Team Indiaಗೆ ಸಿಕ್ಕಾಯ್ತು ಯುವರಾಜ್ ಸಿಂಗ್ ತರಹದ ಬ್ಯಾಟ್ಸ್’ಮನ್! ಸಿಕ್ಸರ್ ಕಿಂಗ್ ರೀತಿಯೇ ಸಖತ್ ಸ್ಟೈಲಿಸ್ಟ್ ಈತ!
Team India: ಐಪಿಎಲ್ 2023 ರಲ್ಲಿ ಈ ಮಾರಕ ಬ್ಯಾಟ್ಸ್’ಮನ್’ನ ಸ್ಫೋಟಕ ಬ್ಯಾಟಿಂಗ್ ನೋಡಿ, ಬಿಸಿಸಿಐ ಕಾರ್ಯದರ್ಶಿ ಜೈ ಶಾ ಕೂಡ ಸಂತೋಷಪಟ್ಟಿದ್ದಾರೆ. ಈ ಬಳಿಕ ಟ್ವೀಟ್ ಮಾಡಿದ ಅವರು ಯುವರಾಜ್ ಸಿಂಗ್ ಅವರಂತಹ ಡ್ಯಾಶಿಂಗ್ ಬ್ಯಾಟ್ಸ್ ಮನ್ ಟೀಂ ಇಂಡಿಯಾಗೆ ಎಂಟ್ರಿ ಕೊಡುವ ಸೂಚನೆ ನೀಡಿದ್ದಾರೆ.
Team India: ಐಪಿಎಲ್ 2023 ರ ಮೂಲಕ ಟೀಂ ಇಂಡಿಯಾಗೆ ಅದ್ಭುತ ಬ್ಯಾಟ್ಸ್ ಮನ್ ಒಬ್ಬರ ಪರಿಚಯವಾಗಿದೆ. ಈತನ ಆಟ ನೋಡಿದ್ರೆ ಯುವರಾಜ್ ಸಿಂಗ್ ನೆನಪಾಗೋದು ಖಂಡಿತ. ಅಷ್ಟೊಂದು ಪವರ್ ಹಿಟ್ಟರ್ ಬ್ಯಾಟ್ಸ್‌ಮನ್ ಇವರು. ಈ ಡ್ಯಾಶಿಂಗ್ ಕ್ರಿಕೆಟಿಗ ಮೈದಾನದಲ್ಲಿ ಎಷ್ಟು ಮಾರಣಾಂತಿಕವಾಗಿದ್ದಾರೆ ಎಂದರೆ ತಮ್ಮ ಬ್ಯಾಟಿಂಗ್ ಪವರ್ ಮೂಲಕ ಭಾರತವನ್ನು ವಿಶ್ವದ ಅತ್ಯುತ್ತಮ ತಂಡವನ್ನಾಗಿ ಮಾಡೋದು ಕನ್ಫರ್ಮ್.
ಇನ್ನು ಈ ಬ್ಯಾಟ್ಸ್‌ಮನ್ ಶೀಘ್ರದಲ್ಲೇ ಟೀಮ್ ಇಂಡಿಯಾಕ್ಕೆ ಪ್ರವೇಶ ಪಡೆಯಲಿದ್ದಾರೆ. ಐಪಿಎಲ್ 2023 ರಲ್ಲಿ ಈ ಮಾರಕ ಬ್ಯಾಟ್ಸ್’ಮನ್’ನ ಸ್ಫೋಟಕ ಬ್ಯಾಟಿಂಗ್ ನೋಡಿ, ಬಿಸಿಸಿಐ ಕಾರ್ಯದರ್ಶಿ ಜೈ ಶಾ ಕೂಡ ಸಂತೋಷಪಟ್ಟಿದ್ದಾರೆ. ಈ ಬಳಿಕ ಟ್ವೀಟ್ ಮಾಡಿದ ಅವರು ಯುವರಾಜ್ ಸಿಂಗ್ ಅವರಂತಹ ಡ್ಯಾಶಿಂಗ್ ಬ್ಯಾಟ್ಸ್ ಮನ್ ಟೀಂ ಇಂಡಿಯಾಗೆ ಎಂಟ್ರಿ ಕೊಡುವ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: CSK vs DC: ಡೆಲ್ಲಿ ವಿರುದ್ಧ ಗೆದ್ದರೂ ಈ ರೀತಿ ಹೇಳಿಕೆ ನೀಡಿದ ಎಂಎಸ್ ಧೋನಿ! ಯಾಕೆ ಇಂಥಾ ಮಾತು?
ಈ ಆಟಗಾರನ ಬ್ಯಾಟಿಂಗ್ ಶೈಲಿಯನ್ನು ನೋಡಿದ್ರೆ ಸ್ವಲ್ಪಮಟ್ಟಿಗೆ ಯುವರಾಜ್ ಸಿಂಗ್ ಅವರಂತೆಯೇ ಇದ್ದಾರೆ. ಗುರುವಾರ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ, ಈ ಬ್ಯಾಟ್ಸ್‌ಮನ್ ಬ್ಯಾಟ್ ನೊಂದಿಗೆ ಬಿರುಗಾಳಿ ಎಬ್ಬಿಸಿದ್ದು ಎಲ್ಲರೂ ಅವರನ್ನು ಹೊಗಳುತ್ತಿದ್ದಾರೆ. ನಾವು ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ 13 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಇತಿಹಾಸ ಸೃಷ್ಟಿಸಿದ ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಬಗ್ಗೆ ಮಾತನಾಡುತ್ತಿದ್ದೇವೆ. ಈ ಹಿಂದೆ ಐಪಿಎಲ್ ನಲ್ಲಿ ಯಾವುದೇ ಬ್ಯಾಟ್ಸ್‌ಮನ್ ಇಷ್ಟು ವೇಗದ ಅರ್ಧಶತಕ ಬಾರಿಸಲು ಸಾಧ್ಯವಾಗಿರಲಿಲ್ಲ. ಈ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್ 47 ಎಸೆತಗಳಲ್ಲಿ 98 ರನ್ ಗಳಿಸಿ ಅಜೇಯ ಇನ್ನಿಂಗ್ಸ್ ಆಡಿದರು.
ಈ ಅವಧಿಯಲ್ಲಿ ಯಶಸ್ವಿ ಜೈಸ್ವಾಲ್ 13 ಬೌಂಡರಿ ಹಾಗೂ 5 ಸಿಕ್ಸರ್ ಬಾರಿಸಿದರು. ಯಶಸ್ವಿ ಜೈಸ್ವಾಲ್ ಅವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಕೂಡ 208.51 ಆಗಿದೆ. ಇವರ ಸ್ಫೋಟಕ ಇನ್ನಿಂಗ್ಸ್ ನೋಡಿದ ಬಿಸಿಸಿಐ ಕಾರ್ಯದರ್ಶಿ ಜೈ ಶಾ ಟ್ವೀಟ್ ಮಾಡಿ, “ಯುವ ಯಶಸ್ವಿ ಜೈಸ್ವಾಲ್ ಅವರ ವಿಶೇಷ ಇನ್ನಿಂಗ್ಸ್ ಇದಾಗಿದ್ದು, ಐಪಿಎಲ್ ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ್ದಾರೆ. ಅವರು ತಮ್ಮ ಆಟದ ಬಗ್ಗೆ ಅಪಾರ ತಾಳ್ಮೆ ಮತ್ತು ಉತ್ಸಾಹವನ್ನು ತೋರಿದ್ದಾರೆ. ಇತಿಹಾಸ ಸೃಷ್ಟಿಸಿದ್ದಕ್ಕೆ ಅಭಿನಂದನೆಗಳು. ಭವಿಷ್ಯದಲ್ಲಿಯೂ ನೀವು ಈ ಅತ್ಯುತ್ತಮ ಫಾರ್ಮ್ ಅನ್ನು ಮುಂದುವರಿಸಿ” ಎಂದು ಹೇಳಿದ್ದಾರೆ.
ಯಶಸ್ವಿ ಜೈಸ್ವಾಲ್ ಪ್ರಸಕ್ತ ಐಪಿಎಲ್ ಋತುವಿನಲ್ಲಿ ಇದುವರೆಗೆ 12 ಇನ್ನಿಂಗ್ಸ್ ಗಳಲ್ಲಿ 575 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ 4 ಅರ್ಧ ಶತಕ ಮತ್ತು 1 ಶತಕ ಗಳಿಸಿದ್ದಾರೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಟ್ವೀಟ್ ನಲ್ಲಿ ಯಶಸ್ವಿ ಜೈಸ್ವಾಲ್ ಟೀಂ ಇಂಡಿಯಾ ಪ್ರವೇಶಿಸುವ ಸೂಚನೆ ನೀಡಿದ್ದಾರೆ. ಇದೇ ವೇಳೆ ಟೀಂ ಇಂಡಿಯಾದ ಮಾಜಿ ಕೋಚ್ ರವಿಶಾಸ್ತ್ರಿ, ಯಶಸ್ವಿ ಜೈಸ್ವಾಲ್ ಟೀಂ ಇಂಡಿಯಾ ಪರ ಆಡುವ ಸಮಯ ಬಂದಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: IPL 2023: ‘ಆ ದಿನಗಳ’ನ್ನು ನೆನಪಿಸಿದ ಕ್ಯಾಪ್ಟನ್ ಕೂಲ್! ಮೈದಾನದಲ್ಲಿ ಸಿಕ್ಸರ್ ಮಳೆ ಸುರಿಸಿದ ಧೋನಿ ವಿಡಿಯೋ ನೋಡಿ
ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧದ ಸ್ಫೋಟಕ ಇನ್ನಿಂಗ್ಸ್ ಗಾಗಿ ಯಶಸ್ವಿ ಜೈಸ್ವಾಲ್ ಅವರನ್ನು ಪ್ರಶಂಸಿಸಲಾಗುತ್ತಿದೆ. ಯಶಸ್ವಿ ಜೈಸ್ವಾಲ್ ಯುವರಾಜ್ ಸಿಂಗ್ ಅವರಂತೆ ಅಪಾಯಕಾರಿ ಮತ್ತು ಸ್ಟೈಲಿಸ್ಟ್ ಕ್ರಿಕೆಟಿಗ. ಯಶಸ್ವಿ ಜೈಸ್ವಾಲ್ ಗೆ ಟೀಂ ಇಂಡಿಯಾದಲ್ಲಿ ಆಡಲು ಅವಕಾಶ ನೀಡಿದರೆ, ಈ ವರ್ಷ ಭಾರತಕ್ಕೆ 2023 ರ ವಿಶ್ವಕಪ್ ಟ್ರೋಫಿಯನ್ನು ಗೆಲ್ಲಬಹುದು. ಯುವರಾಜ್ ಸಿಂಗ್ ಅವರು 2011 ರ ವಿಶ್ವಕಪ್ ಅನ್ನು ಭಾರತಕ್ಕೆ ಗೆದ್ದು ಕೊಟ್ಟಿದ್ದರು. ಅದೇ ರೀತಿ ಇವರು ಸಹ 2023 ರ ವಿಶ್ವಕಪ್ ಟ್ರೋಫಿಯನ್ನು ಭಾರತಕ್ಕೆ ಗೆದ್ದು ಕೊಡುವ ಸಾಮರ್ಥ್ಯ ಹೊಂದಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ