ಹೊರ ಬಿತ್ತು Maruti Jimny ಬೆಲೆ ! ಕೈಗೆಟಕುವ ದರದಲ್ಲಿ ಸೂಪರ್ ಸ್ಪೆಷಲ್ ಕಾರ್

Maruti Jimny Price Leak:ಮುಂಬರುವ ಮಾರುತಿ ಸುಜುಕಿ ಜಿಮ್ನಿ 5-ಡೋರ್ SUVಯನ್ನು - ಝೀಟಾ ಮತ್ತು ಆಲ್ಫಾ ಎಂಬ ಎರಡು ಟ್ರಿಮ್ ಹಂತಗಳಲ್ಲಿ  ಬಿಡುಗಡೆ ಮಾಡಲಾಗುವುದು. ಇದು ಒಟ್ಟು ನಾಲ್ಕು ರೂಪಾಂತರಗಳನ್ನು ಹೊಂದಿರುತ್ತದೆ.

Written by - Ranjitha R K | Last Updated : Apr 24, 2023, 12:55 PM IST
  • ಮಾರುತಿ ಸುಜುಕಿ ಜಿಮ್ನಿಯ ಮಾರುಕಟ್ಟೆ ಪ್ರವೇಶಕ್ಕೆ ಕ್ಷಣಗಣನೆ
  • ಇದು ಭಾರತದಲ್ಲಿ ಬಹು ನಿರೀಕ್ಷಿತ SUV ಗಳಲ್ಲಿ ಒಂದಾಗಿದೆ.
  • ಮಾರುತಿ ಜಿಮ್ನಿಯ ಬೆಲೆ ಡೀಲರ್ ಇನ್‌ವಾಯ್ಸ್ ಮೂಲಕ ಸೋರಿಕೆ
ಹೊರ ಬಿತ್ತು Maruti Jimny ಬೆಲೆ ! ಕೈಗೆಟಕುವ ದರದಲ್ಲಿ ಸೂಪರ್ ಸ್ಪೆಷಲ್ ಕಾರ್   title=

Maruti Jimny Price Leak : ಮಾರುತಿ ಸುಜುಕಿ ಜಿಮ್ನಿಯ ಮಾರುಕಟ್ಟೆ ಪ್ರವೇಶವನ್ನು ಬಹಳ ಸಮಯದಿಂದ ಎದುರು ನೋಡಲಾಗುತ್ತಿದೆ.  ಇದು ಭಾರತದಲ್ಲಿ ಬಹು ನಿರೀಕ್ಷಿತ SUV ಗಳಲ್ಲಿ ಒಂದಾಗಿದೆ. ಜಿಮ್ನಿಯ 5- ಡೋರ್ ವರ್ಶನ್ ಅನ್ನು ಆಟೋ ಎಕ್ಸ್‌ಪೋ  ೨೦೨೩ರಲ್ಲಿ ಪ್ರದರ್ಶಿಸಲಾಯಿತು. ಆದರೆ ಆ ಸಂದರ್ಭದಲ್ಲಿ ಈ ಕಾರಿನ ಬೆಲೆಯ ಬಗ್ಗೆ ಯಾವುದೇ ರೀತಿಯ ಮಾಹಿತಿಯನ್ನು ಹೊರಹಾಕಿರಲಿಲ್ಲ.   ಆದರೆ ಇದೀಗ ಕಾರಿನ ಅಧಿಕೃತ ಬಿಡುಗಡೆಗೂ ಮುನ್ನ ಮಾರುತಿ ಜಿಮ್ನಿಯ ಬೆಲೆ ಡೀಲರ್ ಇನ್‌ವಾಯ್ಸ್ ಮೂಲಕ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. 

ಮುಂಬರುವ ಮಾರುತಿ ಸುಜುಕಿ ಜಿಮ್ನಿ 5-ಡೋರ್ SUVಯನ್ನು ಝೀಟಾ ಮತ್ತು ಆಲ್ಫಾ ಎಂಬ ಎರಡು ಟ್ರಿಮ್ ಹಂತಗಳಲ್ಲಿ  ಬಿಡುಗಡೆ ಮಾಡಲಾಗುವುದು. ಇದು ಒಟ್ಟು ನಾಲ್ಕು ರೂಪಾಂತರಗಳನ್ನು ಹೊಂದಿರುತ್ತದೆ. ಇಂಟರ್ನೆಟ್‌ನಲ್ಲಿ ಸೋರಿಕೆಯಾದ ಡೀಲರ್ ಇನ್‌ವಾಯ್ಸ್‌ಗಳ ಪ್ರಕಾರ, ಮಾರುತಿ ಸುಜುಕಿ ಜಿಮ್ನಿಯ  ಬೇಸ್ ಝೀಟಾ ಎಂಟಿ ರೂಪಾಂತರಕ್ಕೆ 9.99 ಲಕ್ಷ ರೂಪಾಯಿಗಳಾಗಿದ್ದರೆ, ಟಾಪ್-ಸ್ಪೆಕ್ ಆಲ್ಫಾ ಎಟಿ ರೂಪಾಂತರಕ್ಕೆ 13.99 ಲಕ್ಷ ರೂಪಾಯಿ ವೆಚ್ಚವಾಗಲಿದೆ.

ಇದನ್ನೂ ಓದಿ : 1 ವರ್ಷದಲ್ಲಿ 21 ಲಕ್ಷಕ್ಕೂ ಹೆಚ್ಚು ಮಾರಾಟ; ಅಮೋಘ ವೈಶಿಷ್ಟ್ಯವುಳ್ಳ ಸೂಪರ್-ಡೂಪರ್ ಸ್ಕೂಟಿ! ಬೆಲೆ ಕೂಡ ಭಾರೀ ಅಗ್ಗ

ಮಾರುತಿ ಜಿಮ್ನಿ ಬೆಲೆ :
-- ಝೀಟಾ ಎಂಟಿ ರೂಪಾಂತರ:  9.99 ಲಕ್ಷ (ಎಕ್ಸ್-ಶೋ ರೂಂ) ಮತ್ತು ಸುಮಾರು 11.40 ಲಕ್ಷ ರೂ  (ಆನ್-ರೋಡ್)
-- ಝೀಟಾ ಎಟಿ ರೂಪಾಂತರ: 11.59 ಲಕ್ಷ (ಎಕ್ಸ್ ಶೋ ರೂಂ) ಮತ್ತು  13.45 ಲಕ್ಷ (ಆನ್-ರೋಡ್)
-- ಆಲ್ಫಾ ಎಂಟಿ ರೂಪಾಂತರ:  12.29 ಲಕ್ಷ (ಎಕ್ಸ್-ಶೋ ರೂಂ) ಮತ್ತು  13.95 ಲಕ್ಷ (ಆನ್-ರೋಡ್)
-- ಆಲ್ಫಾ ಎಟಿ ರೂಪಾಂತರ:  13.99 ಲಕ್ಷ (ಎಕ್ಸ್ ಶೋ ರೂಂ) ಮತ್ತು  15.98 ಲಕ್ಷ ರೂ( ಆನ್-ರೋಡ್)

ಮಾರುತಿ ಸುಜುಕಿ ಜಿಮ್ನಿಗೆ ಪವರ್ ನೀಡಲು 1.5-ಲೀಟರ್ K-ಸರಣಿಯ  ನ್ಯಾಚ್ಯುರಲ್ ಆಸ್ಪಿರೆಟೆಡ್ ಪೆಟ್ರೋಲ್ ಎಂಜಿನ್ ಅನ್ನು ಬಳಸಲಾಗಿದೆ. ಈ ಎಂಜಿನ್ 103 Bhp ಮತ್ತು 134 Nm ಪೀಕ್ ಟಾರ್ಕ್ ಅನ್ನು  ಜನರೆಟ್ ಮ್,ಮಾಡುತ್ತದೆ.   5-ಸ್ಪೀಡ್ ಮ್ಯಾನುವಲ್ ಗೇರ್‌ಬಾಕ್ಸ್ ಮತ್ತು 4-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಟ್ರಾನ್ಸ್‌ಮಿಷನ್ ಆಯ್ಕೆಗಳೊಂದಿಗೆ ಈ ಕಾರು ಬಿಡುಗಡೆಯಾಗಲಿದೆ. ಜಿಮ್ನಿ ಆಲ್‌ಗ್ರಿಪ್ ಪ್ರೊ 4X4 ಸಿಸ್ಟಮ್ ಅನ್ನು ಉತ್ತಮ ಆಫ್-ರೋಡ್ ಸಾಮರ್ಥ್ಯಗಳಿಗಾಗಿ  ಸಿಸ್ಟಮ್ ಸ್ಟ್ಯಾಂಡರ್ಡ್ ರೂಪದೊಂದಿಗೆ ಬರುತ್ತದೆ. 

ಇದನ್ನೂ ಓದಿ : Cars: ಜಗತ್ತಿನ ಅಗ್ಗದ ಬೆಲೆಯ ಕಾರು ದೇಶಕ್ಕೆ ಎಂಟ್ರಿ! 26km ಮೈಲೇಜ್ ಜೊತೆ ಹಿಂದೆಂದೂ ಕಂಡಿರದ ಅದ್ಭುತ ವೈಶಿಷ್ಟ್ಯ!

ಹೊಸ ಜಿಮ್ನಿ 5-ಡೋರ್ SUV ಆಂಡ್ರಾಯ್ಡ್ ಆಟೋ ಮತ್ತು Apple CarPlay, Arkamys ಸ್ಪೀಕರ್‌,  9.0-ಇಂಚಿನ ಸ್ಮಾರ್ಟ್‌ಪ್ಲೇ ಪ್ರೊ + ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆರು ಏರ್‌ಬ್ಯಾಗ್‌ಗಳು, EBD ಜೊತೆಗೆ ABS, ESP, ಹಿಲ್ ಹೋಲ್ಡ್ ಕಂಟ್ರೋಲ್, ಹಿಲ್ ಡಿಸೆಂಟ್ ಕಂಟ್ರೋಲ್, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು ರಿವರ್ಸ್ ಪಾರ್ಕಿಂಗ್ ಸೆನ್ಸಾರ್‌ನಂತಹ ಹಲವು ವೈಶಿಷ್ಟ್ಯಗಳನ್ನು ಹೊಂದಿರಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News