾಗ ಸಿಗುವ ಖುಷಿ, ಬೇರೆ ಯಾವುದರಿಂದಲೂ ಸಿಗಲ್ಲ ಎಂದು ಆ ವಿಡಿಯೋದಲ್ಲಿ ಹೇಳಿದ್ದರು ಕೊಹ್ಲಿ. ಇನ್ನು ಆ ಹೊಟೇಲ್ ಇರೋದು ದೆಹಲಿಯ ಜೈಲ್ ರಸ್ತೆಯ ತಿಲಕ್ ನಗರದಲ್ಲಿ.

ಇಲ್ಲಿಯವರೆಗೆ ಈ ಐಪಿಎಲ್ ಸೀಸನ್ ವಿರಾಟ್ ಕೊಹ್ಲಿಗೆ ಅದ್ಭುತವಾಗಿದೆ. ಪಂಜಾಬ್ ಕಿಂಗ್ಸ್ ವಿರುದ್ಧ ಐಪಿಎಲ್ 2023 ರ ನಾಲ್ಕನೇ ಅರ್ಧಶತಕವನ್ನು ಬಾರಿಸಿದರು. ವಿರಾಟ್ ಇದುವರೆಗೆ ಆಡಿದ 6 ಪಂದ್ಯಗಳಲ್ಲಿ ವ141.94 ಸ್ಟ್ರೈಕ್ ರೇಟ್‌ನಲ್ಲಿ 264 ರನ್ ಗಳಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ 82 ರನ್. ವಿರಾಟ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಇದುವರೆಗೆ 5 ಶತಕಗಳನ್ನು ಬಾರಿಸಿದ್ದಾರೆ.

ಇದನ್ನೂ ಓದಿ: ಹರಿದ ಚಡ್ಡಿ ವರ್ಷಪೂರ್ತಿ ಹಾಕೋರ ಗಮನಕ್ಕೆ.. ಒಳಉಡುಪುಗಳಿಗೂ ಇದೆ Expire Date! ಹೀಗೆ ತಿಳಿಯಿರಿ

ಪಂಜಾಬ್ ಕಿಂಗ್ಸ್ ವಿರುದ್ಧದ 27ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದರು. ಬ್ಯಾಟಿಂಗ್‌’ನಲ್ಲಿ ವಿರಾಟ್ 30 ರನ್ ಗಳಿಸಿದ ತಕ್ಷಣ, ಐಪಿಎಲ್ ಇತಿಹಾಸದಲ್ಲಿ 100 ಬಾರಿ 30 ಪ್ಲಸ್ ಸ್ಕೋರ್ ಗಳಿಸಿದ ಏಕೈಕ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಐಪಿಎಲ್‌ನಲ್ಲಿ ಇದುವರೆಗೆ 5 ಶತಕ, 48 ಅರ್ಧ ಶತಕ ಮತ್ತು 30 ರನ್‌’ಗಳನ್ನು 47 ಬಾರಿ ಗಳಿಸಿದ್ದಾರೆ. ವಿರಾಟ್ ಕೊಹ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಬ್ಯಾಟಿಂಗ್ ಮಾಡುವಾಗ 47 ಎಸೆತಗಳಲ್ಲಿ 59 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 5 ಬೌಂಡರಿ ಮತ್ತು 1 ಹಿಟ್ ಸೇರಿತ್ತು. ಈ ಪಂದ್ಯದಲ್ಲಿ ವಿರಾಟ್ ಮೂರನೇ ಫೋರ್ ಹೊಡೆದ ತಕ್ಷಣ. ಐಪಿಎಲ್‌’ನಲ್ಲಿ 600 ಬೌಂಡರಿಗಳನ್ನು ಬಾರಿಸಿದ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News