Team India: ಐಪಿಎಲ್ 2023ರ 16 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮುಂಬೈ ತಂಡದ ಬೌಲರ್‌’ಗಳು ಅತ್ಯುತ್ತಮ ಬೌಲಿಂಗ್ ಪ್ರದರ್ಶಿಸಿದರು. 11 ವರ್ಷಗಳಿಂದ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಕ್ರಿಕೆಟಿಗರೊಬ್ಬರು ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದರು. ಐಪಿಎಲ್‌’ನ ಈ ಋತುವಿನಲ್ಲಿ ಟೀಮ್ ಇಂಡಿಯಾದಿಂದ ಹೊರಗುಳಿದ ಮತ್ತು ಮುಂಬೈ ಇಂಡಿಯನ್ಸ್‌ಗಾಗಿ ಆಡುತ್ತಿರುವ ಈ ಆಟಗಾರ ತಂಡಕ್ಕಾಗಿ ಅತಿ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IPL 2023: ತನ್ನ ತಂಡಕ್ಕೇ ಹೊರೆ ಎನಿಸಿದ ಈ ಕಿಲಾಡಿ ಆಟಗಾರ ಟೀಂ ಇಂಡಿಯಾದಿಂದ ಔಟ್! IPL ವೃತ್ತಿಜೀವನವೂ ಖತಂ?


ಲೆಗ್ ಸ್ಪಿನ್ನರ್ ಪಿಯೂಷ್ ಚಾವ್ಲಾ ಈ ಬಾರಿಯ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುತ್ತಿದ್ದು, ದೆಹಲಿ ಬ್ಯಾಟ್ಸ್‌ಮನ್‌ಗಳನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ನ ಮೂವರು ಬ್ಯಾಟ್ಸ್ ಮನ್ ಗಳಿಗೆ ಚಾವ್ಲಾ ಪೆವಿಲಿಯನ್ ಹಾದಿ ತೋರಿಸಿದರು. ಮುಂದಿನ ಪಂದ್ಯಗಳಲ್ಲೂ ಇದೇ ರೀತಿ ಪ್ರದರ್ಶನ ನೀಡಿದರೆ ತಂಡಕ್ಕೆ ಮ್ಯಾಚ್ ವಿನ್ನರ್ ಎಂದು ಸಾಬೀತುಪಡಿಸಬಹುದು. 2012 ರಿಂದ ಟೀಮ್ ಇಂಡಿಯಾದಲ್ಲಿ ಪಿಯೂಷ್ ಚಾವ್ಲಾಗೆ ಯಾವುದೇ ಅವಕಾಶ ಸಿಕ್ಕಿಲ್ಲ.


ಪಿಯೂಷ್ ಚಾವ್ಲಾ 2012ರಲ್ಲಿ ಇಂಗ್ಲೆಂಡ್ ವಿರುದ್ಧ ಟೀಂ ಇಂಡಿಯಾ ಪರ ಕೊನೆಯ ಟಿ20 ಪಂದ್ಯ ಆಡಿದ್ದರು. ಆ ಬಳಿಕ ಅವರಿಗೆ ಟೀಂ ಇಂಡಿಯಾದ ಯಾವುದೇ ಫಾರ್ಮೆಟ್‌ನಲ್ಲಿ ಅವಕಾಶ ಸಿಕ್ಕಿಲ್ಲ. ಚಾವ್ಲಾ ಟೀಂ ಇಂಡಿಯಾ 7 T20 ಪಂದ್ಯಗಳನ್ನು ಆಡಿದ್ದರೆ, ಅದರಲ್ಲಿ ಅವರು 4 ವಿಕೆಟ್’ಗಳನ್ನು ಪಡೆದಿದ್ದಾರೆ, 25 ODIಗಳಲ್ಲಿ  32 ವಿಕೆಟ್ಗಳನ್ನು ಕಬಳಿಸಿದ್ದಾರೆ. ಅಲ್ಲದೆ 3 ಟೆಸ್ಟ್ ಪಂದ್ಯಗಳಲ್ಲಿ 7 ವಿಕೆಟ್ ಪಡೆದಿದ್ದಾರೆ.


ಇದನ್ನೂ ಓದಿ: Team India: ಈ ಸ್ಟಾರ್ ಆಟಗಾರನಿಗೆ ಟೀಂ ಇಂಡಿಯಾದ ಬಾಗಿಲು ಬಂದ್! IPLನಲ್ಲೂ ಹೊರಬೀಳುವ ಸಾಧ್ಯತೆ


ಐಪಿಎಲ್ ವೃತ್ತಿಜೀವನ ಹೀಗಿದೆ:


ಪಿಯೂಷ್ ಚಾವ್ಲಾ ಅವರ ಐಪಿಎಲ್ ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೆ, ಅವರು ಈ ಪಂದ್ಯಾವಳಿಯಲ್ಲಿ ಸಾಕಷ್ಟು ಅನುಭವವನ್ನು ಹೊಂದಿದ್ದಾರೆ. ಚಾವ್ಲಾ ಐಪಿಎಲ್‌’ನಲ್ಲಿ ಇದುವರೆಗೆ 168 ಪಂದ್ಯಗಳನ್ನು ಆಡಿದ್ದು, ಇದರಲ್ಲಿ 161 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರ ಅತ್ಯುತ್ತಮ ಬೌಲಿಂಗ್ ಸ್ಪೆಲ್ ಎಂದರೆ 17 ರನ್‌’ಗಳಿಗೆ 4 ವಿಕೆಟ್ ಕಬಳಿಸಿರುವುದು. ಈ ಬಾರಿ ಐಪಿಎಲ್ 2023 ರಲ್ಲಿ ಮುಂಬೈ ಇಂಡಿಯನ್ಸ್ ತಂಡವು ಪಿಯೂಷ್ ಚಾವ್ಲಾ ಅವರನ್ನು 50 ಲಕ್ಷ ರೂ.ಗಳ ಮೂಲ ಬೆಲೆಗೆ ಖರೀದಿಸಿತು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.