Most Wickets in IPL: ಇಂದು ಲಖನೌ ಮತ್ತು ಗುಜರಾತ್ ನಡುವೆ ನಡೆದ ಅತ್ಯಂತ ರೋಚಕವಾದ ಪಂದ್ಯದಲ್ಲಿ ಗುಜರಾತ್ ಸಖತ್ ತಿರುಗೇಟು ನೀಡಿತು. ಕೊನೆಯ ಓವರ್ ಬೌಲಿಂಗ್ ಮಾಡುವಾಗ 2 ವಿಕೆಟ್ ಕಬಳಿಸಿದ ಮೋಹಿತ್ ಶರ್ಮಾ ಅದೇ ಓವರ್‌’ನಲ್ಲಿ 2 ರನೌಟ್ ಮಾಡಿ, ಗುಜರಾತ್ ಟೈಟಾನ್ಸ್ ಗೆಲುವಿನ ಹೀರೋ ಆಗಿದ್ದರು. ಅವರ ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ವಿಕೆಟ್‌’ಗಳು ಬಿದ್ದವು. ಆದರೆ, ಐಪಿಎಲ್ ಇತಿಹಾಸದಲ್ಲಿ ಲೆಜೆಂಡರಿ ಬೌಲರ್ ಲಸಿತ್ ಮಾಲಿಂಗ ಅವರನ್ನು ಸರಿಗಟ್ಟಿದ ಆಟಗಾರನೊಬ್ಬನಿದ್ದಾನೆ.


COMMERCIAL BREAK
SCROLL TO CONTINUE READING

ಬಹಳ ದಿನಗಳಿಂದ ಟೀಂ ಇಂಡಿಯಾದಲ್ಲಿ ಅವಕಾಶಕ್ಕಾಗಿ ಕಾಯುತ್ತಿದ್ದ ಲಕ್ನೋ ಸೂಪರ್ ಜೈಂಟ್ಸ್ ಸ್ಪಿನ್ನರ್ ಅಮಿತ್ ಮಿಶ್ರಾ ತಮ್ಮ ಹೆಸರಿನಲ್ಲಿ ದೊಡ್ಡ ದಾಖಲೆಯನ್ನು ಬರೆದಿದ್ದಾರೆ. ಅವರು ಇದೀಗ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌’ಗಳಲ್ಲಿ ಲಸಿತ್ ಮಾಲಿಂಗಗೆ ಸಮನಾಗಿ ಬಂದಿದ್ದಾರೆ.


ಇದನ್ನೂ ಓದಿ: Electricity bill: ಮನೆಯಲ್ಲಿ ಜಸ್ಟ್ 299 ರೂ.ನ ಈ ಸಾಧನ ಅಳವಡಿಸಿದ್ರೆ ಜೀವಮಾನಪೂರ್ತಿ ಕರೆಂಟ್ ಉಚಿತ! ಬಿಲ್ ಬರೋದೇ ಇಲ್ಲ


ಲಸಿತ್ ಮಾಲಿಂಗ ಐಪಿಎಲ್‌’ನಲ್ಲಿ 170 ವಿಕೆಟ್ ಪಡೆದಿದ್ದಾರೆ. ಈ ಪಂದ್ಯದಲ್ಲಿ ಅಮಿತ್ ಮಿಶ್ರಾ 1 ವಿಕೆಟ್ ಪಡೆದ ತಕ್ಷಣ, ಅವರು ಮುಂಬೈ ಇಂಡಿಯನ್ಸ್‌ನ ದಂತಕಥೆ ಬೌಲರ್ ಲಸಿತ್ ಮಾಲಿಂಗ ಅವರನ್ನು ಸರಿಗಟ್ಟಿದರು. ಐಪಿಎಲ್‌’ನಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಜಂಟಿಯಾಗಿ ಮೂರನೇ ಸ್ಥಾನದಲ್ಲಿದ್ದಾರೆ.


ಇವರು ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ಗಳು:


ಡ್ವೇನ್ ಬ್ರಾವೋ ಅವರ ಹೆಸರು ಐಪಿಎಲ್‌’ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌’ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಇವರು ಚೆನ್ನೈ ಸೂಪರ್ ಕಿಂಗ್ಸ್ ಪರ ದೀರ್ಘಕಾಲ ಆಡುತ್ತಿದ್ದವರು. ಐಪಿಎಲ್‌’ನಲ್ಲಿ 183 ವಿಕೆಟ್‌’ಗಳನ್ನು ಕಬಳಿಸಿದ್ದಾರೆ, ಈ ಸೀಸನ್’ನಲ್ಲಿ ರಾಜಸ್ಥಾನ ರಾಯಲ್ಸ್‌’ಗಾಗಿ ಆಡುತ್ತಿರುವ ಯುಜ್ವೇಂದ್ರ ಚಹಾಲ್ ಇದುವರೆಗೆ 177 ವಿಕೆಟ್‌ಗಳನ್ನು ಕಬಳಿಸಿದ್ದು, ಎರಡನೇ ಸ್ಥಾನದಲ್ಲಿದ್ದಾರೆ. ಇನ್ನುಳಿದಂತೆ ಲಸಿತ್ ಮಾಲಿಂಗ ಮತ್ತು ಅಮಿತ್ ಮಿಶ್ರಾ ಜಂಟಿಯಾಗಿ ಮೂರನೇ ಸ್ಥಾನದಲ್ಲಿದ್ದಾರೆ. ಇಬ್ಬರ ಹೆಸರಲ್ಲೂ 170 ವಿಕೆಟ್‌ಗಳಿದ್ದರೂ, ಮುಂಬರುವ ಪಂದ್ಯಗಳಲ್ಲಿ ಅಮಿತ್ ಮಿಶ್ರಾ ಮಾಲಿಂಗ ದಾಖಲೆಯನ್ನು ಮುರಿಯುವುದು ಪಕ್ಕಾ ಆಗಿದೆ.


ಇದನ್ನೂ ಓದಿ: ಕಡಿಮೆ ವಿದ್ಯುತ್ ಬಳಕೆ; ಭಾರೀ ಅಗ್ಗದ ಬೆಲೆಯಲ್ಲಿ.. ಬೇಸಿಗೆಯಲ್ಲೂ ಕಾಶ್ಮೀರದ ಅನುಭವ ನೀಡುತ್ತೆ ಈ ಪುಟ್ಟ Air Cooler


ಕೊನೆಯ ಓವರ್‌ನಲ್ಲಿ ಗುಜರಾತ್ ಗೆಲುವು:


ಈ ರೋಚಕ ಪಂದ್ಯದಲ್ಲಿ ಮೋಹಿತ್ ಶರ್ಮಾ ಕೊನೆಯ ಓವರ್‌’ನಲ್ಲಿ ಗುಜರಾತ್ ಟೈಟಾನ್ಸ್‌’ಗೆ ಜಯ ತಂದುಕೊಟ್ಟರು. ಕೊನೆಯ ಓವರ್‌’ನಲ್ಲಿ ಲಕ್ನೋ ತಂಡಕ್ಕೆ 12 ರನ್‌’ಗಳ ಅಗತ್ಯವಿದ್ದು, ಕೆಎಲ್ ರಾಹುಲ್ (66) ಮತ್ತು ಆಯುಷ್ ಬದೋನಿ (8) ಕ್ರೀಸ್‌ನಲ್ಲಿದ್ದರು. ಬೌಲಿಂಗ್ ಮಾಡಲು ಬಂದ ಮೋಹಿತ್ ಶರ್ಮಾ ಅವರ ಮೊದಲ ಎಸೆತದಲ್ಲಿ ರಾಹುಲ್ ಎರಡು ರನ್ ಗಳಿಸಿದರು. ಇದಾದ ಬಳಿಕ ಸತತ ನಾಲ್ಕು ಎಸೆತಗಳಲ್ಲಿ ಮೋಹಿತ್ ಅ ನಾಲ್ಕು ವಿಕೆಟ್’ಗಳನ್ನು ಕಿತ್ತರು. ಈ ಮೂಲಕ ಗುಜರಾತ್ 7 ರನ್‌ಗಳ ಜಯ ಸಾಧಿಸಿತು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ