Team India: ಅಂದು ಯಶಸ್ಸು-ಇಂದು ಸೋಲು! ಟೀಂ ಇಂಡಿಯಾದ ಈ 3 ಸ್ಟಾರ್ ಕ್ರಿಕೆಟಿಗರ ವೃತ್ತಿಜೀವನ ಅಂತ್ಯ!
IPL 2023 News: IPL 2023ರ ಋತುವಿನಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ಇವರನ್ನು ಮುಂದಿನ ಸೀಸನ್ ನಲ್ಲಿ ಯಾವುದೇ ಫ್ರಾಂಚೈಸಿ ಖರೀದಿಸುವುದು ಅಸಾಧ್ಯ ಎಂದು ಹೇಳಲಾಗುತ್ತಿದೆ. ಇದುವರೆಗೆ ಈ ಸೀಸನ್ ನಲ್ಲಿ 47 ಪಂದ್ಯಗಳನ್ನು ಆಡಲಾಗಿದೆ. ಇದರಲ್ಲಿ 3 ಭಾರತೀಯ ಆಟಗಾರರ ಪ್ರದರ್ಶನವು ತುಂಬಾ ಕೆಟ್ಟದಾಗಿತ್ತು. ಆ ಮೂರು ಆಟಗಾರರ ಬಗ್ಗೆ ಇಲ್ಲಿ ಮಾಹಿತಿಯನ್ನು ನೀಡಲಿದ್ದೇವೆ.
IPL 2023 News: ಟೀಂ ಇಂಡಿಯಾದ 3 ಆಟಗಾರರ ಐಪಿಎಲ್ ವೃತ್ತಿಜೀವನ ಈಗ ಬಹುತೇಕ ಮುಗಿದಿದೆ ಎಂದು ಹೇಳಲಾಗುತ್ತಿದೆ. ಐಪಿಎಲ್‌ನಲ್ಲಿನ ಕಳಪೆ ಪ್ರದರ್ಶನದಿಂದಾಗಿ ಈ 3 ಕ್ರಿಕೆಟಿಗರು ಏಕಾಏಕಿ ಜಗತ್ತಿಗೆ ವಿಲನ್ ಆಗಿದ್ದಾರೆ. ಐಪಿಎಲ್ 2023ರ ಋತುವಿನಲ್ಲಿ ಈ 3 ಆಟಗಾರರು ಅವಕಾಶಗಳನ್ನು ವ್ಯರ್ಥ ಮಾಡುವ ಮೂಲಕ ತಮ್ಮ ಅಂತ್ಯಕ್ಕೆ ತಾವೇ ನಾಂದಿ ಹಾಡಿದಂತಾಗಿದೆ.
IPL 2023ರ ಋತುವಿನಲ್ಲಿ ಕಳಪೆ ಪ್ರದರ್ಶನ ತೋರುತ್ತಿರುವ ಇವರನ್ನು ಮುಂದಿನ ಸೀಸನ್ ನಲ್ಲಿ ಯಾವುದೇ ಫ್ರಾಂಚೈಸಿ ಖರೀದಿಸುವುದು ಅಸಾಧ್ಯ ಎಂದು ಹೇಳಲಾಗುತ್ತಿದೆ. ಇದುವರೆಗೆ ಈ ಸೀಸನ್ ನಲ್ಲಿ 47 ಪಂದ್ಯಗಳನ್ನು ಆಡಲಾಗಿದೆ. ಇದರಲ್ಲಿ 3 ಭಾರತೀಯ ಆಟಗಾರರ ಪ್ರದರ್ಶನವು ತುಂಬಾ ಕೆಟ್ಟದಾಗಿತ್ತು. ಆ ಮೂರು ಆಟಗಾರರ ಬಗ್ಗೆ ಇಲ್ಲಿ ಮಾಹಿತಿಯನ್ನು ನೀಡಲಿದ್ದೇವೆ.
ಇದನ್ನೂ ಓದಿ: 12 ವರ್ಷಗಳ ಬಳಿಕ ಚಂದ್ರಗ್ರಹಣದಂಡು ಅದ್ಭುತ ಸಂಯೋಗ, ಈ ರಾಶಿಯವರಿಗೆ ಸಿರಿವಂತರಾಗುವ ಯೋಗ
ಮನೀಶ್ ಪಾಂಡೆ: ಅಂತರಾಷ್ಟ್ರೀಯ ಕ್ರಿಕೆಟ್ ನಂತೆ ಮನೀಶ್ ಪಾಂಡೆ ಅವರ ಐಪಿಎಲ್ ವೃತ್ತಿಜೀವನವೂ ಕೊನೆಗೊಳ್ಳುವ ಹಂತ ತಲುಪಿದೆ. ಐಪಿಎಲ್ 2023ರಲ್ಲಿ ಇಲ್ಲಿಯವರೆಗೆ, ಮನೀಶ್ ಪಾಂಡೆ ಅವರು ಆಡಿರುವ 7 ಪಂದ್ಯಗಳಲ್ಲಿ 19 ರ ಅತ್ಯಂತ ಕಳಪೆ ಸರಾಸರಿಯಲ್ಲಿ ಕೇವಲ 133 ರನ್ ಗಳಿಸಲು ಸಮರ್ಥರಾಗಿದ್ದಾರೆ. ಈ ಸೀಸನ್ ನಲ್ಲಿ ಅವರ ಪ್ರದರ್ಶನ ಸಾಕಷ್ಟು ನಿರಾಶಾದಾಯಕವಾಗಿದೆ. ಮನೀಶ್ ಪಾಂಡೆ ತಂಡದಲ್ಲಿದ್ದರೂ ಇಲ್ಲದಿದ್ದರೂ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಯಾವುದೇ ವ್ಯತ್ಯಾಸ ಕಂಡುಬಂದಿರಲಿಲ್ಲ. ಮನೀಶ್ ಪಾಂಡೆ ತಮಗೆ ಸಿಗುತ್ತಿರುವ ಸುವರ್ಣಾವಕಾಶಗಳನ್ನು ಕೆಟ್ಟದಾಗಿ ಹಾಳು ಮಾಡಿಕೊಂಡಿದ್ದಾರೆ. ಬಹುಶಃ ಈ ವರ್ಷ ತಮ್ಮ ಕೊನೆಯ ಐಪಿಎಲ್ ಋತುವನ್ನು ಆಡುತ್ತಿದ್ದಾರೆ ಏನೋ ಎಂಬಂತೆ ಕಾಣುತ್ತಿದೆ. ಮುಂದಿನ ವರ್ಷ ಐಪಿಎಲ್ 2024 ರ ಹರಾಜಿಗೆ ಮನೀಶ್ ಪಾಂಡೆಯನ್ನು ಖರೀದಿಸಲು ಯಾವುದೇ ತಂಡವು ಬಯಸುವುದಿಲ್ಲ. ಡೆಲ್ಲಿ ಕ್ಯಾಪಿಟಲ್ಸ್ ಈ ವರ್ಷ ಮನೀಶ್ ಪಾಂಡೆ ಮೇಲೆ ಹೆಚ್ಚಿನ ನಂಬಿಕೆಯನ್ನು ತೋರಿಸಿದ್ದು, ಅದನ್ನು ಅವರು ಹುಸಿ ಮಾಡಿದ್ದಾರೆ.
ಮಯಾಂಕ್ ಅಗರ್ವಾಲ್: ಮಯಾಂಕ್ ಅಗರ್ವಾಲ್ ಅವರ ಕಳಪೆ ಪ್ರದರ್ಶನದಿಂದಾಗಿ ಟೀಂ ಇಂಡಿಯಾದಿಂದ ಕೈಬಿಡಲಾಗಿದೆ. ಆದರೆ ಈಗ IPL 2023 ರಲ್ಲಿ ಅತ್ಯಂತ ಕಳಪೆ ಪ್ರದರ್ಶನದ ನಂತರ, ಅವರ ಕ್ರಿಕೆಟ್ ವೃತ್ತಿಜೀವನವು ಶೀಘ್ರದಲ್ಲೇ ಕೊನೆಗೊಳ್ಳಬಹುದು. ಐಪಿಎಲ್ 2023 ರಲ್ಲಿ, ಮಯಾಂಕ್ ಅಗರ್ವಾಲ್ ತಮ್ಮ 9 ಪಂದ್ಯಗಳಲ್ಲಿ 20.78 ರ ಅತ್ಯಂತ ಕಳಪೆ ಸರಾಸರಿಯಲ್ಲಿ 187 ರನ್ ಗಳಿಸಿದ್ದಾರೆ. ಐಪಿಎಲ್ 2023 ರ ಋತುವಿನಲ್ಲಿ ಮಯಾಂಕ್ ಅಗರ್ವಾಲ್ ಇದುವರೆಗೆ ಕೇವಲ 27, 8, 21, 9, 48, 2, 49, 5 ಮತ್ತು 18 ರನ್ ಗಳಿಸಲು ಸಮರ್ಥರಾಗಿದ್ದಾರೆ. ಮಯಾಂಕ್ ಅಗರ್ವಾಲ್ ಐಪಿಎಲ್ 2023 ಸೀಸನ್ ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡದ ಪರವಾಗಿ ಆಡುತ್ತಿದ್ದಾರೆ. ಆದರೆ ಇಡೀ ಪಂದ್ಯದಲ್ಲಿ ಅವರ ಪ್ರದರ್ಶನ ಹೇಳಿಕೊಳ್ಳುವಷ್ಟು ಉತ್ತಮವಾಗಿರಲಿಲ್ಲ. ಈ ಕಳಪೆ ಪ್ರದರ್ಶನದ ಆಧಾರದ ಮೇಲೆ ಯಾವುದೇ ಐಪಿಎಲ್ ತಂಡವು ಮುಂದಿನ ವರ್ಷ ಅವರನ್ನು ಖರೀದಿಸಲು ಮುಂದೆ ಬರುವುದು ಡೌಟ್. ಐಪಿಎಲ್ 2023 ರ ಸೀಸನ್ ನಲ್ಲಿ ಮಯಾಂಕ್ ಅಗರ್ವಾಲ್ ಅವರನ್ನು ಸನ್ ರೈಸರ್ಸ್ ಹೈದರಾಬಾದ್ ತಂಡ ಖರೀದಿಸಿತ್ತು. ಆದರೆ ಮಯಾಂಕ್ ಕಳಪೆ ಪ್ರದರ್ಶನ ಇಡೀ ತಂಡಕ್ಕೆ ಮುಳುವಾದಂತೆ ಪರಿಣಮಿಸಿದೆ,
ಇದನ್ನೂ ಓದಿ: IPL 2023: ಮತ್ತೆ ಕಿಚ್ಚು ಹಚ್ಚಿದ ಗಂಭೀರ್! ಕೊಹ್ಲಿ ವಿರುದ್ಧ ಟ್ವೀಟ್ ಮಾಡಿ ಸಂಚಲನ ಸೃಷ್ಟಿಸಿದ ಗೌತಮ್
ಮಂದೀಪ್ ಸಿಂಗ್: ಮಂದೀಪ್ ಸಿಂಗ್ ಐಪಿಎಲ್ 2023 ರಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಬ್ಯಾಟ್ಸ್‌ಮನ್. ಆಡಿರುವ 3 ಪಂದ್ಯಗಳಲ್ಲಿ 4.67 ರ ಅತ್ಯಂತ ಕಳಪೆ ಸರಾಸರಿಯಲ್ಲಿ 14 ರನ್ ಗಳಿಸಿದ್ದಾರೆ. ಐಪಿಎಲ್ 2023 ರಲ್ಲಿ ಯಾವುದೇ ಬ್ಯಾಟ್ಸ್‌ಮನ್ ಅಷ್ಟು ಕಳಪೆ ಪ್ರದರ್ಶನ ನೀಡಿಲ್ಲ. ಐಪಿಎಲ್ 2023 ರ ಋತುವಿನಲ್ಲಿ ಇದುವರೆಗೆ ಕೇವಲ 2, 0 ಮತ್ತು 12 ರನ್ ಗಳಿಸಲು ಶಕ್ತರಾಗಿದ್ದಾರೆ. 31ರ ಹರೆಯದ ಬ್ಯಾಟ್ಸ್‌ಮನ್ ಮಂದೀಪ್ ಸಿಂಗ್ ಗೆ ಐಪಿಎಲ್ ನಲ್ಲಿ ಸಾಕಷ್ಟು ಅವಕಾಶಗಳು ಬಂದಿದ್ದವು. ಆದರೆ ಅದನ್ನು ಅವರು ವ್ಯರ್ಥ ಮಾಡಿಕೊಂಡಿದ್ದಾರೆ. ಐಪಿಎಲ್ 2023 ರಲ್ಲಿ ಇವರ ಈ ಫ್ಲಾಪ್ ಶೋ ನೋಡಿದವರು, ಮಂದೀಪ್ ಸಿಂಗ್ ಐಪಿಎಲ್ ವೃತ್ತಿಜೀವನವು ಈ ಋತುವಿನಲ್ಲಿ ಕೊನೆಗೊಳ್ಳುತ್ತದೆ ಎಂದು ಹೇಳುತ್ತಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj