IPL 2023: ಮತ್ತೆ ಕಿಚ್ಚು ಹಚ್ಚಿದ ಗಂಭೀರ್! ಕೊಹ್ಲಿ ವಿರುದ್ಧ ಟ್ವೀಟ್ ಮಾಡಿ ಸಂಚಲನ ಸೃಷ್ಟಿಸಿದ ಗೌತಮ್

Gautam Gambhir Tweet on Virat Kohli: ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವೆ ಪಂದ್ಯದ ನಂತರ ಹೈ ಡ್ರಾಮ ಕಂಡುಬಂದಿದೆ. ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಅವರ ಈ ಘಟನೆಯು ಐಪಿಎಲ್ 2023 ರಲ್ಲಿ ಗದ್ದಲವನ್ನು ಸೃಷ್ಟಿಸಿದೆ. ಈ ಮಧ್ಯೆ ಮಧ್ಯ ಪ್ರವೇಶಿಸಿರುವ ಬಿಸಿಸಿಐ ಕೂಡ ಕಠಿಣ ಕ್ರಮ ಕೈಗೊಂಡಿದ್ದು, ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಅವರ ಪಂದ್ಯ ಶುಲ್ಕದ ಶೇಕಡಾ 100 ರಷ್ಟು ದಂಡ ವಿಧಿಸಿದೆ.

Written by - Bhavishya Shetty | Last Updated : May 4, 2023, 02:18 PM IST
    • ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವೆ ಪಂದ್ಯದ ನಂತರ ಹೈ ಡ್ರಾಮ ಕಂಡುಬಂದಿದೆ
    • ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ
    • ಈ ವಿವಾದ ನಡೆದು 2 ದಿನ ಕಳೆದರೂ ಗೌತಮ್ ಗಂಭೀರ್ ಕೋಪ ತಣ್ಣಗಾಗಿಲ್ಲ ಎಂದೆನಿಸುತ್ತದೆ
IPL 2023: ಮತ್ತೆ ಕಿಚ್ಚು ಹಚ್ಚಿದ ಗಂಭೀರ್! ಕೊಹ್ಲಿ ವಿರುದ್ಧ ಟ್ವೀಟ್ ಮಾಡಿ ಸಂಚಲನ ಸೃಷ್ಟಿಸಿದ ಗೌತಮ್ title=
Gautam Gambhir

Gautam Gambhir Tweet on Virat Kohli: ಐಪಿಎಲ್ 2023ರಲ್ಲಿ ಕ್ರಿಕೆಟ್ ಕ್ರೇಜ್ ಒಂದೆಡೆಯಾದ್ರೆ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಕಾದಾಟದ ಬಿಸಿ ದಿನೇ ದಿನೇ ಹೆಚ್ಚಾಗುತ್ತಿರುವುದು ಮತ್ತೊಂದೆಡೆಯಾಗಿದೆ. ಇಲ್ಲಿಯವರೆಗೆ ಈ ಕಾದಾಟದ ಎಫೆಕ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತಿತ್ತು. ಐಪಿಎಲ್ 2023ರಲ್ಲಿ ಸೋಮವಾರ ನಡೆದ ಪಂದ್ಯದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಬ್ಯಾಟ್ಸ್‌ ಮನ್ ವಿರಾಟ್ ಕೊಹ್ಲಿ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಮೆಂಟರ್ ಗೌತಮ್ ಗಂಭೀರ್ ನಡುವೆ ತೀವ್ರ ಮಾತಿನ ಚಕಮಕಿ ನಡೆದಿದೆ.

ಇದನ್ನೂ ಓದಿ: Rashmika mandanna : ಮತ್ತೊಬ್ಬ ತೆಲುಗು ನಟನ ಜೊತೆ ʼರಶ್ಮಿಕಾ ಡೇಟಿಂಗ್‌ʼ..! ಕೊನೆಗೂ ಗುಟ್ಟು ರಟ್ಟು..

ಈ ಪಂದ್ಯದ ನಂತರ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವೆ ಪಂದ್ಯದ ನಂತರ ಹೈ ಡ್ರಾಮ ಕಂಡುಬಂದಿದೆ. ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಅವರ ಈ ಘಟನೆಯು ಐಪಿಎಲ್ 2023 ರಲ್ಲಿ ಗದ್ದಲವನ್ನು ಸೃಷ್ಟಿಸಿದೆ. ಈ ಮಧ್ಯೆ ಮಧ್ಯ ಪ್ರವೇಶಿಸಿರುವ ಬಿಸಿಸಿಐ ಕೂಡ ಕಠಿಣ ಕ್ರಮ ಕೈಗೊಂಡಿದ್ದು, ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ಅವರ ಪಂದ್ಯ ಶುಲ್ಕದ ಶೇಕಡಾ 100 ರಷ್ಟು ದಂಡ ವಿಧಿಸಿದೆ.

ವಿರಾಟ್ ಕೊಹ್ಲಿ ಜತೆಗಿನ ಈ ವಿವಾದ ನಡೆದು 2 ದಿನ ಕಳೆದರೂ ಗೌತಮ್ ಗಂಭೀರ್ ಕೋಪ ತಣ್ಣಗಾಗಿಲ್ಲ ಎಂದೆನಿಸುತ್ತದೆ. ಇದೀಗ ಟ್ವೀಟ್ ಒಂದರ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದಾರೆ. ಗೌತಮ್ ಗಂಭೀರ್ ಮಾಜಿ ಡಿಡಿಸಿಎ ಅಧ್ಯಕ್ಷ ಮತ್ತು ವಿರಾಟ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಡಿಡಿಸಿಎ ಮಾಜಿ ಅಧ್ಯಕ್ಷರು ಟಿವಿ ಚಾನೆಲ್‌ ನ ಸಂಪಾದಕರೂ ಆಗಿದ್ದಾರೆ. ಈ ವ್ಯಕ್ತಿ ತಮ್ಮ ಕಾರ್ಯಕ್ರಮದ ವೇಳೆ ಗೌತಮ್ ಗಂಭೀರ್ ಮೇಲೆ ವಾಗ್ದಾಳಿ ನಡೆಸಿದ್ದರು. ಇದೀಗ ಆತನ ಮಾತುಗಳಿಗೆ ಗಂಭೀರ್ ಉತ್ತರಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಗೌತಮ್ ಗಂಭೀರ್, “ದೆಹಲಿ ಕ್ರಿಕೆಟ್‌ನಿಂದ ಓಡಿಹೋದ ವ್ಯಕ್ತಿ ಈಗ ಸಂಚಲನ ಸೃಷ್ಟಿಸುತ್ತಿದ್ದಾರೆ. ಕ್ರಿಕೆಟ್ ಬಗ್ಗೆ ತಮ್ಮ ಕಾಳಜಿಯನ್ನು ವ್ಯಕ್ತಪಡಿಸುವ ರೂಪದಲ್ಲಿ Paid PR ಕೆಲಸದಲ್ಲಿ ತೊಡಗಿಸಿಕೊಂಡಿರುವಂತೆ ಕಾಣುತ್ತದೆ. ಇದು ಕಲಿಯುಗ. ಪಲಾಯನಗೈದವರು ತಮ್ಮ ನ್ಯಾಯಾಲಯವನ್ನು ಎಲ್ಲಿ ನಡೆಸುತ್ತಾರೆ” ಎಂದು ವ್ಯಂಗ್ಯವಾದ ಮಾತುಗಳನ್ನಾಡಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ಐಪಿಎಲ್ ಪಂದ್ಯದ ನಂತರ, ಪರಸ್ಪರ ಕಿತ್ತಾಡಿಕೊಂಡಿರುವುದು ಅಸಹನೀಯವಾಗಿ ಕಂಡಿತ್ತು. ಒಬ್ಬರಿಗೊಬ್ಬರು ಕಿತ್ತಾಡಿಕೊಂಡಿರುವ ಈ ದೃಶ್ಯ ಸಂಪೂರ್ಣವಾಗಿ ಕ್ಯಾಮರಾದಲ್ಲಿ ಸೆರೆಯಾಗಿದೆ,

ಇದನ್ನೂ ಓದಿ: Ponniyin Selvan 2 Collection: 4 ದಿನಗಳಲ್ಲಿ 200 ಕೋಟಿ ಮೀರಿದ ಪೊನ್ನಿಯಿನ್ ಸೆಲ್ವನ್ 2 ಕಲೆಕ್ಷನ್!‌

ಸೋಮವಾರ ರಾತ್ರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್‌ ಜೈಂಟ್ಸ್ ನಡುವಿನ ಪಂದ್ಯದ ವೇಳೆ ಜಗಳ ಪ್ರಾರಂಭವಾಯಿತು. ಈ ಗಲಾಟೆಗೆ ಸಂಬಂಧಿಸಿದಂತೆ ಅನೇಕ  ಅಭಿಪ್ರಾಯಗಳು ಕೇಳಿಬರುತ್ತಿದೆ.  

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News