CSK Loss, Ben Stokes Injury Update: ಅನುಭವಿ ಮಹೇಂದ್ರ ಸಿಂಗ್ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡಕ್ಕೆ ದೊಡ್ಡ ಹಿನ್ನಡೆ ಅನುಭವಿಸಿದಂತಾಗಿದೆ. IPL-2023 ರಲ್ಲಿ ತಂಡವು ತನ್ನ ಮುಂದಿನ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಏಪ್ರಿಲ್ 17 ರಂದು ಆಡಬೇಕಾಗಿದೆ. ಇದಕ್ಕೂ ಮುನ್ನ ದೊಡ್ಡ ಅಪ್‌ಡೇಟ್‌ ಹೊರಬಿದ್ದಿದೆ. ತಂಡದ ಅನುಭವಿ ಆಟಗಾರನನ್ನು ಮುಂದಿನ ಹಲವು ಪಂದ್ಯಗಳಿಂದ ಹೊರಗಿಡಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: IPL 2023: ಕ್ರೀಡಾ ಜಗತ್ತಿನ ದೈತ್ಯರನ್ನೂ ಹಿಂದಿಕ್ಕಿ ಈ ವಿಷಯದಲ್ಲಿ ನಂ.1 ಆದ ಕಗಿಸೊ ರಬಾಡ!


ಚೆನ್ನೈ ತಂಡ ಐಪಿಎಲ್-2023ರಲ್ಲಿ ಇದುವರೆಗೆ 4 ಪಂದ್ಯಗಳನ್ನು ಆಡಿದೆ. ಈ ಪೈಕಿ ಎರಡರಲ್ಲಿ ಗೆದ್ದಿದ್ದರೆ ಎರಡು ಪಂದ್ಯಗಳು ಸೋತಿವೆ. ಚೆನ್ನೈ ತನ್ನ ತವರು ನೆಲ ಚೆಪಾಕ್ ಕ್ರೀಡಾಂಗಣದಲ್ಲಿ ನಡೆದ ತನ್ನ ಕೊನೆಯ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಲನುಭವಿಸಿತ್ತು. ಈಗ ತಂಡವು ತನ್ನ ಮುಂದಿನ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಏಪ್ರಿಲ್ 17 ರಂದು ಆಡಬೇಕಾಗಿದೆ. ಇದಕ್ಕೂ ಮುನ್ನ ತಂಡದ ಸಿಇಒ ಕಾಶಿ ವಿಶ್ವನಾಥನ್ ದೊಡ್ಡ ಮಾಹಿತಿ ನೀಡಿದ್ದಾರೆ.


ಆರ್‌’ಸಿಬಿ ವಿರುದ್ಧದ ಪಂದ್ಯಕ್ಕೂ ಮುನ್ನ ಚೆನ್ನೈನ ಸ್ಟಾರ್ ಆಟಗಾರನೊಬ್ಬ ಔಟ್ ಆಗಿದ್ದಾರೆ. ಕ್ರಿಕ್‌’ಬಜ್‌ನಲ್ಲಿನ ವರದಿಯ ಪ್ರಕಾರ, ಬೆನ್ ಸ್ಟೋಕ್ಸ್ ಕನಿಷ್ಠ ಮೂರು ಪಂದ್ಯಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ. ಇಂಗ್ಲೆಂಡ್ ಆಲ್ ರೌಂಡರ್ ಮತ್ತು ಟೆಸ್ಟ್ ನಾಯಕ ಬೆನ್ ಸ್ಟೋಕ್ಸ್ ಮೈದಾನಕ್ಕೆ ಮರಳಲು ಸಂಪೂರ್ಣ ಫಿಟ್ ಆಗಲು ಇನ್ನೂ ಒಂದು ವಾರ ಬೇಕಾಗುತ್ತದೆ ಎಂದು ಕಾಶಿ ವೆಬ್‌ಸೈಟ್‌’ಗೆ ತಿಳಿಸಿದ್ದಾರೆ. ಬೌಲಿಂಗ್ ಮಾಡುವಾಗ ಅವರ ಎಡ ಬೆರಳಿಗೆ ಗಾಯವಾಗಿದೆ ಎಂದು ಹೇಳಲಾಗುತ್ತಿದೆ.


ಇದನ್ನೂ ಓದಿ: Hardik Pandya: ಪಬ್ಲಿಕ್’ನಲ್ಲಿಯೇ ಕಿಸ್ ಮಾಡಿ ಭಾರೀ ಚರ್ಚೆಗೆ ಸಿಲುಕಿದ ಹಾರ್ದಿಕ್ ಪಾಂಡ್ಯ!


ಸಿ ಎಸ್‌ ಕೆ ಸಿಇಒ ಕಾಸಿ ವಿಶ್ವನಾಥನ್, "ಬೆನ್ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಅವರು ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಏಪ್ರಿಲ್ 30 ರ ಪಂದ್ಯಕ್ಕೆ ಖಂಡಿತವಾಗಿಯೂ ಫಿಟ್ ಆಗಿರಬೇಕು" ಎಂದು ಹೇಳಿದರು. ಚೆನ್ನೈ ತಂಡವು ಏಪ್ರಿಲ್ 30 ರಂದು ಪಂಜಾಬ್ ಕಿಂಗ್ಸ್ ವಿರುದ್ಧ ಚೆಪಾಕ್‌’ನಲ್ಲಿ ಪಂದ್ಯವನ್ನು ಆಡಲಿದೆ. ಸ್ಟೋಕ್ಸ್ ಮೊದಲೇ ಫಿಟ್ ಆಗಬಹುದು ಎಂದು ಅವರು ಆಶಿಸಿದ್ದಾರೆ. ಚೆನ್ನೈ ತಂಡವು ಏಪ್ರಿಲ್ 27 ರಂದು ರಾಜಸ್ಥಾನ್ ರಾಯಲ್ಸ್ ವಿರುದ್ಧ ಪಂದ್ಯವನ್ನು ಆಡಲಿದೆ. ಐಪಿಎಲ್ ಹರಾಜಿನಲ್ಲಿ ಅವರನ್ನು 16.25 ಕೋಟಿ ರೂ.ಗೆ ಖರೀದಿಸಲಾಗಿತ್ತು. ಸ್ಟೋಕ್ಸ್ ಈ ಋತುವಿನಲ್ಲಿ ಇದುವರೆಗೆ 2 ಪಂದ್ಯಗಳನ್ನು ಆಡಿದ್ದಾರೆ. ಅವರು ಎರಡು ಪಂದ್ಯಗಳಲ್ಲಿ 7 ಮತ್ತು 8 ರನ್ ಗಳಿಸಿದರು ಮತ್ತು ಕೇವಲ ಒಂದು ಓವರ್ ಬೌಲ್ ಮಾಡಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.