IPL 2023: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಈ ವರ್ಷ IPL 2023 ಪ್ರಶಸ್ತಿಯನ್ನು ಗೆಲ್ಲುವ ಉತ್ತಮ ಅವಕಾಶಗಳನ್ನು ಹೊಂದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಸ್ಫೋಟಕ ಬ್ಯಾಟ್ಸ್‌ಮನ್ ಒಬ್ಬನನ್ನು ಹೊಂದಿದ್ದು, ಆತ ಈ ವರ್ಷ ಐಪಿಎಲ್ ಪ್ರಶಸ್ತಿಯನ್ನು ಗೆಲ್ಲಬಹುದು. ಈ ಆಟಗಾರನ ಸ್ಫೋಟಕ ಬ್ಯಾಟಿಂಗ್’ಗೆ ಮೈದಾನದಲ್ಲಿರುವ ಬೌಲರ್’ಗಳೂ ನಡುಗುತ್ತಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Vastu Plants: ಅದೃಷ್ಟವನ್ನು ಆಕರ್ಷಿಸುವ ಈ ಸಸ್ಯವನ್ನು ಮನೆಯ ಈ ಭಾಗದಲ್ಲಿ ನೆಡಿ: ಚಮತ್ಕಾರ ಆಮೇಲೆ ನೋಡಿ


ಈ ಆಟಗಾರ ಸೋಲುವ ಪಂದ್ಯವನ್ನೂ ಸಹ ಗೆದ್ದುಕೊಟ್ಟಿದ್ದಾನೆ. ಒಟ್ಟಿನಲ್ಲಿ ಆರ್’ಸಿಬಿಗೆ ಇದೀಗ ಮ್ಯಾಚ್ ವಿನ್ನರ್ ಸಿಕ್ಕಿದ್ದು, ಈ ಸಲ ಕಪ್ ನಮ್ದೇ ಅನ್ನೋದಕ್ಕೆ ಸಖತ್ ಪುರಾವೆ ಸಿಕ್ಕಂತಾಗಿದೆ.


ರಾಜಸ್ಥಾನ್ ರಾಯಲ್ಸ್ ವಿರುದ್ಧ 44 ಎಸೆತಗಳಲ್ಲಿ 77 ರನ್ ಗಳಿಸಿದ ಮ್ಯಾಚ್ ವಿನ್ನಿಂಗ್ ಆಟಗಾರ ಬೇರಾರೂ ಅಲ್ಲ ಅವರೇ ಗ್ಲೆನ್ ಮ್ಯಾಕ್ಸ್‌ವೆಲ್. ಮ್ಯಾಕ್ಸ್‌ವೆಲ್ ತಮ್ಮ ಇನ್ನಿಂಗ್ಸ್‌’ನಲ್ಲಿ ಆರು ಬೌಂಡರಿ ಮತ್ತು ನಾಲ್ಕು ಸಿಕ್ಸರ್‌’ಗಳನ್ನು ಬಾರಿಸಿದ್ದಲ್ಲದೆ, ಫಾಫ್ ಡು ಪ್ಲೆಸಿಸ್ (39 ಎಸೆತಗಳಲ್ಲಿ 62 ರನ್) ಅವರೊಂದಿಗೆ ಮೂರನೇ ವಿಕೆಟ್‌’ಗೆ 127 ರನ್ ಜೊತೆಯಾಟವನ್ನು ಹಂಚಿಕೊಳ್ಳುವ ಮೂಲಕ ಗೆಲುವಿಗೆ ಅಡಿಪಾಯ ಹಾಕಿದರು. ಆರ್‌ಸಿಬಿ 9 ವಿಕೆಟ್‌ ನಷ್ಟಕ್ಕೆ 189 ರನ್‌ ಕಲೆ ಹಾಕಿತ್ತು. ಗೆಲುವಿನ ಗುರಿ ತಲುಪಲು ಮುಂದಾದ ರಾಜಸ್ಥಾನ ತಂಡವು ಆರು ವಿಕೆಟ್‌ಗೆ 182 ರನ್ ಗಳಿಸಲಷ್ಟೇ ಶಕ್ತವಾಯಿತು.


4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ನನಗೆ ಯಾವುದೇ ತೊಂದರೆ ಇಲ್ಲ ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ. ಆಸ್ಟ್ರೇಲಿಯಾದ ಆರಂಭಿಕ ವಿಕೆಟ್‌’ಗಳನ್ನು ಕಳೆದುಕೊಂಡ ನಂತರ ನಾನು ಈ ಸಂಖ್ಯೆಯಲ್ಲಿ ಬ್ಯಾಟ್ ಮಾಡಿದ್ದೇನೆ. ಆರ್‌’ಸಿಬಿ ನನಗೆ ಮೈದಾನಕ್ಕಿಳಿದು ಬ್ಯಾಟಿಂಗ್ ಮಾಡುವ ಸ್ವಾತಂತ್ರ್ಯ ನೀಡಿದೆ ಎಂದ ಮ್ಯಾಕ್ಸ್‌ವೆಲ್, 'ನಾನು ಉತ್ತಮ ಫಾರ್ಮ್‌ನೊಂದಿಗೆ ಇಲ್ಲಿಗೆ ಬಂದಿದ್ದೇನೆ. ತಂಡವು ನನ್ನ ಮೇಲೆ ನಂಬಿಕೆಯನ್ನು ತೋರಿಸಿದೆ ಎಂದು ಹೇಳಿದ್ದಾರೆ.  


ಇದನ್ನೂ ಓದಿ: Astro Tips: ಮಹಿಳೆಯರು ಚಿನ್ನದ ಕಾಲುಂಗುರವನ್ನು ಏಕೆ ಧರಿಸುವುದಿಲ್ಲ? ವೈಜ್ಞಾನಿಕ ಕಾರಣ ತಿಳಿಯಿರಿ


ಮ್ಯಾಕ್ಸ್‌ವೆಲ್ ಮತ್ತು ಡು ಪ್ಲೆಸಿಸ್ ಹೊರತಾಗಿ, ಆರ್‌’ಸಿಬಿಯ ಹಂಗಾಮಿ ನಾಯಕ ವಿರಾಟ್ ಕೊಹ್ಲಿ ಕೂಡ ವೇಗದ ಬೌಲರ್‌ಗಳಾದ ಮೊಹಮ್ಮದ್ ಸಿರಾಜ್ ಮತ್ತು ಹರ್ಷಲ್ ಪಟೇಲ್ ಅವರನ್ನು ಹೊಗಳಿದ್ದಾರೆ. “ಟಾಸ್ ಸಮಯದಲ್ಲಿ, ಪಿಚ್ ಒಣಗಿದ್ದರಿಂದ ನಾವು ಮೊದಲು ಬ್ಯಾಟಿಂಗ್ ಮಾಡಬೇಕೆ ಅಥವಾ ಬೇಡವೇ ಎಂದು ಯೋಚಿಸುತ್ತಿದ್ದೆವು. ಆದರೆ ನಂತರ ಫ್ಲಡ್‌ಲೈಟ್‌’ಗಳಲ್ಲಿ, ಕೊನೆಯ 10 ಓವರ್‌’ಗಳಲ್ಲಿ ಬ್ಯಾಟಿಂಗ್ ಕಷ್ಟವಾಗುತ್ತದೆ ಎಂದು ನಮಗೆ ತಿಳಿದಿತ್ತು. ಮ್ಯಾಕ್ಸ್‌ವೆಲ್ ಮತ್ತು ಡು ಪ್ಲೆಸಿಸ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಈ ಪಿಚ್‌’ನಲ್ಲಿ 160 ರನ್‌’ಗಳು ಸಾಕು ಎಂದು ನಾವು ಭಾವಿಸಿದ್ದೇವೆ ಆದರೆ ಅವರು ತಂಡವನ್ನು 190 ರ ಸಮೀಪಕ್ಕೆ ಕೊಂಡೊಯ್ದರು” ಎಂದು ಹೇಳಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.